ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion Review 2026: ಗಮನ ಸೆಳೆದ ನಿಯಾ ಶರ್ಮಾ ಸಮ್ಮರ್‌ ಡಿಸೈನರ್‌ವೇರ್‌

ಆಗಾಗ್ಗೆ ವಿಭಿನ್ನ ಔಟ್‌ಫಿಟ್ಸ್ ಧರಿಸಿ, ಫಾಲೋವರ್ಸ್ ಗಮನ ಸೆಳೆಯುವ ನಟಿ ನಿಯಾ ಶರ್ಮಾ, ಈ ಬಾರಿ ಸ್ಲ್ಪಿಟ್‌ವಿಲ್ಲಾ ಎಕ್ಸ್6 ಕಾರ್ಯಕ್ರಮಕ್ಕಾಗಿ ವಿಶೇಷ ಸಮ್ಮರ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ಅವರ ಈ ಔಟ್‌ಫಿಟ್‌ ವಿಶೇ‍ಷತೆಯೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ನಿಯಾ ಶರ್ಮಾ, ನಟಿ
1/5

ನಿಯಾ ಶರ್ಮಾ ಧರಿಸಿದ್ಧ ಲೈಮ್‌ ಗ್ರೀನ್‌ ಡಿಸೈನರ್‌ವೇರ್‌ ಇದೀಗ ಎಲ್ಲರ ಗಮನ ಸೆಳೆದಿದೆ.

2/5

ಫ್ಯಾಷನೆಬಲ್‌ ನಿಯಾ ಶರ್ಮಾ

ಹೌದು, ಸದಾ ಒಂದಲ್ಲ ಒಂದು ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡು ಫ್ಯಾಷನ್‌ ಪ್ರಿಯರ ಮನ ಸೆಳೆಯುವ ನಟಿ ನಿಯಾ ಶರ್ಮಾ, ಈ ಬಾರಿ ಎಂ ಟಿವಿಯ ಸ್ಲ್ಪಿಟ್‌ವಿಲ್ಲಾ ಎಕ್ಸ್6 ಕಾರ್ಯಕ್ರಮಕ್ಕಾಗಿ ಸ್ಪೆಷಲ್‌ ಡಿಸೈನರ್‌ವೇರ್‌ ಧರಿಸಿದ್ದರು. ಅವರು ಧರಿಸಿದ್ಧ ಈ ಗ್ಲಾಮರಸ್‌ ಡಿಸೈನರ್‌ವೇರ್ ಸೀಸನ್‌ಗೆ ತಕ್ಕಂತಿರುವುದಲ್ಲದೇ, ಫ್ಯಾಷನ್‌ ಫಾಲೋವರ್‌ಗಳ ಮನಸೆಳೆದಿದೆ. ಜತೆಗೆ ಫ್ಯಾಷನ್‌ಲೋಕದಲ್ಲಿ ಈ ಶೈಲಿಯ ಉಡುಗೆಗಳಿಗೆ ಮತ್ತೇ ಬೇಡಿಕೆ ಕುದುರಿಸುವಂತೆ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ನಿಯಾ ಶರ್ಮಾ ಉಡುಗೆಯ ವಿಶೇಷತೆ

ಅಂದಹಾಗೆ, ನಿಯಾ ಶರ್ಮಾ ಧರಿಸಿರುವ ಈ ಡಿಸೈನರ್‌ವೇರ್‌ಗೆ ಸೂಕ್ತ ಹೆಸರು ಇಡಲಾಗುವುದಿಲ್ಲ! ಯಾಕೆಂದರೇ, ಇದೊಂದು ಮಿಕ್ಸ್ ಮ್ಯಾಚ್‌ ಡಿಸೈನ್‌ ಕಾನ್ಸೆಪ್ಟ್ ಹೊಂದಿರುವ ಉಡುಗೆ.

4/5

ತಕ್ಷಣಕ್ಕೆ ಶೀರ್‌ ಲೆಹೆಂಗಾ ಹಾಗೂ ಪ್ರೀ ಡ್ರೆಪ್ಡ್ ಸೀರೆಯ ಕಾನ್ಸೆಪ್ಟ್ ಹೋಲುತ್ತಿದ್ದರೂ ಇದು ಅದಲ್ಲ, ಉಡುಗೆ ಪಾದದವರೆಗೂ ಇಲ್ಲ! ಮೇಲ್ಭಾಗದಲ್ಲಿ ಕಾರ್ಸೆಟ್‌ ಶೈಲಿಯ ಬ್ಲೌಸ್ ಬಾಡೀಸ್‌ ಹೊಂದಿದೆ. ಇದಕ್ಕೆ ಹೊಂದುವಂತೆ ಅಟ್ಯಾಚ್‌ ಆಗಿರುವಂತೆಯೇ ಪ್ರೀ ಡ್ರೇಪ್ಡ್ ಸೀರೆಯ ಶೈಲಿಯಲ್ಲಿಯೇ ಮಿನಿ ಸ್ಕರ್ಟ್ ಇದಕ್ಕೆ ಜತೆಯಾಗಿದೆ.

5/5

ಅತ್ಯಾಕರ್ಷಕ ಸಮ್ಮರ್‌ ಡಿಸೈನರ್‌ವೇರ್‌

ಈ ಸೀಸನ್‌ಗೆ ಹೊಂದುವಂತಹ ತಿಳಿ ವರ್ಣದ ಲೈಮ್‌ ಗ್ರೀನ್ ಕಲರ್‌ನ ಈ ಡಿಸೈನರ್‌ವೇರ್‌ ಕಂಪ್ಲೀಟ್‌ ಕಸ್ಟಮೈಸ್ಡ್ ಡಿಸೈನ್‌ ಹೊಂದಿದ್ದು, ತ್ರೀ ಡಿ ಎಂಬಾಲಿಶ್‌ಮೆಂಟ್‌ ಕೂಡ ಒಳಗೊಂಡಿದೆ. ತಕ್ಷಣಕ್ಕೆ ನೋಡಲು ಶೀರ್ ವಿನ್ಯಾಸದಂತೆ ಕಾಣಿಸುತ್ತದೆ ಎನ್ನುವ ಫ್ಯಾಷನ್‌ ವಿಶ್ಲೇಷಕರು, ನಿಯಾ ಶರ್ಮಾಳ ಈ ಪ್ರಯೋಗಾತ್ಮಕ ಸೀಸನ್‌ವೇರನ್ನು ಹಾಡಿ ಹೊಗಳಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author