ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಟ್ವೀಡ್‌ ಜಾಕೆಟ್‌ನಲ್ಲಿ ಚಿತ್ರ ಖ್ಯಾತಿಯ ನಟಿ ರೇಖಾ ಹಾಟ್‌ ಲುಕ್‌

ಚಿತ್ರ ಹಾಗೂ ಹುಚ್ಚ ಸಿನಿಮಾದ ಮೂಲಕ ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ರೇಖಾ, ಈ ವಿಂಟರ್‌ನಲ್ಲಿ ಟ್ರೆಂಡಿಯಾಗಿರುವ ಟ್ವೀಡ್‌ ಚೆಕ್ಸ್ ಜಾಕೆಟ್‌ನಲ್ಲಿ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

ಚಿತ್ರ ಸಿನಿಮಾ ಖ್ಯಾತಿಯ ನಟಿ ರೇಖಾ
1/5

ಟ್ವೀಡ್‌ ಚೆಕ್ಸ್ ಜಾಕೆಟ್‌ನಲ್ಲಿ ಚಿತ್ರ ಸಿನಿಮಾ ಖ್ಯಾತಿಯ ನಟಿ ರೇಖಾ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

2/5

ಟ್ವೀಡ್‌ ಜಾಕೆಟ್‌ಗೂ ಗ್ಲಾಮರಸ್‌ ಟಚ್‌

ಅರೆ., ಅದು ಹೇಗೆ ಅಂತಿರಾ! ಜಾಕೆಟ್‌ ಧರಿಸಿ, ಹಾಟ್‌ ಆಗಿ ಕಾಣಿಸಲು ಸಾಧ್ಯವೇ! ಎಂದು ಯೋಚಿಸುತ್ತಿದ್ದೀರಾ! ಆದರೆ, ಇದು ಸತ್ಯ. ರೇಖಾ, ಈ ಜಾಕೆಟನ್ನು ಕೊಂಚ ಕೆಳಗಿಳಿಸಿ, ಕ್ಲಿವೇಜ್‌ ಕಾಣಿಸುವಂತೆ ಧರಿಸಿ, ಪೋಸ್‌ ನೀಡಿದ್ದಾರೆ. ಚಳಿಯ ನಡುವೆ ಬೆಚ್ಚಗಿಡುವ ಜಾಕೆಟನ್ನೇ ಕೊಂಚ ಗ್ಲಾಮರಸ್‌ ಆಗಿ ಧರಿಸಿ, ವಿಂಟರ್‌ ಫ್ಯಾಷನ್‌ನಲ್ಲೂ ಹೀಗೂ ಕಾಣಿಸಬಹುದು! ಎಂಬುದನ್ನು ತೋರಿಸಿದ್ದಾರೆ ರೇಖಾ.

3/5

ಚಿತ್ರ ಸಿನಿಮಾ ಖ್ಯಾತಿಯ ರೇಖಾ

ಕಳೆದ 2001 ರ ಸಮಯದಲ್ಲಿ ಜಿಂಕೆ ಮರಿ ಬಂದೈತೆ ನೋಡ್ಲೋ ಮಗಾ… ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿದ್ದ ಚಿತ್ರ ಸಿನಿಮಾ ಖ್ಯಾತಿಯ ರೇಖಾ, ಅಂದಿನ ದಿನಗಳಲ್ಲೆ ಸಖತ್‌ ಫ್ಯಾಷನೆಬಲ್‌ ನಟಿ ಎಂದೆನಿಸಿಕೊಂಡವರು. ಅಷ್ಟೇಕೆ! ಅಂದಿನ ಹುಡುಗರ ನಿದ್ದೆಗೆಡಿಸಿದವರು. ತದ ನಂತರ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದರೂ ಮತ್ಯಾಕೋ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ನಟಿಸಿದ್ದ ಕೆಲ ಸಿನಿಮಾಗಳು ಓಡಲಿಲ್ಲ! ಈ ಮಧ್ಯೆ ಬೇರೆ ಭಾಷೆಯಲ್ಲಿಯೂ ಕೂಡ ನಟಿಸಿದರು.

4/5

ಚಿತ್ರ ಧರಿಸಿದ ಟ್ವೀಡ್‌ ಚೆಕ್ಸ್ ಜಾಕೆಟ್‌

ಅಂದಹಾಗೆ, ರೇಖಾ ಈ ಫೋಟೋದಲ್ಲಿ ಧರಿಸಿರುವ ಟ್ವೀಡ್‌ ಜಾಕೆಟ್‌ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಜಾಕೆಟ್‌. ಲೇಯರ್‌ ಲುಕ್‌ ನೀಡಲು ಇದನ್ನು ಬಳಸಲಾಗುತ್ತದೆ. ವೈಟ್‌ ಮತ್ತು ಬ್ಲ್ಯಾಕ್‌ ಚೆಕ್ಸ್‌ನಿಂದಲೇ ಸೆಳೆಯುವ ಈ ಜಾಕೆಟ್ಟನ್ನು ರೇಖಾ ಔಟ್‌ಫಿಟ್‌ನಂತೆ ಧರಿಸಿದ್ದಾರೆ. ಡಿಫರೆಂಟ್‌ ಸ್ಟೈಲಿಂಗ್‌ ಮಾಡುವ ಮೂಲಕ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

5/5

ರೇಖಾ ಯಂಗ್‌ ಲುಕ್‌

ಅಂದಿಗೂ ಇಂದಿಗೂ ನೋಡಲು ಒಂದೇ ತರನಾಗಿ ಕಾಣಿಸುವ ರೇಖಾ ಇಂದಿಗೂ ತಮ್ಮ ಫಿಟ್ನೆಸ್‌ ಹಾಗೂ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ ಎಂಬುದಕ್ಕೆ ಅವರು ಅಪ್‌ಲೋಡ್‌ ಮಾಡುತ್ತಿರುವ ಫೋಟೋಗಳೇ ಸಾಕ್ಷಿ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಶೀಲಾ ಸಿ ಶೆಟ್ಟಿ

View all posts by this author