ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion Review 2026: ಸೀಸನ್‌ಗೆ ವಿರುದ್ಧವಾದ ಕ್ರಾಪ್‌ ಸ್ವೆಟರ್‌ ಧರಿಸಿದ ಅವನೀತ್‌

ಬೇಸಿಗೆಯಲ್ಲೂ ಕ್ರಾಪ್‌ ಸ್ವೆಟರ್‌ ಧರಿಸಿ ಹಾಟ್‌ ಪೋಸ್‌ ನೀಡಿದ್ದಾರೆ ಬಾಲಿವುಡ್‌ ನಟಿ ಅವನೀತ್‌ ಕೌರ್‌. ಈ ಸೀಸನ್‌ಗೆ ವಿರುದ್ಧವಾದ ಔಟ್‌ಫಿಟ್ಟನ್ನು ಮಿಕ್ಸ್ ಮ್ಯಾಚ್‌ ಮಾಡಿ ಅವರು ಧರಿಸಿದ್ದು, ಈ ಔಟ್‌ಲುಕ್‌ ಯಾವುದು? ಫ್ಯಾಷನಿಸ್ಟಾಗಳು ಈ ಬಗ್ಗೆ ಹೇಳಿರುವುದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಅವನೀತ್‌ ಕೌರ್‌, ನಟಿ
1/5

ಬಿರು ಬೇಸಿಗೆಯಲ್ಲೂ ಕ್ರಾಪ್‌ ಸ್ವೆಟರ್‌ ಧರಿಸಿ ಹಾಟ್‌ ಪೋಸ್‌ ನೀಡಿದ್ದಾರೆ ಬಾಲಿವುಡ್‌ ನಟಿ ಅವನೀತ್‌ ಕೌರ್‌.

ಔಟ್‌ಆಫ್‌ ಸೀಸನ್‌ ಫ್ಯಾಷನ್‌

ಹೌದು, ನವನೀತ್‌ ಕೌರ್‌ ಈ ಸೀಸನ್‌ಗೆ ವಿರುದ್ಧವಾದ ಔಟ್‌ಫಿಟ್ಟನ್ನು ಮಿಕ್ಸ್ ಮ್ಯಾಚ್‌ ಮಾಡಿ, ಫ್ಯಾಷನ್‌ ಪ್ರಿಯರಿಗೆ ಕನ್‌ಫ್ಯೂಸ್‌ ಮಾಡಿದ್ದಾರೆ. ಜತೆಗೆ ಔಟ್‌ಆಫ್‌ ಸೀಸನ್‌ ಫ್ಯಾಷನ್‌ ಥೀಮನ್ನು ಹೈಲೈಟ್‌ ಮಾಡಿದ್ದಾರೆ. ಇದು ಯಾಕೆ? ಎಂದು ಕೇಳಿದ್ದಾರೆ ಫ್ಯಾಷನ್‌ ವಿಶ್ಲೇಷಕರು.

2/5

ಫ್ಯಾಷನ್‌ ರೂಲ್ಸ್ ಬ್ರೇಕ್‌ ಮಾಡಿದ ಅವನೀತ್‌

ಅಂದಹಾಗೆ, ಅವನೀತ್‌ ಕೌರ್‌, ಸಖತ್‌ ಫ್ಯಾಷನೆಬಲ್‌ ನಟಿ ಮಾತ್ರವಲ್ಲ, ಮಾಡೆಲ್‌ ಕೂಡ. ಅವರು ಯಾವುದೇ ಇವೆಂಟ್‌ ಆಗಲಿ ಅಥವಾ ಸಿನಿಮಾ, ವೆಬ್‌ ಸಿರೀಸ್‌ನ ಕಾರ್ಯಕ್ರಮವಾಗಲಿ ಡಿಫರೆಂಟಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಹಾಗೆಂದು ಈ ಬಾರಿ ಅವರು ವಿಂಟರ್‌ ಹಾಗೂ ಸಮ್ಮರ್‌ ಸೀಸನ್‌ನ ಫ್ಯಾಷನ್‌ ಸಮ್ಮಿಲನವನ್ನೇ ಮಾಡಿದ್ದಾರೆ. ಇದು ಫ್ಯಾಷನ್‌ ರೂಲ್ಸ್ ಬ್ರೇಕ್‌ ಮಾಡುವುದಿರಲಿ, ಅವರ ಪ್ರಯೋಗಾತ್ಮಕ ಫ್ಯಾಷನ್‌ ಹೈಲೈಟ್‌ ಮಾಡಿದೆ ಎಂದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

3/5

ನವನೀತ್‌ ಧರಿಸಿರುವುದೇನು?

ನವನೀತ್‌ ಕೌರ್‌ ಬೇಝ್‌ ಕಲರ್‌ನ ಟರ್ಟಲ್‌ ನೆಕ್‌ನ ಕ್ರಾಪ್‌ ಸ್ವೆಟರ್‌ ಧರಿಸಿದ್ದು, ಅದಕ್ಕೆ ರೆಡ್‌ ಶಾರ್ಟ್ಸ್ ಧರಿಸಿದ್ದಾರೆ. ಇದರೊಂದಿಗೆ ಲಾಂಗ್‌ ಸಾಕ್ಸ್ ಕೂಡ ಧರಿಸಿದ್ದಾರೆ. ಇವ್ಯಾವು ಈ ಸೀಸನ್‌ಗೆ ಮ್ಯಾಚ್‌ ಆಗುವಂತಿಲ್ಲ! ಶಾರ್ಟ್ಸ್ ಆದರೂ ಇವುಗಳೊಂದಿಗೆ ಧರಿಸಿರುವುದು ಕೊಂಚ ವಿಯರ್ಡ್ ಫ್ಯಾಷನ್‌ ಎಂದೆನಿಸುತ್ತಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ.

4/5

ಫಾಲೋವರ್‌ಗಳನ್ನು ಸೆಳೆಯುವ ತಂತ್ರ

ಸಾಮಾನ್ಯವಾದ ಪೋಸ್‌ಗಳು ಫ್ಯಾಷನ್‌ ಶೂಟ್‌ಗಳು ಇತ್ತೀಚೆಗೆ ಯಾವುದೇ ಫ್ಯಾಷನ್‌ ಪ್ರಿಯರನ್ನು ಸೆಳೆಯುವುದಿಲ್ಲ! ಹಾಗಾಗಿ, ನವನೀತ್‌ ಈ ರೀತಿಯ ಡಿಫರೆಂಟ್‌ ಔಟ್‌ಫಿಟ್‌ ಹಾಗೂ ವಿಭಿನ್ನ ಪೋಸ್‌ಗಳ ಫ್ಯಾಷನ್‌ ಶೂಟ್‌ಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಇದು ಫಾಲೋವರ್‌ಗಳನ್ನು ಸೆಳೆಯುವ ತಂತ್ರ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

5/5

ಪ್ರಯೋಗಾತ್ಮಕ ಫ್ಯಾಷನ್‌

ಒಟ್ಟಿನಲ್ಲಿ, ನವನೀತ್‌ರ ಈ ಲುಕ್‌ ಫ್ಯಾಷನ್‌ ಫಾಲೋವರ್‌ಗಳಿಗೆ ಪ್ರಯೋಗಾತ್ಮಕ ಪೋಸ್‌ ನೀಡಲು ಪ್ರೇರಣೆ ನೀಡಿದೆ ಎನ್ನಬಹುದು!

ಶೀಲಾ ಸಿ ಶೆಟ್ಟಿ

View all posts by this author