ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಇಂಡೋ –ವೆಸ್ಟರ್ನ್‌ ಲೆಹೆಂಗಾಗೆ ಸೈ ಎಂದ ಭೂಮಿ ಪಡ್ನೆಕರ್‌

Bhumi Pednekar: ಬಾಲಿವುಡ್‌ ನಟಿ ಭೂಮಿ ಪಡ್ನೆಕರ್‌ ಧರಿಸಿದ ಇಂಡೋ-ವೆಸ್ಟರ್ನ್‌ ಲೆಹೆಂಗಾ ಡಿಫರೆಂಟ್‌ ಲುಕ್‌ ನೀಡಿದೆ. ಇದ್ಯಾವ ಬಗೆಯ ಲೆಹೆಂಗಾ? ವಿಶೇಷತೆಯೇನು? ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ಏನು ಹೇಳುತ್ತಾರೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಭೂಮಿ ಪಡ್ನೆಕರ್‌, ನಟಿ
1/5

ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಗೋಲ್ಡನ್‌ ಹಜ್‌ ಫ್ಲೋರಲ್‌ ಲೆಹೆಂಗಾ ನಟಿ ಭೂಮಿ ಪಡ್ನೆಕರ್‌ಗೆ ಡಿಫರೆಂಟ್‌ ಲುಕ್‌ ನೀಡಿದೆ.

2/5

ಪ್ರಯೋಗಾತ್ಮಕ ಲೆಹೆಂಗಾ

ಟ್ರೆಡಿಷನಲ್‌ ಲೆಹೆಂಗಾ ಲುಕ್‌ನಿಂದ ಭಿನ್ನವಾಗಿರುವ ಈ ಇಂಡೋ-ವೆಸ್ಟರ್ನ್‌ ಶೈಲಿಯ ಲೆಹೆಂಗಾ, ಕಂಪ್ಲೀಟ್‌ ವಿಭಿನ್ನ ವಿನ್ಯಾಸವನ್ನೊಳಗೊಂಡಿದ್ದು, ಪ್ರಯೋಗಾತ್ಮಕ ಡಿಸೈನ್‌ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

3/5

ಭೂಮಿ ಪಡ್ನೆಕರ್‌ ಫ್ಯಾಷನ್‌ ಲವ್‌

ಅಂದಹಾಗೆ, ಭೂಮಿ ಪಡ್ನೆಕರ್‌ ಬಾಲಿವುಡ್‌ನಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ನಟಿ. ಮೊದಲ ಹಿಂದಿ ಚಿತ್ರ ಧಮ್‌ ಲಗಾಕೇ ಐಸಾ ಎಂಬ ಚಿತ್ರದಲ್ಲಿ ಡುಮ್ಮಗಿರುವ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಊಹೆಗೂ ಮೀರಿ ಸ್ಲಿಮ್ಮಾಗಿ ಸಾಕಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡವರು. ಇನ್ನು, ಇತ್ತೀಚೆಗಿನ ವೆಬ್‌ ಸೀರೀಸ್‌ನಲ್ಲಿ ಪೊಲೀಸ್‌ ಪಾತ್ರದ ಮೂಲಕ ಮತ್ತಷ್ಟು ಫಿಟ್‌ ಆಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು. ಜತೆಗೆ ಸಾಕಷ್ಟು ಫ್ಯಾಷನ್‌ ಶೂಟ್‌ಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ತಾವು ಮಾಡೆಲಿಂಗ್‌ಗೂ ಸೈ ಎಂದು ಪ್ರೂವ್‌ ಮಾಡಿದ್ದಾರೆ.

4/5

ಭೂಮಿ ಧರಿಸಿದ ಗೋಲ್ಡನ್‌ ಹಜ್‌ ಫ್ಲೋರಲ್‌ ಲೆಹೆಂಗಾ

ಈ ಲೆಹೆಂಗಾ ಡಬ್ಬಲ್‌ ಲೇಯರ್‌ ಹೊಂದಿದೆ. ಫ್ಲೋರಲ್‌ ಎಂಬ್ರಾಯ್ಡರಿ ಹಾಗೂ ಮಿರರ್‌ ವರ್ಕ್‌ ಜತೆಗೆ ಐವರಿ ಶೇಡ್‌ ಗೋಲ್ಡನ್‌ ಶೇಡ್‌ ಲೆಹೆಂಗಾ ಸೌಂದರ್ಯ ಹೆಚ್ಚಿಸಿದೆ. ಇದೊಂದು ನೆಟ್‌ನ ಶೀರ್‌ ಲೇಯರ್ಡ್ ಲೆಹೆಂಗಾ ಎನ್ನಬಹುದು. ಇನ್ನು, ಇದರ ಹೆವಿ ಡಿಸೈನರ್‌ ಬ್ಲೌಸ್‌ ಹಾಲ್ಟರ್‌ ನೆಕ್‌ಲೈನ್‌ ಹೊಂದಿದ್ದು, ಕ್ಲಿವೇಜ್‌ ಕಾಣಿಸುವಂತಹ ಕಟೌಟ್‌ ವಿನ್ಯಾಸ ಒಳಗೊಂಡಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

5/5

ಒಂದು ಮುಕ್ಕಾಲು ಲಕ್ಷ ರೂ. ಬೆಲೆಬಾಳುವ ಲೆಹೆಂಗಾ

ಈ ಲೆಹೆಂಗಾ ಬೆಲೆ ಕಡಿಮೆಯೇನಿಲ್ಲ! ಒಂದೂ ಮುಕ್ಕಾಲು ಲಕ್ಷ. ರೂ ಬೆಲೆಬಾಳುಬಹುದು ಎಂದು ಅಂದಾಜಿಸಲಾಗಿದೆ ಎಂದು ಫ್ಯಾಷನ್‌ ವಿಮರ್ಶಕರು ತಿಳಿಸಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author