ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion Review 2026: ಸ್ಕರ್ಟ್ ಸೂಟ್‌ನಲ್ಲಿ ಸೂರ್ಯಕಾಂತಿಯಂತೆ ನಳನಳಿಸಿದ ಹನ್ಸಿಕಾ

ಸನ್‌ ಕಲರ್‌ ಎಂದು ಹೇಳಲಾಗುವ ವೈಬ್ರೆಂಟ್‌ ಯೆಲ್ಲೋ ಕಲರ್‌ನ ಸ್ಕರ್ಟ್ ಸೂಟ್‌ನಲ್ಲಿ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಸೂರ್ಯಕಾಂತಿಯಂತೆ ನಳನಳಿಸಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌? ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿರುವುದೇನು? ಇಲ್ಲಿದೆ ಸಂಪೂಎದಣ ಮಾಹಿತಿ.

ಚಿತ್ರಗಳು: ಹನ್ಸಿಕಾ ಮೊಟ್ವಾನಿ, ನಟಿ
1/5

ಸೂರ್ಯಕಾಂತಿಯಂತೆ ಮಿಂಚು

ಬಾಲಿವುಡ್‌ ನಟಿ, ಬಹುಭಾಷಾ ತಾರೆ ಹನ್ಸಿಕಾ ಮೊಟ್ವಾನಿ ವೈಬ್ರೆಂಟ್‌ ಯೆಲ್ಲೋ ಕಲರ್‌ನ ಸ್ಕರ್ಟ್ ಸೂಟ್‌ನಲ್ಲಿ ಸೂರ್ಯಕಾಂತಿಯಂತೆ ನಳನಳಿಸಿದ್ದಾರೆ.

2/5

ಹನ್ಸಿಕಾ ಧರಿಸಿದ ಮಿನಿ ಸ್ಕರ್ಟ್ ಸೂಟ್‌

ಹೌದು, ಬೇಸಗೆಯ ಕಲರ್‌ ಎಂದೇ ಹೇಳಲಾಗುವ ವೈಬ್ರೆಂಟ್‌ ಸನ್‌ ಕಲರ್‌ನ ಮಿನಿ ಸ್ಕರ್ಟ್ ಸೂಟ್‌ನಲ್ಲಿ ಬಾಲಿವುಟ್‌ ನಟಿ ಹನ್ಸಿಕಾ ಮೊಟ್ವಾನಿ ಇವೆಂಟ್‌ವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಫ್ಯಾಷೆನಬಲ್‌ ಔಟ್‌ಫಿಟ್‌ಗೆ ಫ್ಯಾಷನ್‌ ಪ್ರಿಯರು ಮನಸೋತಿದ್ದಾರೆ.

3/5

ಸನ್‌ ಕಲರ್‌ ಸ್ಕರ್ಟ್ ಸೂಟ್‌ ವಿಶೇಷತೆ

ಅಂದಹಾಗೆ, ಈ ಸನ್‌ ಕಲರ್‌ ಸಮ್ಮರ್‌ನ ಟ್ರೆಂಡಿ ಕಲರ್‌. ಪ್ರತಿ ವರ್ಷವೂ ಈ ಕಲರ್‌ ಟ್ರೆಂಡಿಯಾಗುತ್ತದೆ. ಈ ಶೇಡ್‌ನ ಮಿನಿ ಸ್ಕರ್ಟ್ ಸೂಟ್‌ನಲ್ಲಿ ಹಾಲಿವುಡ್‌ ತಾರೆಯಂತೆ ಕಾಣಿಸಿಕೊಂಡಿರುವ ಹನ್ಸಿಕಾ ಅವರ ಈ ಔಟ್‌ಫಿಟ್‌ ವಿಶೇಷತೆ ಎಂದರೇ ಒವರ್‌ ಸೈಝ್‌ ಬೋ ನೆಕ್‌ಲೈನ್‌ಗೆ ಧರಿಸಿರುವುದು. ಇದು ಇಡೀ ಔಟ್‌ಫಿಟ್‌ನ ರಂಗು ಹೆಚ್ಚಿಸಿದೆ. ಯೂನಿಕ್‌ ಫ್ಯಾಷನ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರಾದ ಮಿಂಚು.

4/5

ಹನ್ಸಿಕಾ ಹಾಲಿವುಡ್‌ ಲುಕ್‌

ಹಾಲಿವುಡ್‌ ಸೆಲೆಬ್ರೆಟಿಗಳು ಪ್ರಿಫರ್‌ ಮಾಡುವ ಸ್ಟೈಲಿಂಗನ್ನು ಅಳವಡಿಕೊಂಡಿರುವ ಹನ್ಸಿಕಾ ಅವರ ಈ ಡಿಸೈನರ್‌ವೇರ್‌ ಹೆಲೆನ್‌ ಅಂತೋನಿ ಬ್ರಾಂಡ್‌ನದ್ದಾಗಿದೆ. ಲಾಂಗ್‌ ಸ್ಲೀವ್‌ ಹಾಗೂ ಪಫ್‌ ಶೋಲ್ಡರ್‌ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಭಿನ್ನ ಲುಕ್‌ ನೀಡುವಂತಹ ಓವರ್‌ ಸೈಝ್‌ ಬೋ ಹೊಂದಿದೆ. ಇದು ಹನ್ಸಿಕಾ ಅವರಿಗೆ ಹಾಲಿವುಡ್‌ ಸೆಲೆಬ್ರೆಟಿಯಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಹನ್ಸಿಕಾ ಸೂಪರ್‌ ಸ್ಟೈಲಿಂಗ್‌

ಸಮ್ಮರ್‌ನಲ್ಲಿ ಸ್ಕರ್ಟ್ ಸೂಟ್‌ ಪ್ರಿಫರ್‌ ಮಾಡಿರುವುದರೊಂದಿಗೆ ಇದಕ್ಕೆ ತಕ್ಕಂತೆ ಎಲಿಗೆಂಟ್‌ ಲುಕ್‌ ಮಾಡಿರುವುದು ಹನ್ಸಿಕಾ ಅವರ ಸ್ಟೈಲಿಂಗ್‌ನ ಸೌಂದರ್ಯ ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author