Star Fashion Review 2026: ಟ್ವೀಡ್ ಮಿನಿ ಸ್ಕರ್ಟ್‌ನಲ್ಲಿ ಜೆನ್ ಜಿ ಫ್ಯಾಷನ್‌ಗೆ ಸೈ ಎಂದ ಖುಷಿ ಕಪೂರ್
ಟ್ವೀಡ್ ಲುಕ್‌ನ ಹೌಂಡ್ಸ್ ಟೀತ್ ವಿನ್ಯಾಸದ ಡಿಯೋರ್ ಜಾಕೆಟ್ ಹಾಗೂ ಮಿನಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಖುಷಿ ಕಪೂರ್, ಜೆನ್ ಜಿ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಅವರ ಈ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.
ಟ್ವೀಡ್ ಮಿನಿ ಸ್ಕರ್ಟ್ ಕೋ ಆರ್ಡ್ ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಖುಷಿ ಕಪೂರ್ ಜೆನ್ ಜಿ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಡಿಯೊರ್ ಬ್ರಾಂಡ್‌ನ ಮುಂಬರುವ ಸಮ್ಮರ್ ಸ್ಪ್ರಿಂಗ್ ಕಲೆಕ್ಷನನ್ನು ಈಗಲೇ ಪ್ರಸ್ತುತ ಪಡಿಸಿದ್ದಾರೆ.
ಇದ್ಯಾವ ಬಗೆಯ ಔಟ್‌ಫಿಟ್?
ಟ್ವೀಡ್ ಜಾಕೆಟ್ ಹಾಗೂ ಮಿನಿ ಸ್ಕರ್ಟ್‌ನಂತೆಯೇ ಇರುವ ಇದನ್ನು ಹೌಂಡ್ಸ್ ಟೀತ್ ಜಾಕೆಟ್ ಸೂಟ್ ಎನ್ನಲಾಗುತ್ತದೆ. ಇದು ಚಿಕ್ಕ ಚಿಕ್ಕ ಬ್ಲ್ಯಾಕ್ ಮತ್ತು ವೈಟ್ ಚೆಕ್ಸ್ ವಿನ್ಯಾಸ ಒಳಗೊಂಡಿದೆ. ಇನ್ನು ಜೆನ್ ಜಿ ಹುಡುಗಿಯರನ್ನು ಸೆಳೆಯುವ ಸಲುವಾಗಿ ಈ ಔಟ್‌ಫಿಟ್ಟನ್ನು ಕಳೆದ ಸೀಸನ್‌ನಿಂದಲೂ ಟ್ರೆಂಡಿಯಾಗಿರುವ ಕೋ ಆರ್ಡ್ ಸೂಟ್‌ನಂತೆ ಸಿದ್ಧಪಡಿಸಲಾಗಿದೆ. ಇನ್ನು, ಜೆನ್ ಜಿ ಹುಡುಗಿಯರನ್ನು ಹೊರತು ಪಡಿಸಿದರೇ ಕಾರ್ಪೋರೇಟ್ ಲುಕ್ ಬಯಸುವವರಿಗೆಂದೇ ಈ ರೀತಿಯ ಔಟ್‌ಫಿಟ್ಟನ್ನು ಡಿಯೋರ್ ವಿನ್ಯಾಸಗೊಳಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಖುಷಿಯ ಮಿನಿ ಸ್ಕರ್ಟ್ ಲುಕ್
ಅಂದಹಾಗೆ, ಖುಷಿ ಕಪೂರ್ ಧರಿಸಿರುವ ಈ ಕೋ ಆರ್ಡ್ ಸ್ಕರ್ಟ್ ಸದ್ಯ ಜೆನ್ ಜಿ ಹುಡುಗಿಯರ ಫೇವರೇಟ್ ಲುಕ್ ಆಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಇದಕ್ಕೆ ಪೂರಕ ಎಂಬಂತೆ, ಲೋಕಲ್ ಮಾರುಕಟ್ಟೆಯಲ್ಲಿ ಇದೇ ಡಿಸೈನ್‌ನ ಫೇಕ್ ಔಟ್‌ಫಿಟ್‌ಗಳು ಬಂದಿವೆ, ಯುವತಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಖುಷಿ ಕಪೂರ್ ಫ್ಯಾಷನ್ ಸೆನ್ಸ್
ಖುಷಿ ಕಪೂರ್ ಫ್ಯಾಷನ್ ಸೆನ್ಸ್ ವಿಷಯಕ್ಕೆ ಬಂದರೆ, ಅವರು ಕೂಡ ಸಹೋದರಿ ಜಾನ್ವಿ ಕಪೂರ್‌ರಂತೆಯೇ ಫ್ಯಾಷನ್ ಸೆನ್ಸ್ ಹೊಂದಿದ್ದಾರೆ. ಅಷ್ಟೇಕೆ? ಇಂಟರ್‌ನ್ಯಾಷನಲ್ ಫ್ಯಾಷನ್ ಶೋಗಳಲ್ಲಿಯೂ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.