ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion Review 2026: ಬಾಂದನಿ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆಯಲ್ಲಿ ಕಾಣಿಸಿಕೊಂಡ ನಟಿ ಮೃಣಾಲ್‌ ಠಾಕೂರ್‌

Mrunal Thakur: ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ ಉದ್ಯಾನನಗರಿಯ ಇವೆಂಟ್‌ವೊಂದಕ್ಕೆ ಭೇಟಿ ನೀಡಿದಾಗ ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ನೀಡುವ ಬಾಂದನಿ ಪ್ರಿಂಟ್ಸ್‌ನ ಲೆಹೆಂಗಾ ಪ್ರೀ ಡ್ರೇಪ್ಡ್ ಸೀರೆಯಲ್ಲಿ ಕಾಣಿಸಿಕೊಂಡರು. ಅವರ ಲುಕ್‌ ಹೇಗಿತ್ತು? ಇಲ್ಲಿದೆ ಫ್ಯಾಷನ್‌ ರಿವ್ಯೂ.

ಚಿತ್ರಗಳು: ಮೃಣಾಲ್‌ ಠಾಕೂರ್‌, ನಟಿ
1/5

ಬಾಂದನಿ ಪ್ರೀ ಡ್ರೇಪ್ಡ್ ಲೆಹೆಂಗಾ ಸೀರೆಯು ನಟಿ ಮೃಣಾಲ್‌ ಠಾಕೂರ್‌ಗೆ ತೀರಾ ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ನೀಡಿತ್ತು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್. ಅವರ ಪ್ರಕಾರ. ಪ್ರತಿ ಬಾರಿ ಕಾರ್ಯಕ್ರಮಗಳಲ್ಲಿ ಡಿಸೈನರ್‌ವೇರ್‌ಗಳಲ್ಲಿ ಮಿನುಗುವ ಮೃಣಾಲ್‌, ಈ ಬಾರಿ ತೀರಾ ಡೀಸೆಂಟಾಗಿ ಕಾಣಿಸಿಕೊಂಡರು ಎಂದು ವಿಮರ್ಶಿಸಿದ್ದಾರೆ.

2/5

ಲೆಹೆಂಗಾ ಸೀರೆಯಲ್ಲಿ ಉದ್ಯಾನನಗರಿಗೆ ಭೇಟಿ

ಅಂದಹಾಗೆ, ಜ್ಯುವೆಲ್ಸ್ ಆಫ್‌ ಇಂಡಿಯಾ ಇವೆಂಟ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ಧ ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌, ಸಿಂಪಲ್‌ ಲುಕ್‌ ನೀಡುವಂತಹ ದಿ ಹೌಸ್‌ ಆಫ್‌ ಆರ್ಶಿಯಾ ಬ್ರಾಂಡ್‌ನ ಡಿಸೈನರ್‌ ಬಾಂದನಿ ಪ್ರಿಂಟ್ಸ್‌ನ ಲೆಹೆಂಗಾ ಪ್ರೀ ಡ್ರೇಪ್ಡ್ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದರು.

3/5

ಹೌಸ್‌ ಆಫ್‌ ಆರ್ಶಿಯಾ ಲೆಹೆಂಗಾ ಸೀರೆ

ಪ್ರತಿಬಾರಿಯೂ ಒಂದಲ್ಲ ಒಂದು ವಿಶೇಷವಾದ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೃಣಾಲ್‌ ಈ ಬಾರಿ ತೀರಾ ಸಪ್ಪೆಯೆನಿಸುವ ಲೆಹೆಂಗಾ ಸೀರೆಯಲ್ಲಿ ಕಾಣಿಸಿಕೊಂಡಿರುವುದು ಫ್ಯಾಷನ್‌ ಪ್ರಿಯರಿಗೆ ನಿರಾಸೆಯುಂಟು ಮಾಡಿದೆಯಂತೆ.

4/5

ಮೃಣಾಲ್‌ ಧರಿಸಿದ ಲೆಹೆಂಗಾ ಸೀರೆಯ ಸ್ಪೆಷಾಲಿಟಿ

ಆಲೀವ್‌ ಗ್ರೀನ್‌ ಕಲರ್‌ನ ಸಿಲ್ಕ್‌ ಹಾಗೂ ಜಾರ್ಜೆಟ್‌ ಫ್ಯಾಬ್ರಿಕ್‌ನ ಕಾಂಬೀನೇಷನ್‌ನಲ್ಲಿ ಸಿದ್ಧಪಡಿಸಲಾಗಿರುವ ಮೃಣಾಲ್‌ ಔಟ್‌ಫಿಟ್‌ ಪ್ರೀ ಡ್ರೇಪ್ಡ್ ಅಂದರೇ, ರೆಡಿಮೇಡ್‌ ಲೆಹೆಂಗಾ ಸೀರೆಯಾಗಿದೆ. ವಿಶೇಷತೆಯೆಂದರೇ, ಲೆಹೆಂಗಾ ಮೇಲೆ ಬಾಂದನಿ ಪ್ರಿಂಟ್ಸ್ ಮೂಡಿಸಿರುವುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಲೆಹೆಂಗಾ ಸೀರೆಗೆ ಕಾರ್ಸೆಟ್

ಇನ್ನು, ಮೃಣಾಲ್‌ ಬ್ಲೌಸ್‌ ಬದಲು ಮ್ಯಾಗ್ನೆಟಾ ಶೇಡ್‌ನ ರಾ ಸಿಲ್ಕ್‌ನ ಕಾರ್ಸೆಟ್‌ ಮ್ಯಾಚ್‌ ಮಾಡಿರುವುದು ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದೆ. ಇದು ಮೃಣಾಲ್‌ ಅವರನ್ನು ಕಂಟೆಂಪರರಿ ಫ್ಯಾಷನ್‌ನಲ್ಲಿ ಬಿಂಬಿಸುವುದರೊಂದಿಗೆ ಅವರಿಗೆ ಕಂಪ್ಲೀಟ್‌ ಸಿಂಪಲ್‌ ಸೋಬರ್‌ ಲುಕ್‌ ನೀಡಿದೆ ಎಂದು ರಿವ್ಯೂ ನೀಡಿದ್ದಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

ಶೀಲಾ ಸಿ ಶೆಟ್ಟಿ

View all posts by this author