ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Review 2026: ಸಿಂಪಲ್‌ ಸಾದಾ ಸೀರೆಯಲ್ಲಿ ಧುರಂಧರ್‌ ನಟಿ ಸಾರಾ ಅರ್ಜುನ್‌

ಧುರಂಧರ್‌ ಸಿನಿಮಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟಿ ಸಾರಾ ಅರ್ಜುನ್‌, ಸಿಂಪಲ್‌ ಸಾದಾ ನೆವ್ವಿ ಬ್ಲ್ಯೂ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಹೇಗಿದೆ? ಅವರಂತೆಯೇ ಕಾಣಿಸಲು ಮಾಡಬೇಕಾಗಿರುವುದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಸಾರಾ ಅರ್ಜುನ್‌, ಬಾಲಿವುಡ್‌ ನಟಿ
1/5

ಸಾರಾ ಅರ್ಜುನ್‌ ಸಿಂಪಲ್‌ ಸೀರೆ ಲುಕ್‌ ಇದೀಗ ಜೆನ್‌ ಜಿ ಹುಡುಗ-ಹುಡುಗಿಯರನ್ನು ಸೆಳೆದಿದೆ.

2/5

ಸೀರೆ ಪ್ರಿಯರ ಮನ ಗೆದ್ದ ಸಾರಾ

ಹೌದು, ಈಗಾಗಲೇ ಧುರಂಧರ್‌ ಹಿಂದಿ ಸಿನಿಮಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟಿ ಸಾರಾ ಅರ್ಜುನ್‌, ತಮ್ಮ ಮುಂದಿನ ಸಿನಿಮಾ ಇವೆಂಟ್‌ವೊಂದರಲ್ಲಿ ತೀರಾ ಸಾದಾ ಸಿಂಪಲ್‌ ಡಾರ್ಕ್‌ ನೀಲಿ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಮಾತ್ರವಲ್ಲ, ಸೀರೆ ಪ್ರಿಯರನ್ನು ಸೆಳೆದಿದೆ.

3/5

ಮಾಡೆಲಿಂಗ್‌ನಿಂದ ಸಿನಿಮಾ ಲೋಕಕ್ಕೆ ಎಂಟ್ರಿ

ಅಂದಹಾಗೆ, ಸಾರಾ ಮಗುವಿಗಾಗಿದ್ದಾಗಿನಿಂದಲೇ ಮಾಡೆಲಿಂಗ್‌ ಹಾಗೂ ಜಾಹೀರಾತು ಪ್ರಪಂಚಕ್ಕೆ ಕಾಲಿಟ್ಟಿದ್ದು, ಈ ಹಿಂದೆ ಸಾಕಷ್ಟು ಹಿಂದಿ ಸಿನಿಮಾಗಳಲ್ಲಿಯೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಸೂಪರ್‌ ಹಿಟ್‌ ಸಿನಿಮಾ ಧುರಂಧರ್‌ ಮೂಲಕ ಗ್ಲೋಬಲ್‌ ನಟಿಯಾಗಿದ್ದಾರೆ. ಈ ಚಿತ್ರದ ನಂತರ ಅವರ ಫ್ಯಾನ್‌ ಫಾಲೋವಿಂಗ್‌ ಸಂಖ್ಯೆಯೂ ಕೂಡ ಏರಿದೆ. ಆ ಮಟ್ಟಿಗೆ ಹೆಸರುವಾಸಿಯಾಗಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

4/5

ಸಾರಾ ಸೀರೆ ಡಿಟೇಲ್ಸ್

ಈ ಫೋಟೋಗಳಲ್ಲಿ ಸಾರಾ ಉಟ್ಟಿರುವ ಸೀರೆಯು ತೀರಾ ಸಿಂಪಲ್‌ ಆಗಿದೆ. ಒಫ್ಯಾಬ್‌ ಬ್ರಾಂಡ್‌ನ ಪಿಂಕ್‌ ಬಾರ್ಡರ್‌ ಹೊಂದಿರುವ ನೆವ್ವಿ ಬ್ಲ್ಯೂ ವಿಸ್ಕೋಸ್‌ ಸ್ಯಾಟೀನ್‌ ಸೀರೆ ಇದಾಗಿದೆ. ಈ ಸೀರೆಗೆ ಅದೇ ವರ್ಣದ ವೀ ನೆಕ್‌ಲೈನ್‌ನ ಬ್ಲೌಸ್ ಮ್ಯಾಚ್‌ ಮಾಡಲಾಗಿದೆ. ಇನ್ನು, ಸಿಂಪಲ್‌ ಸ್ಟಡ್ಸ್ ಹಾಗೂ ಪರ್ಲ್‌ನ ಚೈನ್‌ ಧರಿಸಿರುವ ಸಾರಾ ಅವರಿಗೆ ಈ ಸೀರೆ ಎಲಿಗೆಂಟ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಸಿಂಪಲ್‌ ಸೀರೆಯಲ್ಲಿ ಸಾರಾರಂತೆ ಕಾಣಲು ಹೀಗೆ ಮಾಡಿ :

  • ನಿಮ್ ಸ್ಕಿನ್‌ ಟೋನ್‌ಗೆ ಹೊಂದುವ ಸಾದಾ ಸೀರೆ ಆಯ್ಕೆ ಮಾಡಿ.
  • ಆಕ್ಸೆಸರೀಸ್‌ ಕೂಡ ಸಿಂಪಲ್ಲಾಗಿರಲಿ.
  • ಇಡೀ ಮೇಕೋವರ್‌ ಎಲ್ಲೂ ಅತಿ ಎನಿಸಬಾರದು.

ಶೀಲಾ ಸಿ ಶೆಟ್ಟಿ

View all posts by this author