Star Fashion Review 2026: ರೆಕ್ಕೆಯಂತೆ ಕಾಣುವ ಹೈ ಫ್ಯಾಷನವೇರ್‌ಗೆ ಸೈ ಎಂದ ತಮನ್ನಾ
Tamannaah Bhatia: ರೆಕ್ಕೆಯಂತೆ ಕಾಣಿಸುವ ಆಫ್ ಶೋಲ್ಡರ್ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ಬಾಲಿವುಡ್ ನಟಿ ತಮನ್ನಾ ಕಾಣಿಸಿಕೊಂಡಿದ್ದು, ಸದ್ಯ ಹೈ ಫ್ಯಾಷನ್‌ವೇರ್‌ಗೆ ಸೈ ಎಂದಿದ್ದಾರೆ. ಅವರ ಈ ಔಟ್‌ಫಿಟ್ ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ರೆಕ್ಕೆಯಂತೆ ಕಾಣಿಸುವ ವಿಂಗ್ಸ್ ಆಫ್ ಶೋಲ್ಡರ್ ಟಾಪ್ ಹಾಗೂ ಸ್ಕರ್ಟ್‌ನಲ್ಲಿ ಬಾಲಿವುಡ್ ನಟಿ ತಮನ್ನಾ ಕಾಣಿಸಿಕೊಂಡಿದ್ದು, ಹೈ ಫ್ಯಾಷನ್‌ಗೆ ಸೈ ಎಂದಿದ್ದಾರೆ.
ತಮನ್ನಾ ಡ್ರೆಸ್ ವಿಶೇಷತೆ
ಹೌದು, ನೋಡಲು ರೆಕ್ಕೆಯಂತೆ ಕಾಣಿಸುವ ಆಫ್ ಶೋಲ್ಡರ್ ವೆಲ್ವೆಟ್ ಟಾಪ್ ಜತೆಗೆ ಲೆದರ್ ಇಮಿಟೇಟ್ ಮಾಡುವಂತಹ ಫೇಕ್ ಲೆದರ್‌ನ ಬ್ಲ್ಯಾಕ್ ಸ್ಕರ್ಟ್‌ನಲ್ಲಿ ಬಾಲಿವುಡ್‌ನ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಬಾಟಿಯಾ ಕಾಣಿಸಿಕೊಂಡಿದ್ದು, ಬಹಳ ದಿನಗಳ ನಂತರ ಹೈ ಫ್ಯಾಷನ್‌ವೇರ್‌ಗೆ ಸೈ ಎಂದಿದ್ದಾರೆ. ಅವರ ಈ ಲುಕ್ ಹೈ ಫ್ಯಾಷನ್ ಇಷ್ಟಪಡುವ ಫ್ಯಾಷನ್ ಪ್ರಿಯರ ಮನ ಗೆದ್ದಿದೆ.
ಫ್ಯಾಷನೆಬಲ್ ತಮನ್ನಾ ಬಾಟಿಯಾ
ಅಂದಹಾಗೆ, ತಮನ್ನಾ, ಆಯಾ ಸೀಸನ್ ಕೂಡ ಲೆಕ್ಕಿಸದೇ ಆಗಾಗ್ಗೆ ಸಾಕಷ್ಟು ಪ್ರಯೋಗಾತ್ಮಕ ಔಟ್‌ಫಿಟ್‌ಗಳನ್ನು ಪ್ರಯೋಗಿಸುತ್ತಲೇ ಇರುತ್ತಾರೆ. ಜತೆಗೆ ಫ್ಯಾಷನ್ ಶೂಟ್‌ಗಳಲ್ಲೂ ಸೆಲೆಬ್ರೆಟಿ ಡಿಸೈನರ್‌ಗಳ ಡ್ರೆಸ್‌ಗಳನ್ನು ಧರಿಸಿ, ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್ ಹುಟ್ಟು ಹಾಕುತ್ತಿರುತ್ತಾರೆ. ಇದು ಅವರ ಫ್ಯಾಷನ್ ಲುಕ್ಕನ್ನು ನೋಡಲು ಸೂಪರ್ ಮಾಡೆಲ್‌ನಂತೆ ಬಿಂಬಿಸುತ್ತಿರುತ್ತದೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರು.
ಮಿಕ್ಸ್ ಮ್ಯಾಚ್ ಮಾಡಿದ ಹೈ ಫ್ಯಾಷನ್‌ವೇರ್
ಇನ್ನು, ತಮನ್ನಾ ಧರಿಸಿದ ಆಫ್ ಶೋಲ್ಡರ್ ಟಾಪ್ ಈ ಸೀಸನ್‌ಗೆ ಮ್ಯಾಚ್ ಆಗಿದೆ. ಆದರೆ, ಸ್ಕರ್ಟ್ ಜಸ್ಟ್ ಓಕೆ, ಯಾಕೆಂದರೆ ಲೆದರ್‌ನಂತೆ ಕಾಣಿಸುವ ಫ್ಯಾಬ್ರಿಕ್ ಈ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿಲ್ಲ! ಅಲ್ಲದೇ ಅವರು ಧರಿಸಿರುವ ನೀ ಲೆಂಥ್‌ನ ಬ್ಲ್ಯಾಕ್ ಬೂಟ್ಸ್ ಕೂಡ ಸೀಸನ್ ಲಿಸ್ಟ್‌ನಲ್ಲಿಲ್ಲ! ಹಾಗಾಗಿ ತಮನ್ನಾ ಔಟ್‌ಫಿಟ್ ಸೀಸನ್ ಪರವಾಗಿ ಇಲ್ಲ! ಇದೇನಿದ್ದರೂ ಕ್ಲಾಸಿಯಾಗಿ ಎಸಿ ಹಾಲ್‌ನಲ್ಲಿ ಧರಿಸಿ, ಪ್ರದರ್ಶಿಸಬಹುದಾದ ಹೈ ಫ್ಯಾಷನ್‌ವೇರ್ ಎಂದು ಫ್ಯಾಷನ್ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.
ಹೈ ಫ್ಯಾಷನ್ ಪ್ರಿಯರ ಔಟ್‌ಫಿಟ್
ಸಾಮಾನ್ಯ ಹುಡುಗಿಯರು ತಮನ್ನಾ ಔಟ್‌ಫಿಟ್ ಫಾಲೋ ಮಾಡಲಾಗದಿದ್ದರೂ, ಹೈ ಫ್ಯಾಷನ್ ಬಯಸುವವರು ಈ ಲುಕ್ ಫಾಲೋ ಮಾಡಲು ತೊಡಗಿದ್ದಾರೆ ಎಂದಿದ್ದಾರೆ ಫ್ಯಾಷನ್ ವಿಶ್ಲೇಷಕರಾದ ಮಿಂಚು.