Star Fashion Review 2026: ಜೆನ್ ಜಿ ಯುವತಿಯರನ್ನು ಪ್ರತಿಬಿಂಬಿಸಿದ ಶರ್ಮಿಳಾ ಮಾಂಡ್ರೆ ಫ್ಯಾಷನ್
ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಜೆನ್ ಜಿ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಹಾಟ್ ರೆಡ್ ಶೇಡ್‌ನ ಅಲ್ಟ್ರಾ ಮಾಡರ್ನ್ ಫ್ಯಾಷನ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್ ಹೇಗಿದೆ? ಇಲ್ಲಿದೆ ಫ್ಯಾಷನ್ ವಿಮರ್ಶೆಯ ಕುರಿತ ಸಂಕ್ಷಿಪ್ತ ವಿವರ.
ಜೆನ್ ಜಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ. ಹೌದು, ನಟಿ ಶರ್ಮಿಳಾ ಮಾಂಡ್ರೆ, ರೆಡ್ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಜೆನ್ ಜಿಯ ಅಲ್ಟ್ರಾ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜೆನ್ ಜಿ ಹುಡುಗಿಯರ ರೀತಿಯಲ್ಲೆ ತಮ್ಮ ಈ ಫ್ಯಾಷನ್ ಶೂಟ್ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಫ್ಯಾಷನೆಬಲ್ ಶರ್ಮಿಳಾ ಮಾಂಡ್ರೆ
ಅಂದಹಾಗೆ, ಶರ್ಮಿಳಾ ಮಾಂಡ್ರೆ ಮೊದಲಿನಿಂದಲೂ ಫ್ಯಾಷನೆಬಲ್ ನಟಿ. ಆಯಾ ಇವೆಂಟ್‌ಗಳಿಗೆ ತಕ್ಕಂತೆ ಹಾಗೂ ಸಂದರ್ಭಗಳಿಗೆ ತಕ್ಕಂತೆ ಫ್ಯಾಷನ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟು ಮಾತ್ರವಲ್ಲ, ಸಾಕಷ್ಟು ಬಾರಿ ಅಲ್ಟ್ರಾ ಮಾಡರ್ನ್ ಉಡುಗೆಯಲ್ಲಿ ಕಾಣಿಸಿಕೊಂಡು ಸ್ಯಾಂಡಲ್‌ವುಡ್‌ನಲ್ಲೂ ಟ್ರೆಂಡ್ ಹುಟ್ಟುಹಾಕಿದ್ದಾರೆ. ಬೋಲ್ಡ್ ಫ್ಯಾಷನ್ ಫಾಲೋ ಮಾಡಿರುವ ನಟಿ ಎಂದರೂ ಅತಿಶಯೋಕ್ತಿಯಾಗದು.
ಶರ್ಮಿಳಾ ಧರಿಸಿರುವ ಬ್ಯಾಕ್‌ಲೆಸ್ ರೆಡ್ ಔಟ್‌ಫಿಟ್
ಕಂಪ್ಲೀಟ್ ಬ್ಯಾಕ್‌ಲೆಸ್ ಆಗಿರುವ ಗ್ಲಾಮರಸ್ ರೆಡ್ ಹಾಟ್ ಎನ್ನಲಾಗುವ ಈ ಸ್ಯಾಟಿನ್ ಫ್ಯಾಬ್ರಿಕ್‌ನ ಈ ಔಟ್‌ಫಿಟ್ ಶೈನಿಂಗ್ ಆಗಿದೆ. ಹಾಲ್ಟರ್ ನೆಕ್‌ಲೈನ್ ಹೊಂದಿದೆ.
ಅಲ್ಟ್ರಾ ಮಾಡರ್ನ್ ಲುಕ್
ಇನ್ನು ಶರ್ಮಿಳಾರ ಈ ಅಲ್ಟ್ರಾ ಮಾರ್ಡನ್ ಲುಕ್ ತೀರಾ ಸಿಂಪಲ್ ಆಗಿದೆ, ಅಷ್ಟೇ ಅಟ್ರಾಕ್ಟಿವ್ ಆಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಜೆನ್ ಜಿ ಹುಡುಗಿಯರನ್ನು ಪ್ರತಿಬಿಂಬಿಸುವ ಲುಕ್
ಸ್ಟೈಲಿಸ್ಟ್ ಜೋಯಾ ಸ್ಟೈಲಿಂಗ್ ಇದಕ್ಕಿರುವುದು ತಿಳಿದು ಬರುತ್ತದೆ. ಇನ್ನು ಮೇಕೋವರ್ ಹಾಗೂ ಸ್ಟೈಲಿಂಗ್ ಎಲ್ಲವೂ ಜೆನ್ ಜಿ ಹುಡುಗಿಯರ ಸ್ಟೈಲಿಂಗ್‌ನಂತೆಯೇ ಇದೆ. ಹಾಗಾಗಿ ಈ ಲುಕ್ ಜೆನ್ ಜಿ ಹುಡುಗಿಯರನ್ನು ಪ್ರತಿಬಿಂಬಿಸುವಂತಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.