ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion Tips 2026: ನಟ ಸಿದ್ಧಾರ್ಥ್ ಮಲ್ಹೋತ್ರಾ ಬ್ಲ್ಯಾಕ್‌ ಸೂಟ್‌ ಲುಕ್‌ಗೆ ಇಲ್ಲಿದೆ 5 ಟಿಪ್ಸ್

Sidharth Malhotra: ಬಾಲಿವುಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಧರಿಸಿರುವ ಬ್ಲ್ಯಾಕ್‌ ಸೂಟ್‌ ಫ್ಯಾಷನ್‌ ಪ್ರಿಯ ಯುವಕರನ್ನು ಆಕರ್ಷಿಸಿದೆ. ಈ ಲುಕ್‌ ಪಡೆಯಲು ಪುರುಷರು ಮಾಡಬೇಕಾದ್ದೇನು? ಈ ಕುರಿತಂತೆ ಒಂದಿಷ್ಟು ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್‌ ಇಲ್ಲಿದೆ.

ಚಿತ್ರಗಳು: ಸಿದ್ಧಾರ್ಥ್‌ ಮಲ್ಹೋತ್ರಾ, ಬಾಲಿವುಡ್‌ ನಟ
1/5

ಸಿದ್ಧಾರ್ಥ್‌ ಮಲ್ಹೋತ್ರಾ ರೀತಿ ಕಾಣಿಸಿಕೊಳ್ಳಬೇಕೆ?

ನೀವು ಕೂಡ ಬ್ಲ್ಯಾಕ್‌ ಸೂಟ್‌ನಲ್ಲಿ ಬಾಲಿವುಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರಂತೆ ಹ್ಯಾಂಡ್‌ಸಮ್‌ ಆಗಿ ಕಾಣಿಸಬೇಕೇ? ಖಂಡಿತಾ ಸಾಧ್ಯ! ಇದಕ್ಕಾಗಿ ಒಂದಿಷ್ಟು ಫ್ಯಾಷನ್‌ ರೂಲ್ಸ್ ಹಾಗೂ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿದರಾಯಿತು ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ ಒಂದಿಷ್ಟು ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ನೀಡಿದ್ದಾರೆ.

2/5

ಟ್ರೆಂಡಿ ವಿನ್ಯಾಸದ ಬ್ಲ್ಯಾಕ್‌ ಸೂಟ್‌ ಆಯ್ಕೆ ಮಾಡಿ

ಮೊದಲಿಗೆ ಬ್ಲ್ಯಾಕ್‌ ಸೂಟ್‌ ಆಯ್ಕೆ ಮಾಡುವಾಗ ಅದು ಟ್ರೆಂಡಿಯಾಗಿದೆಯೇ? ಎಂಬುದನ್ನು ತಿಳಿದಿರಿ. ಆದಷ್ಟೂ ಈ ಸೀಸನ್‌ನಲ್ಲಿ ಚಾಲ್ತಿಯಲ್ಲಿರುವುದನ್ನೇ ಆಯ್ಕೆ, ಮಾಡಿ ಧರಿಸಿ. ನೀವು ಧರಿಸುವ ಸೂಟ್‌ ನೀಟಾಗಿ ಕಾಣಿಸಬೇಕಿದ್ದಲ್ಲಿ ಆಯ್ಕೆ ಮಾಡುವ ಸೂಟ್‌ ಸ್ಲಿಮ್‌ ಫಿಟ್‌ನದ್ದಾಗಿರಬೇಕು. ಅದರಲ್ಲೂ ನಿಮ್ಮ ಬಾಡಿಗೆ ಹೊಂದುವಂತಿರಬೇಕು. ದೊಗಲೆ ಸೂಟ್‌ ಚೆನ್ನಾಗಿ ಕಾಣಿಸುವುದಿಲ್ಲ ಎಂಬುದು ನೆನಪಿರಲಿ.

3/5

ಸೆಲೆಬ್ರೆಟಿ ಲುಕ್‌ಗಾಗಿ ಹೀಗೆ ಮಾಡಿ

ಸಿದ್ಧಾರ್ಥ್‌ ಮಲ್ಹೋತ್ರಾ ಆಗಿರಬಹುದು, ಯಶ್ ಅಥವಾ ಮಹೇಶ್‌ ಬಾಬು ಇನ್ಯಾರೇ ಸಿನಿಮಾ ನಟನಾಗಿರಬಹುದು. ಸೂಟ್‌ ಧರಿಸಿದಾಗ ಅವರಂತೆಯೇ ಆಕರ್ಷಕವಾಗಿ ಕಾಣಿಸಲು ಆದಷ್ಟೂ ಒಂದಿಷ್ಟು ಗುಣಗಳನ್ನು ರೂಢಿಸಿಕೊಳ್ಳಿ. ಸೂಟ್‌ ಧರಿಸಿದ್ದಾಗ ಮುಖದಲ್ಲಿ ಗಾಂಭಿರ್ಯವಿರಲಿ. ಫೋಟೋ ಪೋಸ್‌ ನೀಡುವಾಗ ಅಟಿಟ್ಯೂಡ್‌ ಕಾಣಿಸಲಿ.

4/5

ಫಂಕಿ ಹೇರ್‌ಸ್ಟೈಲ್‌ ಬೇಡ

ಸೂಟ್‌ ಧರಿಸಿದಾಗ ಫಂಕಿ ಹೇರ್‌ಸ್ಟೈಲ್‌ ಬೇಡ. ಡಿಸೆಂಟ್‌ ಲುಕ್‌ ನೀಡುವಂತಹ ಇತ್ತೀಚಿನ ಟ್ಟ್ರೆಂಡ್‌ನಲ್ಲಿರುವ ಯಾವುದೇ ಹೇರ್‌ಸ್ಟೈಲ್‌ ಮಾಡಿಕೊಳ್ಳುವುದು ಉತ್ತಮ.

5/5

ಮೇಕೋವರ್‌ ಪರ್ಫೆಕ್ಟ್ ಆಗಿರಲಿ

ಒಟ್ಟಾರೆ, ಮೇಕೋವರ್‌ ಪರ್ಫೆಕ್ಟಾಗಿರಲಿ. ಹೆಚ್ಚು ಆಕ್ಸೆಸರೀಸ್‌ ಧರಿಸುವುದು ಬೇಡ! ಫಾರ್ಮಲ್‌ ಶೂ ಧರಿಸಿ, ಸ್ಟೈಲಿಂಗ್‌ ಡಿಸೆಂಟಾಗಿರಲಿ. ನಿಮ್ಮ ಉತ್ತಮ ಕಮ್ಯೂನಿಕೇಷನ್‌ ಹಾಗೂ ಮುಖದ ಹಾವಭಾವ ಕೂಡ ನಿಮ್ಮನ್ನು ಲುಕ್‌ನೊಂದಿಗೆ ಸ್ಮಾರ್ಟ್‌ ಆಗಿ ಬಿಂಬಿಸಬಲ್ಲದು.

ಶೀಲಾ ಸಿ ಶೆಟ್ಟಿ

View all posts by this author