ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Jewel Fashion 2026: ಶನಾಯ ಇಯರ್‌ ಕಫ್‌ ಮೇಲೆ ಜೆನ್‌ ಜಿ ಯುವತಿಯರ ಕಣ್ಣು

Shanaya Kapoor: ಶನಾಯ ಕಪೂರ್‌ ಧರಿಸಿದ್ಧ ಟ್ರೆಡಿಷನಲ್‌ ಲುಕ್‌ ನೀಡುವ ಇಯರ್‌ ಕಫ್‌ಗಳ ಮೇಲೆ ಸದ್ಯ ಜೆನ್‌ ಜಿ ಹುಡುಗಿಯರ ಕಣ್ಣು ಬಿದ್ದಿದೆ. ಮತ್ತೊಮ್ಮೆ ಜ್ಯುವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಶನಾಯ ಕಪೂರ್‌, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ಶನಾಯ ಕಪೂರ್‌ ಧರಿಸಿದ್ಧ ಟ್ರೆಡಿಷನಲ್‌ ಲುಕ್‌ ನೀಡುವ ಅತ್ಯಾಕರ್ಷಕ ಇಯರ್‌ ಕಫ್‌ಗಳ ಮೇಲೆ ಸದ್ಯ ಜೆನ್‌ ಜಿ ಹುಡುಗಿಯರ ಕಣ್ಣು ಬಿದ್ದಿದೆ.

2/5

ಶನಾಯ ಕಪೂರ್‌ ಇಯರ್‌ ಕಫ್‌

ಅಂಬಾನಿ ಮನೆಯ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದಾಗ ನಟಿ ಶನಾಯ ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಡಾರ್ಕ್‌ ಶೇಡ್‌ನ ಡಿಸೈನರ್‌ವೇರ್‌ನಲ್ಲಿ ಮಿನುಗಿದ್ದರು. ಆ ಡಿಸೈನರ್‌ವೇರ್‌ ಜತೆಗೆ ಟ್ರೆಡಿಷನಲ್‌ ಲುಕ್‌ ನೀಡುವ ಆಭರಣಗಳನ್ನು ಧರಿಸಿದ್ದರು. ಈ ಆಭರಣಗಳಲ್ಲಿ ಅವರು ಧರಿಸಿದ್ಧ ಟ್ರೆಡಿಷನಲ್‌ ಲುಕ್‌ ಹೊಂದಿದ್ದ, ಇಯರ್‌ ಕಫ್‌ ಮಾತ್ರ ಎಲ್ಲರ ಗಮನ ಸೆಳೆದಿತ್ತು.

3/5

ಫೆಸ್ಟೀವ್‌ ಸೀಸನ್‌ಗೆ ಹೇಳಿ ಮಾಡಿಸಿದ ಜ್ಯುವೆಲ್‌

ಈಗಾಗಲೇ ಜ್ಯುವೆಲ್‌ ಲಿಸ್ಟ್‌ನಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ಇಯರ್‌ ಕಫ್‌, ಈ ಫೆಸ್ಟೀವ್‌ ಸೀಸನ್‌ನಲ್ಲಿ ಸಿನಿಮಾ ತಾರೆಯರ ಕಿವಿಯನ್ನು ಅಲಂಕರಿಸುವ ಮೂಲಕ ಮತ್ತೊಮ್ಮೆ ಕಾಣಿಸಿಕೊಂಡಿರುವುದು ಜ್ಯುವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗುವ ಎಲ್ಲಾ ಮುನ್ಸೂಚನೆಯನ್ನು ನೀಡಿವೆ ಎಂಬುದು ಜ್ಯುವೆಲ್‌ ಡಿಸೈನರ್‌ಗಳ ಅಭಿಪ್ರಾಯ.

4/5

ಟ್ರೆಂಡಿಯಾಗಿರುವ ಇಯರ್‌ ಕಫ್‌ಗಳಿವು

ಇನ್ನು, ಶನಾಯ ಧರಿಸಿರುವ ವಿನ್ಯಾಸದ್ದು ಮಾತ್ರವಲ್ಲ, ಇದರೊಂದಿಗೆ ಆಂಟಿಕ್‌ ಡಿಸೈನ್‌ನವು, ವೆಸ್ಟೆರ್ನ್‌ ಡ್ರೆಸ್‌ಗಳಿಗೂ ಸೂಟ್‌ ಆಗುವಂತವು, ಟೆಂಪಲ್‌ ಡಿಸೈನ್‌ನವು, ಪರ್ಲ್‌, ಬೀಡ್ಸ್ ವಿನ್ಯಾಸದವು. ಕೆಂಪು ಸ್ಟೋನ್ಸ್ ಹಾಗೂ ಜಾಡಾವು ವಿನ್ಯಾಸದವು ಈ ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿವೆ. ಆನ್‌ಲೈನ್‌ ಜ್ಯುವೆಲರಿ ಶಾಪ್‌ಗಳಲ್ಲೂ ದೊರಕುತ್ತಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

5/5

ಮರು ಟ್ರೆಂಡ್‌ ಹುಟ್ಟುಹಾಕಲು ಶನಾಯ ಕಾರಣ

ಒಟ್ಟಾರೆ, ಶನಾಯ ಕಪೂರ್‌ ಧರಿಸಿದ್ಧ ಈ ಇಯರ್‌ ಕಫ್‌ ಜೆನ್‌ ಜಿ ಹುಡುಗಿಯರನ್ನು ಸೆಳೆಯುವುದರೊಂದಿಗೆ ಮರು ಟ್ರೆಂಡ್‌ ಆಗಲು ಕಾರಣವಾಗಿದೆ ಎನ್ನುತ್ತಾರೆ ಜ್ಯುವೆಲ್‌ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author