ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Lifestyle 2025: ನಟ ಸಿದ್ಧಾರ್ಥ್ ಮಲ್ಹೋತ್ರಾ ಸಿಂಪಲ್ ವಿಂಟರ್ ಲೈಫ್‌ಸ್ಟೈಲ್

Star Lifestyle: ಯುವಕರು ವಿಂಟರ್ ಸೀಸನ್‌ಗೆ ತಕ್ಕಂತೆ ಬದಲಾಗುವುದು ಅಗತ್ಯ, ಹಾಗೆಂದು ಕೇವಲ ಫ್ಯಾಷನ್‌ವೇರ್‌ಗಳನ್ನು ಧರಿಸಿದರೇ ಸಾಲದು! ಜತೆಗೆ ಆರೋಗ್ಯಕರ ರುಟೀನ್ ಪಾಲಿಸಬೇಕು ಎಂದಿದ್ದಾರೆ ಬಾಲಿವುಡ್ ನಟ ಸಿದ್ಧಾರ್ಥ್. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸಿದ್ಧಾರ್ಥ್ ಮಲ್ಹೋತ್ರಾ, ಬಾಲಿವುಡ್ ನಟ
1/5

ಯುವಕರು ವಿಂಟರ್ ಸೀಸನ್‌ಗೆ ತಕ್ಕಂತೆ ಬದಲಾಗಬೇಕು, ಜತೆಗೆ ಆರೋಗ್ಯಕರ ರುಟೀನ್‌ಗಳನ್ನು ಅಳವಡಿಸಿಕೊಳ್ಳಬೇಕು. ಇದು ಇಂದಿನ ಅಗತ್ಯ ಎನ್ನುತ್ತಾರೆ ಬಾಲಿವುಡ್‌ನ ಹ್ಯಾಂಡ್ಸಮ್ ನಟ ಸಿದ್ಧಾರ್ಥ್ ಮಲ್ಹೋತ್ರಾ. ಮಾಧ್ಯಮವೊಂದರ ಲೈಫ್‌ಸ್ಟೈಲ್‌ ಕುರಿತಂತೆ ನಡೆಸಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ವಿಂಟರ್ ಲೈಫ್‌ಸ್ಟೈಲ್ ಬಗ್ಗೆ ತಿಳಿಸಿದ್ದಾರೆ. ಜತೆಗೆ ಈ ಸೀಸನ್‌ನಲ್ಲಿ ಯುವಕರ ರುಟೀನ್ ಹೇಗಿರಬೇಕೆಂಬುದರ ಬಗ್ಗೆಯೂ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

2/5

ಸೀಸನ್‌ಗೆ ತಕ್ಕ ಫ್ಯಾಷನ್‌ವೇರ್ಸ್ ಧರಿಸಿ

ಈ ಸೀಸನ್‌ನಲ್ಲಿ ದೇಹವನ್ನು ಬೆಚ್ಚಗಿಡಲು ಆದಷ್ಟೂ ಲೇಯರ್ ಲುಕ್‌ಗೆ ಯುವಕರು ಆದ್ಯತೆ ನೀಡಬೇಕು. ಆದಷ್ಟೂ ಜಾಕೆಟ್, ಕೋಟ್‌ಗಳನ್ನು ಧರಿಸುವುದರೊಂದಿಗೆ ಚರ್ಮದ ಆರೈಕೆ ಕೂಡ ಮಾಡಬೇಕು ಎಂದಿದ್ದಾರೆ ಸಿದ್ಧಾರ್ಥ್.

ಅಧಿಕ ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ

ಚಳಿಗಾಲದಲ್ಲೂ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶ ಅಗತ್ಯ. ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾರೆ ಸಿದ್ಧಾರ್ಥ್.

3/5

ಮೊದಲು ಆರೋಗ್ಯಕ್ಕೆ ಮಹತ್ವ ನೀಡಿ

ಚಳಿಗಾಲದ ವಾತಾವರಣ ಥಂಡಿಯಿಂದ ಕೂಡಿರುವುದರಿಂದ ಆರೋಗ್ಯದಲ್ಲಿಯೂ ಏರುಪೇರಾಗುವ ಸಾಧ್ಯತೆಯೇ ಹೆಚ್ಚು! ಆದ್ದರಿಂದ ಸೇವಿಸುವ ಆಹಾರ ಪೌಷ್ಟಿಕಾಂಶಗಳನ್ನು ಒಳಗೊಂಡಿರಬೇಕು ಎಂಬುದು ಸಿದ್ಧಾರ್ಥ್ ಅಭಿಪ್ರಾಯ.

4/5

ಜಂಕ್ ಫುಡ್‌ಗೆ ಟಾಟಾ ಹೇಳಿ

ಇನ್ನು ಈ ಸೀಸನ್‌ನಲ್ಲಿಆದಷ್ಟೂ ಸ್ಟ್ರೀಟ್‌ಫುಡ್ ಹಾಗೂ ಜಂಕ್ ಪುಡ್ ತಿನ್ನುವುದನ್ನು ತ್ಯಜಿಸುವುದೇ ಒಳಿತು. ಪೋಷಕಾಂಶಗಳಿಂದ ಕೂಡಿದ ಹಸಿರು ತರಕಾರಿಗಳು, ಮೊಟ್ಟೆ, ಮೀನು, ಮಾಂಸ ಸೇವನೆ ಮಾಡುವುದು ಉತ್ತಮ. ಇದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎನ್ನುವ ಸಿದ್ಧಾರ್ಥ್, ಈ ಸೀಸನ್‌ನಲ್ಲಿ ಹಿತಮಿತವಾದ ಆಹಾರ ಸೇವನೆ ಮಾಡುತ್ತಾರಂತೆ.

5/5

ನಿಯಮಿತ ವ್ಯಾಯಾಮ

ಚಳಿಗಾಲದಲ್ಲಿ ಬೆಳಗ್ಗೆ ವರ್ಕೌಟ್ ಮಾಡಲು ಸಾಧ್ಯವಾಗದಿದ್ದಲ್ಲಿ, ಸಂಜೆಯ ಸಮಯ ಬಿಡುವು ಮಾಡಿಕೊಂಡು ವರ್ಕೌಟ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎನ್ನುತ್ತಾರೆ ಸಿದ್ಧಾರ್ಥ್.

ಶೀಲಾ ಸಿ ಶೆಟ್ಟಿ

View all posts by this author