ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರನ್ನು ಸೆಳೆದ ನಟಿ ಭಾವನಾ ರಾವ್‌ ಸೀರೆ ಲುಕ್‌!

Actress Bhavana Rao: ಮನಸ್ಸಿಗೆ ಮುದ ನೀಡುವಂತಹ ಲೆಮೆನ್‌ ಗ್ರೀನ್‌ ವರ್ಣದ ಸೀರೆಯಲ್ಲಿ ನಟಿ ಭಾವನಾ ರಾವ್‌ ಕಾಣಿಸಿಕೊಂಡು ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಸೆಳೆದಿದ್ದಾರೆ. ಈ ಕುರಿತಂತೆ ಭಾವನಾ ಹೇಳುವುದೇನು? ಫ್ಯಾಷನ್‌ ವಿಮರ್ಶಕರ ರಿವ್ಯೂ ಏನು? ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಭಾವನಾ ರಾವ್‌, ನಟಿ
1/5

ಲೆಮೆನ್‌ ಗ್ರೀನ್‌ ವರ್ಣದ ಅತ್ಯಾಕರ್ಷಕ ಲೈಟ್‌ವೈಟ್‌ ಸೀರೆಯಲ್ಲಿ ಸ್ಯಾಂಡಲ್‌ವುಡ್‌ ನಟಿ ಭಾವನಾ ರಾವ್‌ ಕಾಣಿಸಿಕೊಂಡಿದ್ದಾರೆ. ಇದು ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಸೆಳೆದಿದೆ.

2/5

ಭಾವನಾ ಅಮ್ಮನ ಜಾರ್ಜೆಟ್‌ ಸೀರೆಯಿದು

ಜಾರ್ಜೆಟ್‌ ಲೆಮೆನ್‌ ಗ್ರೀನ್‌ ಸಾಫ್ಟ್ ಫ್ಲೋರಲ್‌ ವಿನ್ಯಾಸದ ಈ ಸೀರೆ ಭಾವನಾ ಅವರ ಅಮ್ಮನದು. ಹೌದು. ಇದು, ಅವರಿಗೆ ಸಿಂಪಲ್‌ ಲುಕ್‌ ನೀಡುವುದರೊಂದಿಗೆ ಈ ವಿಂಟರ್‌ ಸೀಸನ್‌ನಲ್ಲಿ ಅವರ ಅಂದವನ್ನು ಹೆಚ್ಚಿಸಿದೆ. ಜತೆಗೆ ಸೀರೆಗೆ ಧರಿಸಿರುವ ಸ್ಲಿವ್‌ಲೆಸ್‌ ಪ್ಲೇನ್‌ ಬ್ಲೌಸ್ ಅವರನ್ನು ಗ್ಲಾಮರಸ್‌ ಆಗಿ ಬಿಂಬಿಸಿದೆ. ಇನ್ನು, ಭಾವನಾರ ಫ್ರೀ ಹೇರ್‌ಸ್ಟೈಲ್‌, ಲೈಟ್‌ ಮೇಕಪ್‌, ಬ್ಲ್ಯಾಕ್‌ ಮೆಟಲ್‌ನ ಜುಮ್ಕಾ, ಕೈಗಳ ಒಂದೆರೆಡು ಹಸಿರ ಬಳೆ ಎಲ್ಲವೂ ಅವರ ಮೇಕೋವರ್‌ಗೆ ಸಾಥ್‌ ನೀಡಿವೆ. ಪರಿಣಾಮ, ವರ್ಕಿಂಗ್‌ ವುಮೆನ್‌ ಹಾಗೂ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರನ್ನು ಸೆಳೆಯುವಲ್ಲಿ ಈ ಸ್ಟೈಲಿಂಗ್‌ ಯಶಸ್ವಿಯಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

3/5

ಭಾವನಾ ಸೀರೆ ಲವ್‌

ವಿಶ್ವವಾಣಿ ನ್ಯೂಸ್‌ನೊಂದಿಗೆ ತಮ್ಮ ಸೀರೆ ಲವ್‌ ಬಗ್ಗೆ ಹಂಚಿಕೊಂಡ ನಟ ಭಾವನಾ, ನನಗೆ ಸೀರೆ ಅಂದ್ರೆ ಬಹಳ ಇಷ್ಟ. ಅದರಲ್ಲೂ ನನ್ನ ಕಲೆಕ್ಷನ್‌ಗಿಂತ ನಮ್ಮಮ್ಮನ ಸೀರೆ ಕಲೆಕ್ಷನ್‌ ಚೆನ್ನಾಗಿದೆ. ಹಾಗಾಗಿ ಆಗಾಗ್ಗೆ ಸೀರೆ ಫೋಟೋಶೂಟ್‌ಗೆ ಅಮ್ಮನ ಸೀರೆಯನ್ನೇ ಆಯ್ಕೆ ಮಾಡಿ ಉಡುತ್ತೇನೆ ಎನ್ನುತ್ತಾರೆ.

4/5

ಫ್ಯಾಷನೇಬಲ್‌ ನಟಿ ಭಾವನಾ ರಾವ್‌

ಗಾಳಿಪಟ ಕನ್ನಡ ಚಿತ್ರದ ಮೂಲಕ ಸಾಕಷ್ಟು ಹೆಸರು ಮಾಡಿರುವ ನಟಿ ಭಾವನಾ ರಾವ್‌ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಜತೆಗೆ ಆಗಾಗ್ಗೆ ಫ್ಯಾಷನ್‌ ಫೋಟೋಶೂಟ್‌ಗಳಲ್ಲೂ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಮ್ಮ ಫ್ಯಾಷನ್‌ ಅಪ್‌ಡೇಟ್‌ಗಳಿಗೆ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

5/5

ಮನಸ್ಸಿಗೆ ಮುದ ನೀಡುವಂತಹ ಲೆಮೆನ್‌ ಗ್ರೀನ್‌ ವರ್ಣದ ಸೀರೆಯಲ್ಲಿ ನಟಿ ಭಾವನಾ ರಾವ್‌ ಕಾಣಿಸಿಕೊಂಡು ಕಾರ್ಪೋರೇಟ್‌ ಕ್ಷೇತ್ರದ ಮಾನಿನಿಯರನ್ನು ಸೆಳೆದಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author