ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ನಟಿ ಇಶಾ ಕೊಪ್ಪಿಕರ್‌ ಸೀರೆಯಲ್ಲಿ ಪಕ್ಷಿಗಳ ಕಲರವ

ಬಹುಭಾಷಾ ತಾರೆ ಇಶಾ ಕೊಪ್ಪಿಕರ್‌ ಉಟ್ಟ ಸೀರೆ ಇದೀಗ ಸುದ್ದಿಯಾಗಿದೆ. ಸೀರೆಯ ಒಡಲ ತುಂಬೆಲ್ಲಾ ಇರುವ ಪಕ್ಷಿಗಳ ಕಲರವ ಸದ್ಯ ಸೀರೆ ಪ್ರಿಯರನ್ನು ಆಕರ್ಷಿಸಿದೆ. ಅವರ ಸೀರೆ ಕುರಿತಂತೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ನಟಿ ಇಶಾ ಕೊಪ್ಪಿಕರ್‌
1/5

ಬಹುಭಾಷಾ ನಟಿ ಇಶಾ ಕೊಪ್ಪಿಕರ್‌ ಸೀರೆಯಲ್ಲಿ ಪಕ್ಷಿಗಳ ಕಲರವ ತುಸು ಹೆಚ್ಚಾಗಿಯೇ ಇದೆ. ಹೌದು, ಇತ್ತೀಚೆಗೆ ಆವಾರ್ಡ್ ಸಮಾರಂಭದಲ್ಲಿ ಇಶಾ ಉಟ್ಟಿದ್ದ, ಈ ವಿಶೇ‍ಷ ಸೀರೆ ಇದೀಗ ಬಾಲಿವುಡ್‌ಗರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಸೀರೆ ಪ್ರಿಯ ಮಹಿಳೆಯರನ್ನು ತನ್ನತ್ತ ಸೆಳೆದಿದೆ. ಸೀರೆಯ ಒಡಲ ತುಂಬೆಲ್ಲಾ ಇರುವ ಪಕ್ಷಿಗಳ ಕಲರವ ನೋಡುಗರ ಮನ ಸೆಳೆದಿದೆ.

2/5

ಮತ್ತೆ ಕಾಣಿಸಿಕೊಳ್ಳುತ್ತಿರುವ ಇಶಾ ಕೊಪ್ಪಿಕರ್‌

ಬಾಲಿವುಡ್‌ ಮಾತ್ರವಲ್ಲ, ಕನ್ನಡದ ಸೂರ್ಯವಂಶ ಸಿನಿಮಾವೊಂದರಲ್ಲೂ ಡಾ. ವಿಷ್ಣುವರ್ಧನ್‌ ಅವರೊಂದಿಗೆ ಹಿಟ್‌ ಸಿನಿಮಾವೊಂದರಲ್ಲಿ ನಟಿಸಿದ್ದ ಇಶಾ ಕೊಪ್ಪಿಕರ್‌ ಸಾಕಷ್ಟು ವರ್ಷಗಳ ಕಾಲ ತೆರೆಯ ಹಿಂದೆ ಸರಿದಿದ್ದರು. ಆಗಾಗ್ಗೆ ಕೆಲವು ಸಮಾರಂಭಗಳಲ್ಲಿ ಹಾಗೂ ರಂಗಭೂಮಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದನ್ನು ಹೊರತು ಪಡಿಸಿದಲ್ಲಿ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚೆಗೆ ಕೆಲವೆಡೆ ತಮ್ಮ ಫ್ಯಾಷೆನಬಲ್‌ ಔಟ್‌ಫಿಟ್‌ ಹಾಗೂ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸೋಷಿಯಲ್‌ ಮೀಡಿಯಾದಲ್ಲೂ ಮೊದಲಿಗಿಂತ ಹೆಚ್ಚಾಗಿ ಸಕ್ರಿಯರಾಗಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

3/5

ಇಶಾ ಉಟ್ಟ ಪಕ್ಷಿಗಳ ಸೀರೆ

ಅಂದಹಾಗೆ, ಇಶಾ ಉಟ್ಟಿರುವ ಈ ಸೀರೆ ಡಿಸೈನರ್‌ ಬ್ಲ್ಯಾಕ್‌ ಹ್ಯಾಂಡ್‌ಲೂಮ್‌ ಡಿಸೈನರ್‌ ಸೀರೆಯಾಗಿದೆ. ಹ್ಯಾಂಡ್‌ಲೂಮ್‌ ಬನಾರಸಿ ಕಟಾನ್‌ ಸಿಲ್ಕ್‌ನ ಚಿಡಿಯಾ ಫ್ಯಾಬ್ರಿಕ್‌ನದ್ದಾಗಿದೆ ಎಂದು ಫ್ಯಾಷನ್‌ ವಿಮರ್ಶಕರು ತಿಳಿಸಿದ್ದಾರೆ. ಆದರೆ, ಸೀರೆ ಕುರಿತಂತೆ ಎಲ್ಲಿಯೂ ಇಶಾ ಡಿಟೇಲ್‌ ಆಗಿ ತಿಳಿಸಿಲ್ಲ!

4/5

ಬ್ಲ್ಯಾಕ್‌ ಸೀರೆಯಲ್ಲಿ ಇಶಾ ಆಕರ್ಷಕ ಲುಕ್‌

ಇನ್ನು, ಇಶಾ ಉಟ್ಟಿರುವ ಈ ಸೀರೆಯ ಬಾರ್ಡರ್‌ ಕೂಡ ಹೈಲೈಟಾಗುತ್ತಿದ್ದು, ಇದಕ್ಕೆ ಮ್ಯಾಚ್‌ ಮಾಡಿರುವ ಬ್ಲ್ಯಾಕ್‌ ಬ್ಲೌಸ್‌ ಕೂಡ ಅವರನ್ನು ಮತ್ತಷ್ಟು ಅಂದವಾಗಿಸಿದೆ. ಅವರ ಬನ್‌ ಹೇರ್‌ಸ್ಟೈಲ್‌, ಕಿವಿಯ ಜುಮ್ಕಾ, ಕೈಗಳ ಬಳೆ, ಉಂಗುರ ಹಾಗೂ ಹಣೆಯ ಬಿಂದಿ ಎಲ್ಲವೂ ಅವರನ್ನು ಮನಮೋಹಕವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ಇತ್ತೀಚೆಗೆ ಆವಾರ್ಡ್ ಸಮಾರಂಭದಲ್ಲಿ ಬಹುಭಾಷಾ ತಾರೆ ಇಶಾ ಕೊಪ್ಪಿಕರ್‌ ಉಟ್ಟಿದ್ದ ವಿಶೇ‍ಷ ಸೀರೆ ಇದೀಗ ಬಾಲಿವುಡ್‌ಗರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಸೀರೆ ಪ್ರಿಯ ಮಹಿಳೆಯರನ್ನು ತನ್ನತ್ತ ಸೆಳೆದಿದೆ.

ಶೀಲಾ ಸಿ ಶೆಟ್ಟಿ

View all posts by this author