Star Saree Fashion 2025: ಶಿಮ್ಮರ್ ಸೀರೆಯಲ್ಲಿ ಮಿಂಚಿದ ನಟಿ ಲಕ್ಷ್ಮಿ ಮಂಚು
Lakshmi Manchu Saree Look: ಟ್ಯೂಲ್ ಶಿಮ್ಮರ್ ಸೀರೆಯಲ್ಲಿ ನಟಿ ಲಕ್ಷ್ಮಿ ಮಂಚು ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಇವರು ಉಟ್ಟಿರುವ ಈ ಸೀರೆಯ ಸ್ಪೆಷಾಲಿಟಿಯಾದರೂ ಏನು? ಧರಿಸಿರುವ ಬ್ಲೌಸ್ ಯಾವ ಬಗೆಯದ್ದು? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.
ಜಗಮಗಿಸುವ ಟ್ಯೂಲ್ ಶಿಮ್ಮರ್ ಸೀರೆಯಲ್ಲಿ ನಟಿ ಲಕ್ಷ್ಮಿ ಮಂಚು ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಲಕ್ಷ್ಮಿಮಂಚು ಉಟ್ಟಿರುವ ಈ ಸೀರೆ ಸದ್ಯ ಪಾರ್ಟಿ ಪ್ರಿಯ ಸೀರೆ ಪ್ರಿಯ ಮಾನಿನಿಯರನ್ನು ಸೆಳೆದಿದೆ.
ಇದ್ಯಾವ ಬಗೆಯ ಸೀರೆ?
ನೋಡಲು ತಕ್ಷಣಕ್ಕೆ ಸಿಕ್ವಿನ್ಸ್ ಸೀರೆಯಂತೆ ಕಂಡರೂ ಇದು ಅದಲ್ಲ! ಇದನ್ನು ಟ್ಯೂಲ್ ಸೀರೆ ಎನ್ನಲಾಗುತ್ತದೆ. ಈ ಸೀರೆಯ ಸಿಕ್ವಿನ್ಸ್‌ಗಿಂತ ಬೇರೆಯಾಗಿದೆ. ಕಂಪ್ಲೀಟ್ ಶೈನಿಂಗ್ ಹೊಂದಿರುವ ಈ ಸೀರೆ ನಾಜೂಕಾಗಿದ್ದು, ಸಾಫ್ಟ್ ಫ್ಯಾಬ್ರಿಕ್ ಹೊಂದಿರುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಎಂಬೋಸಿಂಗ್ ಡಿಸೈನ್‌ನ ಬ್ಲೌಸ್
ಲಕ್ಷ್ಮಿ ಮಂಚು ಧರಿಸಿರುವ ಬ್ಲೌಸ್ ನೋಡಲು ಸ್ಲಿವ್ ಲೆಸ್ ವೇಸ್ಟ್ ಕೋಟ್‌ನಂತಿದೆ. ಕಂಪ್ಲೀಟ್ ಡಿಫರೆಂಟ್ ಡಿಸೈನ್ ಹೊಂದಿರುವ ಈ ಬ್ಲೌಸ್ ಮಲ್ಟಿ ಶೇಡ್‌ನ ಥ್ರೆಡ್‌ನಿಂದ ಡಿಸೈನ್ ಮಾಡಲಾಗಿದೆ. ಅಲ್ಲದೇ ಎಂಬೋಸಿಂಗ್ ಜತೆಜತೆಗೆ ಪ್ಯಾಚ್ ವರ್ಕ್‌ನಿಂದ ಡಿಸೈನ್ ಮಾಡಲಾಗಿದೆ. ಈ ಬ್ಲೌಸ್‌ನ ಮಧ್ಯೆ ಸೀರೆಯ ಸೆರಗನ್ನು ತೂರಿಸಿ, ಡ್ರೇಪ್ ಮಾಡಲಾಗಿದೆ. ಹಾಗಾಗಿ ಇದು ಕಂಪ್ಲೀಟ್ ಡಿಫರೆಂಟ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪಾರ್ಟಿ ಪ್ರಿಯ ಮಾನಿನಿಯರ ಚಾಯ್ಸ್
ಅಂದಹಾಗೆ, ಈ ಟ್ಯೂಲ್ ಡಿಸೈನ್‌ನ ಸೀರೆ ಈಗಾಗಲೇ ಆನ್‌ಲೈನ್‌ನಲ್ಲಿ ಬಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಸೆಲೆಬ್ರೆಟಿಗಳ ಫೇವರೇಟ್ ಪಾರ್ಟಿ ಸೀರೆ ಇದಾಗಿದೆ. ಈ ಸೀರೆಗೆ ಕಸ್ಟಮೈಸ್ ಬ್ಲೌಸನ್ನು ಧರಿಸುವುದರಿಂದ ಇಡೀ ಸೀರೆಗೆ ಡಿಫರೆಂಟ್ ಲುಕ್ ದೊರೆಯುತ್ತದೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಟ್ಯೂಲ್ ಶಿಮ್ಮರ್ ಸೀರೆಯಲ್ಲಿ ನಟಿ ಲಕ್ಷ್ಮಿ ಮಂಚು ಕಾಣಿಸಿಕೊಂಡಿದ್ದಾರೆ.