Star Saree Fashion 2025: ನಟಿ ಪ್ರಿಯಾಮಣಿಯ ಇಂಡೋ-ವೆಸ್ಟರ್ನ್ ಶೀರ್ ಸೀರೆ ಲವ್
Actress Priyamani: ಬಹುಭಾಷಾ ತಾರೆ ಪ್ರಿಯಾಮಣಿ ಇಂಡೋ-ವೆಸ್ಟರ್ನ್ ಲುಕ್ ನೀಡುವ ಸಾಫ್ಟ್ ನೆಟ್ಟೆಡ್ ಪಾರದರ್ಶಕ ಶೀರ್ ಸೀರೆಯಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಸೀರೆ? ಅವರ ಸ್ಟೈಲಿಂಗ್ ಬಗ್ಗೆ ಫ್ಯಾಷನ್ ವಿಮರ್ಶಕರು ಏನು ಹೇಳುತ್ತಾರೆ? ಇಲ್ಲಿದೆ ಡಿಟೇಲ್ಸ್.
ನಟಿ ಪ್ರಿಯಾಮಣಿಯ ನ್ಯೂಡ್ ಕಲರ್‌ನ ಶೀರ್ ಸೀರೆ ಸದ್ಯ ಸೋಷಿಯಲ್ ಮೀಡಿಯಾದ ಸೀರೆ ಪ್ರಿಯ ಅಭಿಮಾನಿಗಳನ್ನು ಸೆಳೆದಿದೆ.
ಪ್ರಿಯಾಮಣಿ ಶೀರ್ ಸೀರೆ ಲವ್
ಹೌದು, ಬಹುಭಾಷಾ ತಾರೆ ಪ್ರಿಯಾಮಣಿಯವರು ಸಿನಿಮಾವೊಂದರ ಇವೆಂಟ್‌ನಲ್ಲಿ ಉಟ್ಟಿದ್ದ, ಸಾಫ್ಟ್ ನೆಟ್ಟೆಡ್ ಫ್ಯಾಬ್ರಿಕ್‌ನ ಇಂಡೋ-ವೆಸ್ಟರ್ನ್ ಲುಕ್ ನೀಡುವ ಪಾರದರ್ಶಕ ಶೀರ್ ಸೀರೆ, ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದ್ದು, ಸೀರೆ ಪ್ರಿಯರನ್ನು ಆಕರ್ಷಿಸಿದೆ.
ವಿಂಟರ್ ಸೀಸನ್ ರೂಲ್ಸ್ ಬ್ರೇಕ್
ಅಂದಹಾಗೆ, ಈ ಸೀರೆ ವಿಂಟರ್ ಸೀಸನ್‌ನ ಟ್ರೆಂಡ್‌ನಲ್ಲಿಲ್ಲ! ಈ ಪಾಸ್ಟೆಲ್ ಶೈಲಿಯ ಸೀರೆಗಳು ಅದರಲ್ಲೂ ಶೀರ್ ಫ್ಯಾಬ್ರಿಕ್‌ನವು ಸಮ್ಮರ್ ಸೀಸನ್‌ನಲ್ಲಿ ಮಾತ್ರ ಟ್ರೆಂಡಿಯಾಗಿರುತ್ತವೆ. ಚಳಿಗಾಲದಲ್ಲಿ ಕಾಣಿಸುವುದೂ ಇಲ್ಲ! ಆದರೆ, ನಟಿ ಪ್ರಿಯಾಮಣಿಯವರು ಸೀರೆ ಲೋಕದ ಈ ರೂಲ್ಸ್ ಬ್ರೇಕ್ ಮಾಡಿ, ಈ ಶೈಲಿಯ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಳುವಾದ ಫ್ಯಾಬ್ರಿಕ್‌ನ ಸೀರೆಗೆ ಹಾಲ್ಟರ್ ನೆಕ್‌ನ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡಿದ್ದಾರೆ. ಚಳಿಗಾಲದಲ್ಲೂ ಬೇಸಿಗೆಯ ಈ ಟ್ರೆಂಡ್ ಫಾಲೋ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪ್ರಿಯಾಮಣಿ ಸೀರೆ ಲವ್
ಪ್ರಿಯಾಮಣಿ ಬಹುತೇಕ ಸಮಯ ಇವೆಂಟ್‌ಗಳಲ್ಲಿ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಅವರಿಗೆ ಒಪ್ಪುತ್ತದೆ ಕೂಡ. ಈ ಬಾರಿ ಅವರು ಸೀಸನ್‌ಗೆ ವಿರುದ್ಧವೆಂಬಂತೆ ಪಾಸ್ಟೆಲ್ ಸೀರೆಯ ಆಯ್ಕೆ ಮಾಡಿರುವುದು ಅದರಲ್ಲೂ ತೆಳುವಾದ ಶೀರ್ ಸೀರೆಯಲ್ಲಿ ಕಾಣಿಸಿಕೊಂಡಿರುವುದು ಅವರು ಟ್ರೆಂಡ್ ಫಾಲೋ ಮಾಡುವುದಿಲ್ಲ! ಬದಲಿಗೆ ಟ್ರೆಂಡ್ ಸೆಟ್ ಮಾಡುತ್ತಾರೆ ಎಂಬುದನ್ನು ತೋರ್ಪಡಿಸುತ್ತದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಚಳಿಗಾಲದಲ್ಲಿ ನ್ಯೂಡ್ ಶೇಡ್
ಒಟ್ಟಾರೆ, ಚಳಿಗಾಲದಲ್ಲಿ ನ್ಯೂಡ್ ಶೆಡ್‌ನ ಶೀರ್ ಸೀರೆಯನ್ನು ಫ್ಯಾಷನ್ ಲೋಕದ ರೂಲ್‌ಗೆ ವಿರುದ್ಧವಾಗಿ ಟ್ರೆಂಡ್ ಸೆಟ್ ಮಾಡಿರುವ ಲಿಸ್ಟ್‌ಗೆ ಪ್ರಿಯಾಮಣಿ ಕೂಡ ಸೇರುತ್ತಾರೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.