Star Saree Fashion 2025: ನಟಿ ರುಕ್ಮಿಣಿ ವಸಂತ್ ರೆಟ್ರೋ ಲುಕ್ಗೆ ಅಭಿಮಾನಿಗಳು ಫಿದಾ
Actress Rukmini Vasanth: ಕಾಂತಾರ ಚಾಪ್ಟರ್ 1 ನಾಯಕಿ ರುಕ್ಮಿಣಿ ವಸಂತ್ ಅವರ ಸಾದಾ ಗೋಲ್ಡನ್ ಡಬ್ಬಲ್ ಶೇಡ್ ಸೀರೆಯ ರೆಟ್ರೋ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಈ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ನೀಡಿರುವ ರಿವ್ಯೂ ಏನು? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ರುಕ್ಮಿಣಿ ವಸಂತ್, ನಟಿ -
ಕಾಂತಾರ ಚಾಪ್ಟರ್ 1 ನಟಿ ರುಕ್ಮಿಣಿ ವಸಂತ್ ಅವರ ಸಿಂಪಲ್ ಸೀರೆಯ ರೆಟ್ರೋ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌದು, ನಟಿ ರುಕ್ಮಿಣಿ ವಸಂತ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಸಾದಾ ಗೋಲ್ಡನ್ ಡಬ್ಬಲ್ ಶೇಡ್ನ ಸಿಂಪಲ್ ಸೀರೆಯ ರೆಟ್ರೊ ಲುಕ್ಗೆ ಅಭಿಮಾನಿಗಳ ಪ್ರಶಂಸೆಯ ಸುರಿಮಳೆಯಾಗಿದೆ. ಅಷ್ಟೇಕೆ! ಸೆಲೆಬ್ರೆಟಿಗಳು ಕೂಡ ಹಾಡಿ ಹೊಗಳಿದ್ದಾರೆ.
ಅಭಿಮಾನಿಗಳ ಮನಗೆದ್ದ ಸಿಂಪಲ್ ಲುಕ್
ರುಕ್ಮಿಣಿ ವಸಂತ್ ಇತ್ತೀಚೆಗೆ ನಾನಾ ಫ್ಯಾಷನ್ ಶೂಟ್ಗಳ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇದ್ದಾರೆ. ಅವುಗಳಲ್ಲಿ ಅವರ ಎಥ್ನಿಕ್ ಲುಕ್ ಹಾಗೂ ಟ್ರೆಡಿಷನಲ್ ಲುಕ್ ಇರುವುದಕ್ಕೆ ಸಖತ್ ಹೊಗಳಿಕೆ ಸಿಗಲಾರಂಭಿಸಿದೆ.
ಇದ್ಯಾವ ಬಗೆಯ ಲುಕ್?
ಅಂದಹಾಗೆ, ಈ ಚಿತ್ರಗಳಲ್ಲಿ ರುಕ್ಮಿಣಿ ವಸಂತ್ ಉಟ್ಟಿರುವ ಸೀರೆ ಯಾವುದೇ ಡಿಸೈನರ್ ಸೀರೆಯಲ್ಲ! ಬದಲಿಗೆ ತೀರಾ ಸಿಂಪಲ್ ಸೀರೆಯಾಗಿದೆ. ಇತ್ತ ಗೋಲ್ಡನ್ ಶೇಡೂ ಅಲ್ಲ, ಅತ್ತ ಕಾಪರ್ ಗೋಲ್ಡೂ ಅಲ್ಲ ಎನ್ನುವಂತೆ ಡಬ್ಬಲ್ ಶೇಡ್ನ ಸೀರೆ ಇದಾಗಿದೆ. ಇದರ ಬ್ಲೌಸ್ ಕೂಡ ಸಾದಾ ಆಗಿದೆ.
ರೆಟ್ರೋ ಲುಕ್ನಲ್ಲಿ ರುಕ್ಮಿಣಿ ವಸಂತ್
ಇನ್ನು, ರುಕ್ಮಿಣಿ ವಸಂತ್ ಉಟ್ಟಿರುವ ಸೀರೆಗೆ ಹೆಚ್ಚೇನೂ ಸಿಂಗಾರ ಮಾಡಿಲ್ಲ, ಅಚ್ಚರಿಯೆಂದರೇ ಅವರು ಒಂದೂ ಕೂಡ ಆಭರಣಗಳನ್ನು ಧರಿಸಿಲ್ಲ! ಕೈಗಳಲ್ಲಿ ಒಂದೆರೆಡು ಬಳೆಗಳನ್ನು ಧರಿಸಿರುವುದನ್ನು ಹೊರತುಪಡಿಸಿದಲ್ಲಿ, ಹಣೆಗೊಂದು ಬಿಂದಿ ಇಟ್ಟಿದ್ದಾರೆ. ರೆಟ್ರೋ ಲುಕ್ ನೀಡುವ ಸಲುವಾಗಿ ಎರಡು ಗುಲಾಬಿಗಳಿಂದ ಹೇರ್ ಸ್ಟೈಲಿಂಗ್ ಮಾಡಿದ್ದಾರೆ. ಇದು ಪಕ್ಕಾ ಹಳೆಯ ನಾಯಕಿ ನಟಿಯರಂತೆ ರೆಟ್ರೋ ಹೀರೊಯಿನ್ ಲುಕ್ ಕಲ್ಪಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಮಿಂಚು.
ನ್ಯಾಚುರಲ್ ಸ್ಟೈಲಿಂಗ್
ರುಕ್ಮಿಣಿಯವರ ಈ ರೆಟ್ರೋ ಸೀರೆ ಸ್ಟೈಲಿಂಗ್ ಅವರ ನ್ಯಾಚುರಲ್ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಹೆಚ್ಚು ಆಡಂಬರದ ಸ್ಟೈಲಿಂಗ್ ಇಲ್ಲದೇ ಅವರನ್ನು ನೈಜ ಸುಂದರಿಯನ್ನಾಗಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.