ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ ಯಮುನಾ ಶ್ರೀನಿಧಿ!

Yamuna Srinidhi Saree Look: ಸದಾ ಸಿಂಪಲ್‌ ಕಾಟನ್‌ ಸೀರೆಯಲ್ಲಿ ಕಾಣಿಸಿಕೊಳ್ಳುವ ನಟಿ ಯಮುನಾ ಶ್ರೀನಿಧಿಯವರು ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ಈ ಲುಕ್‌ ಬಗ್ಗೆ ಅವರು ಹೇಳಿರುವುದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ನಟಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಯಮುನಾ ಶ್ರೀನಿಧಿ
1/5

ಸದಾ ಸಿಂಪಲ್‌ ಲುಕ್‌ನಲ್ಲೆ ಕಾಣಿಸಿಕೊಳ್ಳುವ ನಟಿ ಯಮುನಾ ಶ್ರೀನಿಧಿಯವರು ಇದೀಗ ಗ್ರ್ಯಾಂಡ್‌ ರೇಷ್ಮೆ ಸೀರೆಯಲ್ಲಿ ಮಹಾರಾಣಿಯಂತೆ ಕಂಗೊಳಿಸಿದ್ದಾರೆ. ಅರರೆ., ಇದೇನಿದು? ಎಂದು ಯೋಚಿಸುತ್ತಿದ್ದೀರಾ! ಖುದ್ದು ಯಮುನಾ ಶ್ರೀನಿಧಿಯವರೇ ಇದಕ್ಕೆ ಉತ್ತರಿಸಿದ್ದಾರೆ.

2/5

ಅಪರೂಪದ ಗ್ರ್ಯಾಂಡ್‌ ಲುಕ್‌

ಅಂದಹಾಗೆ, ನಾನು ಯಾವತ್ತೂ ರಿಯಲ್‌ ಲೈಫ್‌ನಲ್ಲಿ ರೇಷ್ಮೆ ಸೀರೆ ಹಾಗೂ ಗ್ರ್ಯಾಂಡ್‌ ಲುಕ್‌ನಲ್ಲಿ ಕಾಣಿಸಲು ಬಯಸುವುದಿಲ್ಲ, ನನಗೆ ಅಷ್ಟಾಗಿ ಇಷ್ಟವಾಗುವುದೂ ಇಲ್ಲ! ನನ್ನ ಲೈಫ್‌ಸ್ಟೈಲ್‌ ಕುರಿತಂತೆ ವಿಶ್ವವಾಣಿ ಟಿವಿ ಸ್ಪೆಷಲ್‌ ನಡೆಸಿದ್ದ ಹೋಮ್‌ ಟೂರ್‌ ಹಾಗೂ ಲೈಫ್‌ಸ್ಟೈಲ್‌ ಸಂದರ್ಶನದಲ್ಲೆ ಎಲ್ಲವನ್ನೂ ಸವಿವರವಾಗಿ ಈ ಬಗ್ಗೆ ಕಾರಣವನ್ನು ವಿವರಿಸಿದ್ದೇನೆ ಎಂದಿರುವ ಯಮುನಾ ಅವರು, ಈಗ್ಯಾಕೆ ಈ ಗ್ರ್ಯಾಂಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ? ಎಂಬುದನ್ನೂ ತಿಳಿಸಿದ್ದಾರೆ.

3/5

ಪ್ರಾಜೆಕ್ಟ್ ನಿಮಿತ್ತ ಈ ರೇಷ್ಮೆ ಸೀರೆಯ ಲುಕ್‌

ಪ್ರಾಜೆಕ್ಟ್‌ವೊಂದರ ನಿಮಿತ್ತ ನಾನು ರೇಷ್ಮೆ ಸೀರೆ, ಗ್ರ್ಯಾಂಡ್‌ ಜ್ಯುವೆಲರಿ ಹಾಗೂ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ, ಇದು ರಿಯಲ್‌ ಲೈಫ್‌ನಲ್ಲಲ್ಲ! ಬದಲಿಗೆ ರೀಲ್‌ ಲೈಫ್‌ನಲ್ಲಿ ಎಂದು ತಿಳಿಸಿದ್ದಾರೆ ಯಮುನಾ.

4/5

ಅಮ್ಮನಿಗೆ ಖುಷಿಯಾಯ್ತು!

ಮಗಳನ್ನು ಗ್ರ್ಯಾಂಡ್‌ ಲುಕ್‌ನಲ್ಲಿ ನೋಡಲು ಬಯಸುತ್ತಿದ್ದ, ನನ್ನಮ್ಮನಿಗೆ ಮಾತ್ರ ನನ್ನಈ ಲುಕ್‌ ನೋಡಿ ಖುಷಿಯಾಗಿದೆ. ನನ್ನನ್ನು ಅತ್ಯಾಕರ್ಷಕವಾಗಿಸಿರುವ ಕ್ರೆಡಿಟ್‌ ಮೇಕಪ್‌ ಆರ್ಟಿಸ್ಟ್ ರಂಜಿತಾ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ ಯಮುನಾ.

5/5

ಒಟ್ಟಾರೆ, ನಟಿ ಯಮುನಾ ಶ್ರೀ ನಿಧಿಯವರ ಈ ಗ್ರ್ಯಾಂಡ್‌ ಲುಕ್‌ಗೆ ಫ್ಯಾಷನ್‌ ವಿಮರ್ಶಕರು ಕೂಡ ಫುಲ್‌ ಮಾರ್ಕ್ಸ್ ನೀಡಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author