ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ಬ್ರಾಲೆಟ್‌ ಬ್ಲೌಸ್‌ ಸೀರೆಯಲ್ಲಿ ಅನಾವರಣಗೊಂಡ ನಟಿ ನಿಕ್ಕಿಯ ಮಾದಕ ಲುಕ್‌

ಹಳದಿ ವರ್ಣದ ಬ್ರಾಲೆಟ್‌ ಡಿಸೈನರ್‌ ಬ್ಲೌಸ್‌ ಸೀರೆಯಲ್ಲಿ ಮಾದಕವಾಗಿ ಕಾಣಿಸಿಕೊಂಡಿರುವ ಬಾಲಿವುಡ್‌ ನಟಿ ನಿಕ್ಕಿ ತಂಬೊಲಿ ಅವರ ಈ ಲುಕ್‌ ಸೀರೆ ಪ್ರಿಯರನ್ನು ಸೆಳೆದಿದೆ. ಹಾಗಾದಲ್ಲಿ ಏನಿದು ಬ್ರಾಲೆಟ್‌ ಬ್ಲೌಸ್‌? ಡಿಸೈನ್‌ ಹೇಗಿದೆ? ಈ ಎಲ್ಲದರ ಕುರಿತಂತೆ ಫ್ಯಾಷನ್‌ ವಿಮರ್ಶಕರು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ಚಿತ್ರಗಳು: ನಿಕ್ಕಿ ತಂಬೊಲಿ, ಬಾಲಿವುಡ್‌ ನಟಿ.
1/5

ಗಮನ ಸೆಳೆದ ಗ್ಲಾಮರಸ್‌ ಲುಕ್‌

ಬಾಲಿವುಡ್‌ ನಟಿ ನಿಕ್ಕಿ ತಂಬೊಲಿ ಅವರ ಗ್ಲಾಮರಸ್‌ ಸೀರೆ ಲುಕ್‌ಗೆ ಫಾಲೋವರ್ಸ್ ಮನ ಸೋತಿದ್ದಾರೆ. ಅಲ್ಲದೇ ಗ್ಲಾಮರಸ್‌ ಲುಕ್‌ ಬಯಸುವ ಸೀರೆ ಪ್ರಿಯರು ಅದರಲ್ಲೂ, ಅಲ್ಟ್ರಾ ಮಾಡರ್ನ್‌ ಹುಡುಗಿಯರು ಫಿದಾ ಆಗಿದ್ದಾರೆ.

2/5

ನಟಿ ನಿಕ್ಕಿ ತಂಬೊಲಿ ಸೀರೆ ಜಾದೂ

ಅಂದಹಾಗೆ, ನಟಿ ನಿಕ್ಕಿ ತಂಬೊಲಿ ಧರಿಸಿರುವ ಸೀರೆಯೇನೂ ಡಿಸೈನರ್‌ ಸೀರೆಯಲ್ಲ! ಬದಲಿಗೆ ಸಿಂಪಲ್‌ ಸೀದಾ ಸಾದಾ ಬಣ್ಣದ ಹಳದಿ ವರ್ಣದ ಸೀರೆಯಿದು. ಇದರ ಮೇಲೆ ಒಂದೂ ಕೂಡ ಡಿಸೈನ್‌ ಇಲ್ಲ! ಇದರ ಬ್ರಾಲೆಟ್‌ ಬ್ಲೌಸ್‌ ಹಾಗೂ ನಿಕ್ಕಿಯ ಬಾಡಿ ಮಾಸ್‌ ಇಂಡೆಕ್ಸ್ ಈ ಸೀರೆಯನ್ನು ಹೈಲೈಟ್‌ ಮಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ಬ್ರಾಲೆಟ್‌ ಡಿಸೈನರ್‌ ಬ್ಲೌಸ್‌ ಕಮಾಲ್‌

ಮಯೂರ್‌ ಫ್ಯಾಬ್ರಿಕ್‌ ಆರ್ಟ್ ಬ್ರಾಂಡ್‌ನ ಹಳದಿ ಸಾದಾ ಸೀರೆಯನ್ನು ಉಟ್ಟಿರುವ ನಿಕ್ಕಿ ಮನಮೋಹಕವಾಗಿ ಕಾಣಲು ಪ್ರಮುಖ ಕಾರಣ ಏನು ಅಂತಿರಾ! ಅವರು ಧರಿಸಿರುವ ಬಿಕಿನಿ ಸ್ಟೈಲ್‌ನ ಬ್ರಾಲೆಟ್‌ ಪ್ರಿನ್ಸ್ ಕಟ್‌ ಡಿಸೈನರ್‌ ಬ್ಲೌಸ್‌. ಹೌದು, ಅವರು ಧರಿಸಿರುವ ಈ ಡಿಸೈನರ್‌ ಬ್ಲೌಸ್‌, ಡೀಪ್‌ ನೆಕ್‌ಲೈನ್‌ ಹೊಂದಿದ್ದು, ಕ್ರಿಸ್ಟಲ್‌ ಲೇಸ್‌ನ ತೆಳುವಾದ ಬಾರ್ಡರ್‌ ಹೊಂದಿದೆ. ಸ್ಟ್ರಾಪ್‌ ಕೂಡ ಕ್ರಿಸ್ಟಲ್‌ ಲೇಸ್‌ ಲೈನಿಂಗ್‌ ಬಾರ್ಡರ್‌ ಹೊಂದಿದೆ.

4/5

ಆಕರ್ಷಕ ಡಿಸೈನ್‌

ಇನ್ನು, ಬ್ಲೌಸ್‌ನ ಬ್ಯಾಕ್‌ಸೈಡ್‌ ಬ್ಯಾಕ್‌ಲೆಸ್‌ನಂತಿದ್ದು, ಟೈಯಿಂಗ್‌ ಅಪ್ಷನ್‌ ಕೂಡ ಇದೆ. ಬ್ಲೌಸ್‌ನ ಮುಂಭಾಗದಲ್ಲಿ ಹೃದಯಾಕಾರದ ಕ್ರಿಸ್ಟಲ್‌ ಲೇಸ್‌ನಂತಿರುವ ಬ್ರೋಚ್‌ ಅಳವಡಿಸಿ ಡಿಸೈನ್‌ ಮಾಡಲಾಗಿದೆ. ಇದು ಇಡೀ ಬ್ಲೌಸನ್ನು ಅತ್ಯಾಕರ್ಷಕವಾಗಿ ಬಿಂಬಿಸುವುದರೊಂದಿಗೆ ಗ್ಲಾಮರಸ್‌ ಲುಕ್‌ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ನಿಕ್ಕಿ ಬಿಎಂಐ ಹೈಲೈಟ್‌ ಮಾಡಿದ ಸೀರೆ

ಈ ಯೆಲ್ಲೋ ಸೀರೆ ಇಡೀ ನಿಕ್ಕಿಯ ಬಿಎಂಐಯನ್ನು ಹೈಲೈಟ್‌ ಮಾಡಿದೆ. ಫಿಟ್‌ನೆಸ್‌ ಫ್ರೀಕ್‌ ಆಗಿರುವ ನಿಕ್ಕಿಯ ಗ್ಲಾಮರಸ್‌ ಲುಕ್‌ಗೆ ಸಾಥ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಒಟ್ಟಾರೆ, ಅಲ್ಟ್ರಾ ಮಾಡರ್ನ್‌ ಹುಡುಗಿಯರಿಗೆ ಈ ರೀತಿ ಸ್ಟೈಲಿಂಗ್‌ ಮಾಡಲು ನಿಕ್ಕಿಯ ಸೀರೆ ಸ್ಟೈಲಿಂಗ್‌ ಪ್ರೇರೇಪಿಸಿದೆ ಎನ್ನುತ್ತಾರೆ.

ಶೀಲಾ ಸಿ ಶೆಟ್ಟಿ

View all posts by this author