ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ನೀಲಿ ಸೀರೆಯ ಮೋಹಪಾಶಕ್ಕೆ ಸಿಲುಕಿದ ರಾಧಿಕಾ ಆಪ್ಟೆ!

Radhika Apte Saree Look: ಮನೀಶ್‌ ಮಲ್ಹೋತ್ರಾ ಡಿಸೈನ್‌ನ ನೀಲಿ ವರ್ಣದ ಸ್ಯಾಟಿನ್‌ ಸಾದಾ ಸೀರೆ ನಟಿ ರಾಧಿಕಾ ಆಪ್ಟೆಯವರನ್ನು ಅಪ್ಪಿ ಕೊಂಡಿದೆ. ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಸೀರೆ? ಅವರಂತೆ ಕಾಣಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್.

ಬಾಲಿವುಡ್‌ ನಟಿ ರಾಧಿಕಾ ಆಪ್ಟೆ
1/5

ಸಾದಾ ಸ್ಯಾಟಿನ್‌ ನೀಲಿ ಸೀರೆಯಲ್ಲಿ ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದಾರೆ.

2/5

ಮನೀಶ್‌ ಮಲ್ಹೋತ್ರಾ ಡಿಸೈನರ್‌ ಸೀರೆ

ಬಾಲಿವುಡ್‌ನ ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಡಿಸೈನ್‌ನ ಈ ಸಾದಾ ಸ್ಯಾಟಿನ್‌ ನೀಲಿ ಸೀರೆ, ಮಿನಿ ಬಾರ್ಡರ್‌ ಹೊಂದಿದ್ದು, ಮತ್ಯಾವುದೇ ಡಿಸೈನ್‌ ಹೊಂದಿಲ್ಲ! ಅವರು ಧರಿಸಿರುವ ಹೈ ಕಾಲರ್‌ ನೆಕ್‌ ಬ್ಲೌಸ್‌ ಕೂಡ ಗ್ಲಾಮರಸ್‌ ಆಗಿಲ್ಲ! ಆದರೂ ರಾಧಿಕಾ ಆಪ್ಟೆ ಈ ಸೀರೆಯನ್ನು ಉಟ್ಟು, ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಇದು ಅವರ ಸೀರೆ ಪ್ರೇಮವನ್ನು ತೋರ್ಪಡಿಸುತ್ತದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

3/5

ರಾಧಿಕಾ ಆಪ್ಟೆ ಪುರಾಣ

ಅಂದಹಾಗೆ, ರಾಧಿಕಾ ಆಪ್ಟೆ ಮೊದಲಿನಿಂದಲೂ ಸಾಕಷ್ಟು ಸಿನಿಮಾಗಳ ಮೂಲಕ ಹೆಸರು ಮಾಡಿದ್ದಾರೆ. ಕೆಲವೊಮ್ಮೆ ಗ್ಲಾಮರಸ್‌ ಹೆಸರಲ್ಲಿ ಬಿಚ್ಚಮ್ಮಳಾಗಿಯೂ ಕಾಣಿಸಿಕೊಂಡು, ಸುದ್ದಿಗೆ ಗ್ರಾಸವಾಗಿದ್ದಾರೆ. ಆದರೆ, ಇದುವರೆಗೂ ಹೆಚ್ಚಾಗಿ ಫ್ಯಾಷನ್‌ ಬಗ್ಗೆ ತಲೆಕೆಡಿಸಿಕೊಳ್ಳದ ಅವರು, ಇತ್ತೀಚೆಗೆ ಫ್ಯಾಷನ್‌ವೇರ್‌ಗಳತ್ತ ಗಮನಹರಿಸತೊಡಗಿದ್ದಾರೆ. ಅದರಲ್ಲೂ ಮಗುವಾದ ನಂತರ ಸೆಕೆಂಡ್‌ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಹಾಗಾಗಿ ಸಾಕಷ್ಟು ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಉತ್ತಮ ಉತ್ತಮ ಬೆಳವಣಿಗೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

4/5

ನೀಲಿ ಸೀರೆಯಲ್ಲಿ ತೇಲಿ ಹೋದ ರಾಧಿಕಾ

ಡೀಪ್‌ ಬ್ಲ್ಯೂ ಶೈನಿಂಗ್‌ ಸ್ಯಾಟಿನ್‌ ಸೀರೆಯು ರಾಧಿಕಾ ಆಪ್ಟೆಯವರ ಸ್ಕಿನ್‌ ಟೋನ್‌ಗೆ ಹೊಂದದಿದ್ದರೂ ಅವರ ಸಿಂಪಲ್‌ ಲುಕ್‌ ಅವರ ಸ್ಟೈಲಿಂಗನ್ನು ವಿಭಿನ್ನವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ರಾಧಿಕಾ ಆಪ್ಟೆಯಂತೆ ನೀಲಿ ಸೀರೆಯಲ್ಲಿ ಕಾಣಿಸಲು ಇಲ್ಲಿವೆ ಟಿಪ್ಸ್

  • ಸಾದಾ ಸೀರೆ ಆಯ್ಕೆ ಮಾಡಿ.
  • ಸಿಂಪಲ್‌ ಮೇಕೋವರ್‌ ಇರಲಿ.
  • ಸಿಂಪಲ್‌ ಆಕ್ಸೆಸರೀಸ್‌ ಧರಿಸಿ.
  • ಇಂಡೋ-ವೆಸ್ಟರ್ನ್‌ ಲುಕ್‌ ನೀಡಿ.

ಶೀಲಾ ಸಿ ಶೆಟ್ಟಿ

View all posts by this author