ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ನೀಲಿ ಸಿಲ್ಕ್‌ ಸೀರೆಯಲ್ಲಿ ಪ್ರಿಯಾಮಣಿಯಂತೆ ಕಾಣಿಸಲು ಇಲ್ಲಿವೆ 5 ಟಿಪ್ಸ್

Actress Priyamani Saree Look: ನೀಲಿ ಬಣ್ಣದ ಸಿಲ್ಕ್‌ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿರುವ ಬಹುಭಾಷಾ ತಾರೆ ಪ್ರಿಯಾಮಣಿಯಂತೆ ನೀವೂ ಕೂಡ ಕಾಣಿಸಬೇಕೇ? ಹಾಗಾದಲ್ಲಿ ಒಂದಿಷ್ಟು ಸೀರೆ ಡ್ರೇಪಿಂಗ್‌ ಹಾಗೂ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ, ನೋಡಿ. ಸಿಲ್ಕ್‌ ಸೀರೆ ಉಟ್ಟಾಗ ನಾವೇಕೆ ಸೆಲೆಬ್ರೆಟಿಗಳಂತೆ ಕಾಣಿಸುವುದಿಲ್ಲ! ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವೆಂಬಂತೆ ಸ್ಟೈಲಿಸ್ಟ್‌ಗಳು, ಸಿಲ್ಕ್ ಸೀರೆಯಲ್ಲೂ ಆಕರ್ಷಕವಾಗಿ ಎಲಿಗೆಂಟಾಗಿ ಕಾಣಿಸಲು ಈ ಕೆಳಗಿನ ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ನೀಡಿದ್ದಾರೆ.

ಚಿತ್ರಗಳು: ಪ್ರಿಯಾ ಮಣಿ, ಬಹುಭಾಷಾ ನಟಿ, ಫೋಟೋಗ್ರಫಿ: ರಾಜೇನ್‌ ಬ್ರದರ್ಸ್
1/5

ನೀಲಿ ಬಣ್ಣದ ಸಿಲ್ಕ್‌ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸುತ್ತಿರುವ ಬಹುಭಾಷಾ ತಾರೆ ಪ್ರಿಯಾಮಣಿಯಂತೆ ನೀವೂ ಕೂಡ ಕಾಣಿಸಬೇಕೇ? ಹಾಗಾದಲ್ಲಿ ಒಂದಿಷ್ಟು ಸೀರೆ ಡ್ರೇಪಿಂಗ್‌ ಹಾಗೂ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ ಮಂಗಲಾ ಭಾನಸುಧೆ. ಹೌದು, ಸಿಲ್ಕ್‌ ಸೀರೆ ಉಟ್ಟಾಗ ನಾವೇಕೆ ಸೆಲೆಬ್ರೆಟಿಗಳಂತೆ ಕಾಣಿಸುವುದಿಲ್ಲ! ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವೆಂಬಂತೆ ಸ್ಟೈಲಿಸ್ಟ್‌ಗಳು, ಸಿಲ್ಕ್ ಸೀರೆಯಲ್ಲೂ ಆಕರ್ಷಕವಾಗಿ ಎಲಿಗೆಂಟಾಗಿ ಕಾಣಿಸಲು ಈ ಕೆಳಗಿನ ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ನೀಡಿದ್ದಾರೆ.

2/5

ನೀಲಿ ವರ್ಣದ ಸೀರೆಯ ಆಯ್ಕೆ ಹೀಗಿರಲಿ

ಪ್ರಿಯಾಮಣಿಯವರು ಇಲ್ಲಿ ಆಯ್ಕೆ ಮಾಡಿರುವ ನೀಲಿ ಸೀರೆ ಸಿಂಪಲ್‌ ಆಗಿದ್ದು, ಬೆಂಟೆಕ್ಸ್ ಬಾರ್ಡರ್‌ ಹಾಗೂ ಹಸುವಿನ ಚಿತ್ತಾರ ಹೊಂದಿದೆ. ಹಾಗಾಗಿ ಸೀರೆ ಆಯ್ಕೆ ಮಾಡುವಾಗ ಇದೇ ವಿನ್ಯಾಸದ್ದನ್ನು ಚೂಸ್‌ ಮಾಡಿ.

ಸೀರೆಯ ಬ್ಲೌಸ್‌ ಸ್ಟಿಚ್ಚಿಂಗ್‌

ಗ್ಲಾಮರಸ್‌ ಲುಕ್‌ ಬೇಕಿದ್ದಲ್ಲಿ ಪ್ರಿಯಾಮಣಿ ಉಟ್ಟಿರುವಂತಹ ಸ್ಲೀವ್‌ಲೆಸ್‌ ಬ್ಲೌಸ್‌ನಂತೇ ಕಾಣಿಸುವ ಸ್ಲೀವ್‌ಲೆಸ್‌ ಬ್ಲೌಸ್‌ ಹೊಲೆಸಿ ಧರಿಸಿ.

3/5

ಜ್ಯುವೆಲರಿ ಮಿನಿಮಲ್‌ ಆಗಿರಲಿ

ಪ್ರಿಯಾಮಣಿಯ ಕಿವಿಯೊಲೆ, ಉಂಗುರ ಹೊರತುಪಡಿಸಿದರೇ, ಈ ಸೀರೆಗೆ ಅವರು ಹೆಚ್ಚು ಜ್ಯುವೆಲರಿ ಧರಿಸಿಲ್ಲ! ಹಾಗಾಗಿ ನೀವೂ ಕೂಡ ಚಾಂದ್‌ಬಾಲಿಯಂತಹ ದೊಡ್ಡ ಹ್ಯಾಂಗಿಂಗ್ಸ್ ರೀತಿಯ ಆಭರಣ ಧರಿಸಿ. ಬೇಕಿದ್ದಲ್ಲಿ ಸ್ಟೇಟ್‌ಮೆಂಟ್‌ ನೆಕ್ಲೇಸ್‌, ಕಂಗನ್‌ ಧರಿಸಿ.

4/5

ಮೇಕಪ್‌ ಸಿಂಪಲ್‌ ಆಗಿರಲಿ

ಸಿಲ್ಕ್‌ ಸೀರೆಯೆಂದು ಅತಿಯಾದ ಮೇಕಪ್‌ ಬೇಡ. ಡೀಸೆಂಟ್‌ ಲುಕ್‌ ನೀಡುವ ಮೇಕಪ್‌, ಹಣೆಗೊಂದು ಬಿಂದಿ, ಲೈಟ್‌ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳಿ.

5/5

ಬನ್‌ ಹೇರ್‌ಸ್ಟೈಲ್‌

ಈ ಚಿತ್ರದಲ್ಲಿ ಪ್ರಿಯಾಮಣಿ ಮಧ್ಯೆ ಬೈತಲೆ ತೆಗೆದು ಬನ್‌ ಹೇರ್‌ಸ್ಟೈಲ್‌ ಮಾಡಿದ್ದು, ಬನ್‌ ಸುತ್ತಲೂ ಸೈಡಿಗೆ ವೈಟ್‌ ಆರ್ಟಿಫಿಷಿಯಲ್‌ ಸಿಕ್ಕಿಸಿದ್ದಾರೆ. ಅದೇ ರೀತಿ ವಿನ್ಯಾಸ ಮಾಡಬಹುದು. ಆಗ ಥೇಟ್‌ ಪ್ರಿಯಾಮಣಿಯ ಸ್ಟೈಲಿಂಗ್‌ನಂತೆಯೇ ಕಾಣಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author