Star Saree Fashion 2026: ರೇಷ್ಮೆ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸಿದ ಕಂಗನಾ
Kangana Ranaut: ನಟಿ, ಸಂಸದೆ ಕಂಗನಾ ರಾಣಾವತ್ ತಮ್ಮ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅವರ ಈ ಟ್ರೆಡಿಷನಲ್ ಲುಕ್ ಹೇಗಿದೆ? ಅವರಂತೆಯೇ ನೀವು ಕಾಣಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್.
ರೇಷ್ಮೆ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸಿದ್ದಾರೆ ನಟಿ ಹಾಗೂ ಸಂಸದೆ ಕಂಗನಾ ರಾಣಾವತ್. ಹೌದು, ಕಂಗನಾ ರಾಣಾವತ್ ಅವರು ತಮ್ಮ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಟ್ರೆಡಿಷನಲ್ ಲುಕ್ ನೀಡುವ ಗ್ರ್ಯಾಂಡ್ ಹಾಗೂ ರಾಯಲ್ ಲುಕ್ ನೀಡುವ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಸಿಲ್ಕ್ ಸೀರೆ ಪ್ರಿಯರನ್ನು ಆಕರ್ಷಿಸಿದೆ.
ಕಂಗನಾ ಟ್ರೆಡಿಷನಲ್ ಸೀರೆ
ಸೆಲೆಬ್ರೆಟಿ ಡಿಸೈನರ್ ಗೌರಂಗ್ ಶಾ ಡಿಸೈನ್ ಮಾಡಿರುವ ರಾಯಲ್ ಕ್ರೀಮ್ ಹಾಗೂ ಪರ್ಪಲ್ ಬಿಗ್ ಬಾರ್ಡರ್ ಹೊಂದಿರುವ ಈ ಸಿಲ್ಕ್ ಸೀರೆ ಉಟ್ಟಿರುವ ಕಂಗನಾ ಟ್ರೆಡಿಷನಲ್ ಲುಕ್‌ಗೆ ಸೈ ಎಂದಿದ್ದಾರೆ.
ರೇಷ್ಮೆ ಸೀರೆ –ಬ್ಲೌಸ್ ಡಿಟೇಲ್ಸ್
ಕಂಗನಾ ಸೀರೆ ಹ್ಯಾಂಡ್‌ಲೂಮ್‌ನದ್ದಾಗಿದೆ. ಐವರಿ ಅಥವಾ ಕ್ರೀಮ್ ಶೇಡ್ ಹೊಂದಿದ್ದು, ಸೀರೆ ಒಡಲಿನಲ್ಲಿ ಫ್ಲೋರಲ್ ಮೊಟಿಫ್ಸ್ ಚಿತ್ತಾರವಿದೆ. ಇದರ ಜತೆಗೆ ರಿಚ್ ಲುಕ್ ನೀಡುವ ಗೋಲ್ಡನ್ ಜರಿಯ ಬಿಗ್ ಬಾರ್ಡರ್ ಒಳಗೊಂಡಿದೆ. ಹೈನೆಕ್‌ಲೈನ್ ಹೊಂದಿರುವ ಬ್ಲೌಸ್ ಅಂದವಾಗಿ ಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಟ್ರೆಡಿಷನಲ್ ಜ್ಯುವೆಲರಿ ಮ್ಯಾಚ್ ಮಾಡಿದ ಕಂಗನಾ
ರೇಷ್ಮೆ ಸೀರೆಗೆ ಮ್ಯಾಚ್ ಆಗುವಂತೆ ಸ್ಟೇಟ್‌ಮೆಂಟ್ ವಿಂಟೇಜ್ ಪೋಲ್ಕಿ ಚೋಕರ್ ನೆಕ್ಲೇಸ್, ಓಲೆ ಹಾಗೂ ಬಳೆಗಳನ್ನು ಧರಿಸಿ ಕಂಗನಾ ಮ್ಯಾಚ್ ಮಾಡಿದ್ದಾರೆ.
ಕಂಗನಾರಂತೆ ನೀವೂ ಕಾಣಿಸುವುದು ಹೇಗೆ?
1) ದೊಡ್ಡ ಬಾರ್ಡರ್‌ನ ಐವರಿ ಶೇಡ್ ಹಾಗೂ ಕಾಂಟ್ರಸ್ಟ್ ಜರಿ ಬಾರ್ಡರ್‌ನ ಸೀರೆಯನ್ನೇ ಆಯ್ಕೆ ಮಾಡಿ, ಉಡಿ.
2) ಸೀರೆಯ ಬ್ಲೌಸ್ ಡಿಸೈನ್ ಹೈನೆಕ್‌ದ್ದಾಗಿರಲಿ.
3) ಹಣೆಗೊಂದು ಬಿಂದಿ ಇರಲಿ.
4) ಟ್ರೆಡಿಷನಲ್ ಜ್ಯುವೆಲರಿ ಧರಿಸಿ.
5) ಸಿಂಪಲ್ ನೀರು ಜಡೆಯನ್ನು ಹಾಕಿ, ಕೂದಲ ಹಿಂಭಾಗದಲ್ಲಿ ಹೂಗಳನ್ನು ಮುಡಿಯಿರಿ.