ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Saree Fashion 2026: ಪಾರ್ವತಿ ನಾಯರ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಿಸಿದ ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆ

Actress Parvati Nair: ಕಸ್ಟಮೈಸ್ಡ್ ನ್ಯೂಸ್‌ ಪೇಪರ್‌ ಪ್ರಿಂಟ್‌ ವಿನ್ಯಾಸದ ಮಲ್‌ ಮಲ್‌ ಸೀರೆಯಲ್ಲಿ ಬಹುಭಾಷಾ ನಟಿ ಪಾರ್ವತಿ ನಾಯರ್‌ ಕಾಣಿಸಿಕೊಂಡಿದ್ದಾರೆ. ಇದ್ಯಾವ ಬಗೆಯ ಸೀರೆ? ಅವರ ಸ್ಟೈಲಿಂಗ್‌ ಹೇಗಿದೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಪಾರ್ವತಿ ನಾಯರ್‌, ನಟಿ
1/5

ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆ

ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆಯು ನಟಿ ಪಾರ್ವತಿ ನಾಯರ್‌ ಅವರ ಸ್ಟೈಲ್‌ ಸ್ಟೇಟ್‌ಮೆಂಟನ್ನೇ ಬದಲಿಸಿದೆ.

2/5

ಬ್ಲ್ಯಾಕ್‌ & ವೈಟ್‌ ರೆಟ್ರೊ ಲುಕ್‌ ಸೀರೆ

ಹೌದು, ಎಲ್ಲರೂ ಟ್ರೆಂಡ್‌ನಲ್ಲಿರುವ ಸೀರೆಗಳನ್ನು ಇಲ್ಲವೇ ಫೆಸ್ಟೀವ್‌ ಸೀಸನ್‌ನ ಗ್ರ್ಯಾಂಡ್‌ ಸೀರೆಗಳನ್ನು ಉಟ್ಟು ಸಂಭ್ರಮಿಸುತ್ತಿದ್ದರೇ, ಪಾರ್ವತಿ ನಾಯರ್‌ ಮಾತ್ರ ಈ ಬಾರಿ ವಿಭಿನ್ನ ಲುಕ್‌ ನೀಡುವ ಅದರಲ್ಲೂ ರೆಟ್ರೊ ಲುಕ್‌ ನೀಡುವಂತಹ ಬ್ಲ್ಯಾಕ್‌ & ವೈಟ್‌ ಕಸ್ಟಮೈಸ್ಡ್ ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

3/5

ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆಯ ವಿಶೇಷತೆ

ಅಂದಹಾಗೆ, ಪಾರ್ವತಿ ನಾಯರ್‌ ಉಟ್ಟಿರುವ ನ್ಯೂಸ್‌ ಪೇಪರ್‌ ಪ್ರಿಂಟ್‌ ಸೀರೆ ಹೊಸ ಕಾನ್ಸೆಪ್ಟ್‌ನದ್ದೇನಲ್ಲ! ಬದಲಿಗೆ ಹಳೆಯ ವಿನ್ಯಾಸವನ್ನೇ ಹೊಸ ಪ್ರಿಂಟ್‌ನಲ್ಲಿ ವಿನ್ಯಾಸ ಮೂಡಿಸಿರುವ ಸೀರೆಯಿದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ಮಲ್‌ಮಲ್‌ ಕಾಟನ್‌ ಸೀರೆಯಲ್ಲಿ ಮೂಡಿದ ನ್ಯೂಸ್‌ ಪ್ರಿಂಟ್‌

ಮೃದುವಾದ ಮಲ್‌ ಮಲ್‌ ಕಾಟನ್‌ ಫ್ಯಾಬ್ರಿಕ್‌ನ ಸೀರೆಯ ಮೇಲೆ ನ್ಯೂಸ್‌ ಪ್ರಿಂಟ್‌ ಮೂಡಿಸಲಾಗಿದೆ. ಇದು ಸೀರೆಯ ಅಂದವನ್ನು ಹೆಚ್ಚಿಸಿದೆ. ಇನ್ನು ಪಾರ್ವತಿ ನಾಯರ್‌ ಈ ಸೀರೆಗೆ ಗ್ಲಾಮರಸ್‌ ಲುಕ್‌ ನೀಡುವಂತಹ ಸ್ಟ್ರಾಪ್‌ ಶೈಲಿಯ ಕಾರ್ಸೆಟ್‌ ಶೈಲಿಯ ಬ್ಲೌಸ್‌ ಮ್ಯಾಚ್‌ ಮಾಡಿದ್ದಾರೆ. ಹಾಗಾಗಿ ಇಡೀ ಸೀರೆಗೆ ಗ್ಲಾಮರಸ್‌ ಟಚ್‌ ಸಿಕ್ಕಿದೆ ಹಾಗೂ ನೋಡಲು ಇಂಡೋ-ವೆಸ್ಟರ್ನ್‌ ಲುಕ್‌ ದೊರಕಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

5/5

ಆಕ್ಸೆಸರೀಸ್‌ ಇಲ್ಲದ ಮೇಕೋವರ್‌

ಅಚ್ಚರಿ ಎಂದರೇ, ಈ ಸೀರೆಯೊಂದಿಗೆ ಪಾರ್ವತಿ ನಾಯರ್‌ ಒಂದೇ ಒಂದು ಆಕ್ಸೆಸರೀಸ್‌ ಕೂಡ ಧರಿಸಿಲ್ಲ! ತೀರಾ ಸಿಂಪಲ್‌ ಮೇಕೋವರ್‌ ಮಾಡಿದ್ದಾರೆ. ಹಾಗಾಗಿ ಇಡೀ ಸೀರೆಯೇ ಹೈಲೈಟ್‌ ಆಗಿದೆ. ಸೀರೆಯ ಸೌಂದರ್ಯ ಹೆಚ್ಚಿಸಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author