ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Saree Fashion 2026: ಶ್ರುತಿ ಹಾಸನ್‌ ರೆಡ್‌ ರೆಡಿಮೇಡ್‌ ಸೀರೆಯ ಗಮ್ಮತ್ತು

Shruti Haasan: ಇತ್ತೀಚೆಗೆ ನಟಿ ಶ್ರುತಿ ಹಾಸನ್‌ ಧರಿಸಿದ್ದ ಇಂಡೋ-ವೆಸ್ಟರ್ನ್‌ ರೆಡ್‌ ಸೀರೆಯು ಯುವತಿಯರನ್ನು ಮಾತ್ರವಲ್ಲ, ಪ್ರಯೋಗಾತ್ಮಕ ಸೀರೆ ಪ್ರಿಯ ಮಹಿಳೆಯರನ್ನು ಆಕರ್ಷಿಸಿದೆ. ಇದ್ಯಾವ ಬಗೆಯ ಸೀರೆ? ಸ್ಪೆಷಾಲಿಟಿ ಏನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಶ್ರುತಿ ಹಾಸನ್‌, ನಟಿ
1/5

ರೆಡ್‌ ಸೀರೆಯ ಖದರ್‌

ಇದು ಸೀರೆಯೋ ಅಥವಾ ಇನ್ಯಾವುದೋ ಬಗೆಯ ಔಟ್‌ಫಿಟ್ಟೋ? ಹಾಗಿದೆ ನಟಿ ಶ್ರುತಿ ಹಾಸನ್‌ ಧರಿಸಿರುವ ರೆಡ್‌ ಸೀರೆಯ ಖದರ್‌!

2/5

ಪ್ರಯೋಗಾತ್ಮಕ ಡಿಸೈನರ್‌ ಸೀರೆ

ಹೌದು, ಇತ್ತೀಚೆಗೆ ನಟಿ ಶ್ರುತಿ ಹಾಸನ್‌ ಧರಿಸಿ, ವೈರಲ್‌ ಆಗಿರುವ ಇಂಡೋ-ವೆಸ್ಟರ್ನ್‌ ಶೈಲಿಯ ಪ್ರಯೋಗಾತ್ಮಕ ರೆಡ್‌ ಸೀರೆಯು ಇದೀಗ ಕೇವಲ ಯುವತಿಯರನ್ನು ಮಾತ್ರವಲ್ಲ, ಪ್ರಯೋಗಾತ್ಮಕ ಸೀರೆ ಪ್ರಿಯ ಮಹಿಳೆಯರನ್ನು ಆಕರ್ಷಿಸಿದೆ. ಹೊಸ ವಿನ್ಯಾಸದ ಸೀರೆಯ ಡಿಸೈನ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಡಿಸೈನರ್ ದಿಶಾ.

3/5

ಇದ್ಯಾವ ಬಗೆಯ ಸೀರೆ?

ಅಂದಹಾಗೆ, ಶ್ರುತಿ ಹಾಸನ್‌ ಧರಿಸಿರುವ ಈ ರೆಡ್‌ ಸೀರೆ ಮಲ್ಟಿ ಡಿಸೈನರ್‌ ಸೀರೆ ಎನ್ನಬಹುದು. ಯಾಕೆಂದರೇ, ಸೀರೆಯಿಂದಿಡಿದು ಬ್ಲೌಸ್‌ ಕೂಡ ಮಾನೋಕ್ರೊಮಾಟಿಕ್‌ ಕಲರ್‌ನಲ್ಲಿದೆ. ಅಲ್ಲದೇ, ಸ್ಕರ್ಟ್ ಬದಲು ಸೀರೆ ಡಿವೈಡರ್‌ ಪ್ಯಾಂಟ್‌ ಒಳಗೊಂಡಿದೆ. ಅಷ್ಟು ಮಾತ್ರವಲ್ಲ, ದುಪಟ್ಟಾ ರೀತಿಯ ಸೆರಗು ಹೊಂದಿದೆ. ಬ್ಲೌಸ್‌ ಮೇಲೆ ಧರಿಸಿರುವ ಲೇಸರ್‌ ಕಟ್‌ ಕ್ರಾಪ್‌ ಲೇಯರ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಸಮ್ಮರ್‌ ಸೀಸನ್‌ಗೆ ಇತಿಶ್ರೀ ಹಾಡಿದ ಸೀರೆಯಿದು

ಬೇಸಿಗೆ ಸೀಸನ್‌ ಎಂಡ್‌ ಆಗುವ ಮುನ್ನವೇ ಲೇಯರ್‌ ಲುಕ್‌ ನೀಡಿದ ಸೀರೆಯಿದು. ಮುಂಬರುವ ಸೀಸನ್‌ಗೆ ಹೇಳಿ ಮಾಡಿಸಿರುವ ಸೀರೆ ಎನ್ನುವ ಫ್ಯಾಷನ್‌ ವಿಮರ್ಶಕಿ ರಾಶಿ ಪ್ರಕಾರ, ಮಲ್ಟಿ ಲೇಯರ್ಡ್ ರೆಡ್‌ ಸೀರೆಗಳು ಕಂಟೆಂಪರರಿ ಡಿಸೈನ್‌ನಲ್ಲಿ ಹೆಚ್ಚು ಪಾಪುಲರ್‌ ಆಗಿವೆ ಎನ್ನುತ್ತಾರೆ.

5/5

ಟ್ರೆಂಡ್‌ ಸೆಟ್‌ ಮಾಡಿದ ಸೀರೆ

ಅತಿ ಹೆಚ್ಚಾಗಿ ಬ್ಲ್ಯಾಕ್‌ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುವ ಶ್ರುತಿ ಹಾಸನ್‌ ಈ ಬಾರಿ ರೆಡ್‌ ಸೀರೆಯಲ್ಲಿ ಕಾಣಿಸಿಕೊಂಡಿರುವುದು ಸೂಪರ್‌ ಮಾಡೆಲ್‌ ಲುಕ್‌ ನೀಡಿದೆ. ಅವರ ಈ ಸೀರೆ ಲುಕ್‌ ಟ್ರೆಂಡ್‌ ಸೆಟ್‌ ಮಾಡಿದೆ ಎಂದು ವಿಶ್ಲೇಷಿಸಿದ್ದಾರೆ ರಿಯಾ ಶರ್ಮಾ.

ಶೀಲಾ ಸಿ ಶೆಟ್ಟಿ

View all posts by this author