ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Saree Fashion 2026: ಕಾಟನ್‌ ಸೀರೆ ಪ್ರಿಯರನ್ನು ಸೆಳೆದ ನಟಿ ವೇದಿಕಾ ಉಟ್ಟ ಕಸವು ಸೀರೆ

Handloom Kasavu Saree: ಇತ್ತೀಚೆಗೆ ನಟಿ ವೇದಿಕಾ ಉಟ್ಟಿದ್ದ ಹ್ಯಾಂಡ್‌ಲೂಮ್‌ ಕಸವು ಸೀರೆಯು ಕಾಟನ್‌ ಸೀರೆ ಪ್ರಿಯರ ಗಮನಸೆಳೆದಿದೆ. ಈ ಸೀರೆಯ ವಿಶೇಷತೆಯೇನು? ವೇದಿಕಾರ ಸೀರೆ ಸ್ಟೈಲಿಂಗ್‌ ಹೇಗಿದೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ವೇದಿಕಾ, ನಟಿ
1/5

ನಟಿ ವೇದಿಕಾ ಉಟ್ಟಿದ್ದ ಹ್ಯಾಂಡ್‌ಲೂಮ್‌ ಕಸವು ಸೀರೆಯು ಸದ್ಯ ಕಾಟನ್‌ ಸೀರೆ ಪ್ರಿಯರ ಗಮನ ಸೆಳೆದಿದೆ.

2/5

ವೇದಿಕಾರಿಗೆ ಎಲಿಗೆಂಟ್‌ ಲುಕ್‌ ನೀಡಿದ ಕಸವು ಸೀರೆ

ಹೌದು, ನಟಿ ವೇದಿಕಾರನ್ನು ನೋಡಲು ಸಿಂಪಲ್‌ ಆಗಿ ಎಲಿಗೆಂಟಾಗಿ ಬಿಂಬಿಸಿರುವ ಈ ಕಸವು ಸೀರೆಯು ಸದ್ಯ ಆನ್‌ಲೈನ್‌ ಸೀರೆ ಮಾರಾಟಗಾರರ ವೆಬ್‌ಸೈಟ್‌ಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಸೀಸನ್‌ ಬದಲಾದರೂ ಸೀರೆಯ ಬೇಡಿಕೆ ಮಾತ್ರ ಕುಂದಿಲ್ಲ ಎನ್ನುತ್ತಾರೆ ಸೀರೆಯ ಮಾರಾಟಗಾರರು.

3/5

ವೇದಿಕಾ ಉಟ್ಟ ಸೀರೆಯ ಸ್ಪೆಷಾಲಿಟಿ

ಅಂದಹಾಗೆ, ವೇದಿಕಾ ಉಟ್ಟಿದ್ದ ಕೇರಳದ ಈ ಹ್ಯಾಂಡ್‌ಲೂಮ್‌ ಕಸವು ಕಾಟನ್‌ ಸೀರೆಯು ಯೆಲ್ಲೋ ಚೆಕ್ಸ್ ಮತ್ತು ವಿಂಟೇಜ್‌ ಪ್ರಿಂಟ್ಸ್ ಹೊಂದಿದ್ದು, ಈ ಸ್ಯಾರಿ ಟರ್ಮೆರಿಕ್‌ ಬ್ರ್ಯಾಂಡ್‌ನದ್ದಾಗಿದೆ.

4/5

ಕಸವು ಸೀರೆಯ ವಿಶೇಷತೆ

ಕ್ಲಾಸಿಕ್‌ ಹ್ಯಾಂಡ್‌ಲೂಮ್‌ನ ಸೀರೆ ಇದಾಗಿದ್ದು, ಬ್ರಿಥೆಬಲ್‌ ಫೀಚರ್‌ ಹೊಂದಿರುವುದರಿಂದ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ಸೀರೆಯ ತುಂಬೆಲ್ಲಾ ವಿಂಟೇಜ್‌ ಲುಕ್‌ ನೀಡುವಂತಹ ಮಲ್ಟಿ ಫ್ಲೋರಲ್‌ ಪ್ರಿಂಟ್ಸ್ ಹರಡಿದ್ದು, ಇದರೊಂದಿಗಿರುವ ಬೋಲ್ಡ್ ಹಳದಿ ಚೆಕ್ಸ್ ಪ್ಯಾಟರ್ನ್‌ ಹಾಗೂ ಗೋಲ್ಡನ್‌ ಚಿಕ್ಕ ಬಾರ್ಡರ್‌ ವೇದಿಕಾರನ್ನು ಅತ್ಯಾಕರ್ಷಕವಾಗಿಸಿದೆ ಎನ್ನುತ್ತಾರೆ ಸೀರೆ ವಿಮರ್ಶಕರು.

5/5

ಹಾಲ್ಟರ್‌ ನೆಕ್‌ಲೈನ್‌ ಬ್ಲೌಸ್‌ ಮ್ಯಾಚಿಂಗ್‌

ಈ ಕಸವು ಸೀರೆಗೆ ವೇದಿಕಾ ಧರಿಸಿರುವ ಹಾಲ್ಟರ್‌ ನೆಕ್‌ಲೈನ್‌ನ ಯೆಲ್ಲೋ ಬ್ಲೌಸ್‌ ಕೊಂಚ ಗ್ಲಾಮರ್‌ ಟಚ್‌ ಕೂಡ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದರೊಂದಿಗೆ ಅವರು ಮುಡಿದಿರುವಂತಹ ಹೂ ಹೇರ್‌ಸ್ಟೈಲನ್ನು ಅಂದವಾಗಿಸಿದೆ. ಧರಿಸಿರುವ ಸಿಂಪಲ್‌ ಮಿನಿಮಲ್‌ ಆಕ್ಸೆಸರೀಸ್‌ ಅವರ ಮೇಕೋವರ್‌ಗೆ ಸಾಥ್‌ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಶೀಲಾ ಸಿ ಶೆಟ್ಟಿ

View all posts by this author