Star Saree Fashion 2026: ಮಹಿಳೆಯರನ್ನು ಸೆಳೆದ ದಿಯಾ ಮಿರ್ಜಾ ಉಟ್ಟ ಹ್ಯಾಂಡ್‌ಲೂಮ್ ಸೀರೆ
ನಟಿ ದಿಯಾ ಮಿರ್ಜಾ ಧರಿಸಿದ್ದ ಹ್ಯಾಂಡ್‌ಲೂಮ್ ಸೀರೆ ಮಾನಿನಿಯರನ್ನು ಸೆಳೆದಿದ್ದು, ಮುಂಬರುವ ಸೀಸನ್‌ನಲ್ಲಿ ಟ್ರೆಂಡಿಯಾಗುವ ಎಲ್ಲ ಮುನ್ಸೂಚನೆಯನ್ನು ನೀಡಿದೆ. ಅವರ ಈ ಸೀರೆಯ ಸ್ಪೆಷಾಲಿಟಿ ಏನು? ಅವರಂತೆಯೇ ಸ್ಟೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ವಿವರ.
ಫ್ಯಾಷನ್ ಪ್ರಿಯರ ಗಮನ ಸೆಳೆದ ಸೀರೆ
ದಿಯಾ ಮಿರ್ಜಾ ಉಟ್ಟಿದ್ದ ಹ್ಯಾಂಡ್‌ಲೂಮ್ ಸೀರೆ ಸದ್ಯ ಸೀರೆ ಪ್ರಿಯರ ಕಣ್ಮನ ಸೆಳೆದಿದೆ.
ಮುಂಬರುವ ಸೀಸನ್‌ನಲ್ಲಿ ಟ್ರೆಂಡಿಯಾಗುವ ಗ್ಯಾರಂಟಿ
ಹೌದು, ಇದೀಗ ಈ ಹ್ಯಾಂಡ್‌ಲೂಮ್ ಸೀರೆ ಎಲ್ಲ ವರ್ಗದ ಮಾನಿನಿಯರನ್ನು ಸೆಳೆದಿದ್ದು, ಮುಂಬರುವ ಸೀಸನ್‌ನಲ್ಲಿ ಟ್ರೆಂಡಿಯಾಗುವ ಮುನ್ಸೂಚನೆಯನ್ನು ನೀಡಿದೆ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು.
ದಿಯಾ ಫ್ಯಾಷನ್ ಪ್ರೇಮ
ಅಂದಹಾಗೆ, ದಿಯಾ ಮಿರ್ಜಾ ಬಹುಭಾಷಾ ತಾರೆ. ಮದುವೆಯಾಗಿ ಮಗುವಾದ ನಂತರ ಸಿನಿಮಾಗಳು ಕಡಿಮೆಯಾದರೂ ಸಾಕಷ್ಟು ಜಾಹೀರಾತು ಹಾಗೂ ಫ್ಯಾಷನ್ ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದವರು. ಸೋಶಿಯಲ್ ಮೀಡಿಯಾ ಮೂಲಕ ಆಗಾಗ್ಗೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಹಾಗೂ ಫ್ಯಾಷನ್ ಶೂಟ್ ಫೋಟೊಗಳನ್ನು ಪ್ರಸ್ತುತ ಪಡಿಸುತ್ತಿರುವ ಚೆಲುವೆ.
ದಿಯಾ ಉಟ್ಟ ಸೀರೆ
ದಿಯಾ ಮಿರ್ಜಾ ಉಟ್ಟಿರುವ ಈ ಸೀರೆ ಶುದ್ಧ ಹ್ಯಾಂಡ್‌ಲೂಮ್‌ನದ್ದಾಗಿದೆ. ಅದರಲ್ಲೂ ಇತ್ತೀಚೆಗೆ ಟ್ರೆಂಡಿಯಾಗಿರುವ ಜೆಮೆಟ್ರಿಕಲ್ ಸ್ಟ್ರೈಪ್ಸ್ ಡಿಸೈನ್ ಹೊಂದಿದೆ. ವೈಟ್ ಶೇಡ್‌ನ ಮೇಲೆ ಈ ಸ್ಟ್ರೈಪ್ಸ್ ಇರುವುದು ಸೀರೆಯ ಸೌಂದರ್ಯ ಹೊಂದಿದ್ದು, ಇಂದಿನ ಜನರೇಷನ್ ಯುವತಿಯರ ಅಭಿರುಚಿಗೆ ತಕ್ಕಂತಹ ವಿನ್ಯಾಸ ಹೊಂದಿದೆ. ಪರಿಣಾಮ ಈ ಸೀರೆ ಇದೀಗ ಸೀರೆ ಪ್ರಿಯ ಯುವತಿಯರನ್ನು ಸೆಳೆದಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹ್ಯಾಂಡ್‌ಲೂಮ್ ಸೀರೆಯಲ್ಲಿ ದಿಯಾರಂತೆ ಕಾಣಲು ಹೀಗೆ ಮಾಡಿ
- ಶುದ್ಧ ಹ್ಯಾಂಡ್‌ಲೂಮ್ ಸೀರೆ ಆಯ್ಕೆ ಮಾಡಿ.
- ಜೆಮೆಟ್ರಿಕಲ್ ಪ್ರಿಂಟ್ಸ್ ಇರುವ ಹ್ಯಾಂಡ್‌ಲೂಮ್ ಸೀರೆ ಚೂಸ್ ಮಾಡಿ.
- ಕಾಂಟ್ರಸ್ಟ್ ಬ್ಲೌಸ್ ಆಯ್ಕೆ ಆಕರ್ಷಕವಾಗಿ ಕಾಣಿಸುವುದು.
- ಆಕ್ಸಿಡೈಸ್ಟ್ ಜ್ಯುವೆಲರಿಗಳು ಈ ಸೀರೆಯ ಅಂದವನ್ನು ಹೆಚ್ಚಿಸುತ್ತವೆ.
- ಸಿಂಪಲ್ ಮೇಕಪ್ ಹಾಗೂ ಹಣೆಗೆ ಬಿಂದಿ ಪರ್ಫೆಕ್ಟ್ ದೇಸಿ ಲುಕ್ ನೀಡುತ್ತವೆ.