ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Saree Fashion 2026: ಮಾಧುರಿ ದೀಕ್ಷಿತ್‌ ಫ್ಲೋರಲ್‌ ಸೀರೆ ಸ್ಟೈಲಿಂಗ್‌ಗಾಗಿ 6 ಟಿಪ್ಸ್

ಈ ಸೀಸನ್‌ನಲ್ಲಿ ಟ್ರೆಂಡಿಯಾಗಿ ಈಗಾಗಲೇ ಮಹಿಳೆಯರ ಮನಸೂರೆಗೊಂಡಿರುವ ವೈಬ್ರೆಂಟ್‌ ಲೈಟ್‌ವೈಟ್‌ ಫ್ಲೋರಲ್‌ ಸೀರೆಯಲ್ಲಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರಂತೆ ಕಾಣಿಸಲು ಈ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ ಎಂದು ಸಲಹೆ ನೀಡಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಚಿತ್ರಗಳು: ಮಾಧುರಿ ದೀಕ್ಷಿತ್‌, ಬಾಲಿವುಡ್‌ ನಟಿ
1/5

ವೈಬ್ರೆಂಟ್‌ ಶೇಡ್‌ ಆಯ್ಕೆ ಮಾಡಿ

ವೈಬ್ರೆಂಟ್‌ ಕಲರ್‌ನ ಫ್ಲೋರಲ್‌ ಸೀರೆಯಲ್ಲಿ ನೀವೂ ಕೂಡ ನಟಿ ಮಾಧುರಿ ದೀಕ್ಷಿತ್‌ ಅವರಂತೆ ಕಾಣಿಸಬಹುದು. ಇದಕ್ಕಾಗಿ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ವೈಬ್ರೆಂಟ್‌ ಶೇಡ್‌ಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ ನಿಯಾನ್‌, ಆರೆಂಜ್‌, ಕರೆಂಟ್‌ ಬ್ಲ್ಯೂ, ಬ್ಲಡ್‌ ರೆಡ್‌ ಹೀಗೆ ಎದ್ದು ಕಾಣುವಂತಹ ಕಲರ್‌ ಸೀರೆಗಳನ್ನು ಆಯ್ಕೆ ಮಾಡಬಹುದು.

2/5

ಫ್ಲೋರಲ್‌ ಪ್ರಿಂಟೆಡ್‌ ವಿನ್ಯಾಸದ ಸೀರೆ

ಸೀಸನ್‌ನಲ್ಲಿ ಚಾಲ್ತಿಯಲ್ಲಿರುವ ಬಗೆಬಗೆಯ ಫ್ಲೋರಲ್‌ ಪ್ರಿಂಟೆಡ್ ಸೀರೆಗಳನ್ನು ಚೂಸ್‌ ಮಾಡಿ, ಉಟ್ಟುಕೊಳ್ಳಿ. ಇವು ಮನಸ್ಸನ್ನು ಮುದಗೊಳಿಸುವುದರೊಂದಿಗೆ ನೋಡುಗರಿಗೂ ಪ್ರಿಯವಾಗುತ್ತವೆ.

3/5

ಲೈಟ್‌ವೈಟ್‌ ಶಿಫಾನ್‌/ಜಾರ್ಜೆಟ್‌ ಸೀರೆ

ಶಿಫಾನ್‌ ಹಾಗೂ ಜಾರ್ಜೆಟ್‌ನಂತಹ ಲೈಟ್‌ವೈಟ್‌ ಸೀರೆಗಳನ್ನು ಆರಿಸಿಕೊಳ್ಳಿ. ಯಾಕೆಂದರೆ ಇವು ಮಹಿಳೆಯರನ್ನು ಸ್ಲಿಮ್‌ ಆಗಿ ಬಿಂಬಿಸುತ್ತವೆ. ಜತೆಗೆ ನಿರ್ವಹಣೆ ಮಾಡುವುದು ಸುಲಭವಾಗುತ್ತದೆ. ಗ್ಲಾಮರಸ್‌ ಲುಕ್‌ಗಾಗಿ ಸ್ಲಿವ್‌ಲೆಸ್‌ ಇಲ್ಲವೇ ಹಾಲ್ಟರ್‌ ನೆಕ್‌ ಲೈನ್‌ ಬ್ಲೌಸ್‌ ಧರಿಸಿ. ಇವು ಮಾಡರ್ನ್‌ ಲುಕ್‌ ನೀಡುತ್ತವೆ.

4/5

ಮಿನಿಮಲ್‌ ಆಕ್ಸೆಸರೀಸ್‌ ಧರಿಸಿ

ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸಿದಾಗ ನೋಡಲು ಎಲಿಗೆಂಟಾಗಿ ಕಾಣಿಸುತ್ತದೆ. ಕ್ಯಾಶುವಲ್‌ ಲುಕ್‌ಗೆ ಮ್ಯಾಚ್‌ ಆಗುತ್ತದೆ. ಇದಕ್ಕಾಗಿ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳನ್ನು ಕೂಡ ಧರಿಸಬಹುದು.

5/5

ಮೇಕಪ್‌ ಹಿತ-ಮಿತವಾಗಿರಲಿ

ಮೇಕಪ್‌ ಹಿತ ಮಿತವಾಗಿರಲಿ. ಮುಖ ಲಕ್ಷಣವಾಗಿ ಕಾಣಿಸಲು ಬೇಕಿದ್ದಲ್ಲಿ ಹಣೆಗೊಂದು ಮ್ಯಾಚಿಂಗ್‌ ಬಿಂದಿ ಇರಿಸಿ. ಕಣ್ಣಿಗೆ ಲೈಟ್‌ ಮೇಕಪ್‌ ಕೂಡ ಮಾಡಬಹುದು.

ಶೀಲಾ ಸಿ ಶೆಟ್ಟಿ

View all posts by this author