ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Saree Fashion 2026: ಪಲಕ್‌ ತಿವಾರಿಯ ಪಿಂಕ್‌ ಸೀರೆಗೆ ಫಾಲೋವರ್ಸ್ ಫಿದಾ

Palak Tiwari: ಬಾಲಿವುಡ್‌ನ ಯುವ ನಟಿ ಪಲಕ್‌ ತಿವಾರಿ ಉಟ್ಟಿದ್ದ ಪಿಂಕ್‌ ಸೀರೆಗೆ ಫಾಲೋವರ್ಸ್ ಫಿದಾ ಆಗಿದ್ದಾರೆ. ಅಷ್ಟು ಮಾತ್ರವಲ್ಲ, ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಈ ಸೀರೆಯ ರಿಪ್ಲಿಕಾಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ.

ಚಿತ್ರಗಳು: ಪಲಕ್‌ ತಿವಾರಿ, ಬಾಲಿವುಡ್‌ ನಟಿ
1/5

ಬೇಡಿಕೆ ಹೆಚ್ಚಳ

ಬಾಲಿವುಡ್‌ ಯುವ ನಟಿ ಪಲಕ್‌ ತಿವಾರಿಯ ಪಿಂಕ್‌ ಫ್ಲೋರಲ್‌ ಸೀರೆಗೆ ಆಕೆಯ ಫಾಲೋವರ್‌ಗಳು ಫಿದಾ ಆಗಿದ್ದಾರೆ. ಹೌದು, ಅಷ್ಟು ಮಾತ್ರವಲ್ಲ, ಈ ವೆಡ್ಡಿಂಗ್‌ ಸೀಸನ್‌ನಲ್ಲಿ, ಈಗಾಗಲೇ ಈ ಸೀರೆಯ ರಿಪ್ಲಿಕಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು, ಬಿಕರಿಗೊಳ್ಳುತ್ತಿವೆ.

2/5

ಪಲಕ್‌ ಫ್ಯಾಷನ್‌ ಪ್ರೇಮ

ಅಂದಹಾಗೆ, ಎಲ್ಲರಿಗೂ ತಿಳಿದಿರುವಂತೆ ಪಲಕ್‌ ತಿವಾರಿ, ಟೆಲಿವಿಷನ್‌ನ ಸೂಪರ್‌ ಹಿಟ್‌ ತಾರೆ ಶ್ವೇತಾ ತಿವಾರಿಯ ಮಗಳು. ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಾದರೂ ಫ್ಯಾಷನ್‌ ಇವೆಂಟ್‌ಗಳ ಮೂಲಕವೇ ಸಾಕಷ್ಟು ಹೆಸರು ಮಾಡಿದಾಕೆ. ಅಷ್ಟೇಕೆ ಇವರು ಐಟಂ ಸಾಂಗ್‌ ಒಂದರ ಮೂಲಕ ಸಖತ್‌ ಹೆಸರು ಗಳಿಸಿದ ಜೆನ್‌ ಝಿ ನಟಿ.

3/5

ಪಲಕ್‌ ತಿವಾರಿಯ ಪಿಂಕ್‌ ಸೀರೆಯ ಬೆಲೆ

ಪಲಕ್‌ ತಿವಾರಿ ಉಟ್ಟಿರುವ ಈ ಹಾಟ್‌ ಪಿಂಕ್‌ ಫ್ಲೋರಲ್‌ ಸೀರೆ ಡಿಸೈನರ್‌ ಭುಮಿಕಾ ಶರ್ಮಾ ವಿನ್ಯಾಸಗೊಳಿಸಿದ್ದಾರೆ. ಸೀರೆಯ ಬೆಲೆ ಅಂದಾಜು ಅರ್ಧ ಲಕ್ಷ ರೂ.ಗಳಿಗಿಂತ ಹೆಚ್ಚಿದೆ ಎಂದಿವೆ ಮೂಲಗಳು.

4/5

ರಾಯಲ್‌ ಲುಕ್‌ ನೀಡಿದ ಪಿಂಕ್‌ ಸೀರೆಯ ವಿಶೇಷತೆ

ಮೈಲಾ ಸೀರೆ ಬ್ರಾಂಡ್‌ನ ಈ ಸೀರೆ ಈ ವೆಡ್ಡಿಂಗ್‌ ಸೀಸನ್‌ಗೆಂದೇ ಬಿಡುಗಡೆಗೊಳಿಸಲಾಗಿದೆ. ಡೆಲಿಕೇಟ್‌ ಫ್ಲೋರಲ್‌ ಪ್ರಿಂಟ್ಸ್‌ ಸೀರೆಯ ಅಂದ ಹೆಚ್ಚಿಸಿದೆ. ಶೀರ್‌ ಪಿಂಕ್‌ ಸೀರೆ ಜೆನ್‌ ಝೀ ಹುಡುಗಿಯರನ್ನು ಆಕರ್ಷಿಸಿದೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.

5/5

ಪಲಕ್‌ ತಿವಾರಿಯ ಜೆನ್‌ ಝೀ ಸೀರೆ ಲುಕ್‌

ಇನ್ನು ಈ ಸೀರೆಯಲ್ಲಿ ಪಲಕ್‌ ತಿವಾರಿ ಜೆನ್‌ ಝೀ ಯುವತಿಯರನ್ನು ಪ್ರತಿಬಿಂಬಿಸಿದ್ದಾರೆ. ಸನಮ್‌ ರತಾನ್ಸಿ ಅವರ ಸ್ಟೈಲಿಂಗ್‌ನಲ್ಲಿ ದೇಸಿ ರಾಯಲ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಒಟ್ಟಾರೆ, ಪಲಕ್‌ ತಿವಾರಿಯ ಈ ಸೀರೆ ಲುಕ್‌ ಫಾಲೋವರ್‌ಗಳನ್ನು ಬರಸೆಳೆದಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author