ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Saree Fashion 2026: ಟ್ರೆಂಡಿಯಾಯ್ತು ಸಾನ್ಯಾ ಉಟ್ಟ 3ಡಿ ಫ್ಲೋರಲ್‌ ಲೇಸ್‌ ಸೀರೆ

Bollywood actress Sanya Malhotra: ಬಾಲಿವುಡ್‌ ನಟಿ ಸಾನ್ಯಾ ಮಲ್ಹೋತ್ರಾ ಉಟ್ಟ ಶ್ವೇತ ವರ್ಣದ 3ಡಿ ಫ್ಲೋರಲ್‌ ಲೇಸ್‌ ಸೀರೆ ಇದೀಗ ಟ್ರೆಂಡಿಯಾಗಿದೆ. ಸಮ್ಮರ್‌ಗೆ ಹೇಳಿ ಮಾಡಿಸಿದಂತಿರುವ ಈ ಆಕರ್ಷಕ ಸೀರೆಯ ವಿಶೇಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಸಾನ್ಯಾ ಮಲ್ಹೋತ್ರಾ, ಬಾಲಿವುಡ್‌ ನಟಿ
1/5

ಬಾಲಿವುಡ್‌ ನಟಿ ಸಾನ್ಯಾ ಮಲ್ಹೋತ್ರಾ ಉಟ್ಟ ಅತ್ಯಾಕರ್ಷಕ ಶ್ವೇತ ವರ್ಣದ 3ಡಿ ಫ್ಲೋರಲ್‌ ಲೇಸ್‌ ಸೀರೆ ಇದೀಗ ಟ್ರೆಂಡಿಯಾಗಿದೆ.

2/5

ಸೀರೆ ಪ್ರಿಯರನ್ನು ಸೆಳೆದ ಸೀರೆ

ಹೌದು, ಸಮ್ಮರ್‌ ಸೀಸನ್‌ಗೆ ಮ್ಯಾಚ್‌ ಆಗುವಂತಿರುವ ಈ ಕಲರ್‌ ಹಾಗೂ ಡಿಸೈನ್ಸ್ ಸದ್ಯ ಸೀರೆ ಪ್ರಿಯರನ್ನು ಸೆಳೆದಿರುವುದು ಮಾತ್ರವಲ್ಲ, ಫ್ಯಾಷನ್‌ ಲೋಕದಲ್ಲೂ ಸಂಚಲನ ಮೂಡಿಸಿದೆ.

3/5

3ಡಿ ಫ್ಲೋರಲ್‌ ಲೇಸ್‌ ಡಿಸೈನರ್‌ ಸೀರೆ

ಅಂದಹಾಗೆ, ನಟಿ ಸಾನ್ಯಾ ಮಲ್ಹೋತ್ರಾ ಸಿನಿಮಾಗಳಲ್ಲಿ ಮಾತ್ರವಲ್ಲ, ಫ್ಯಾಷನ್‌ ಇವೆಂಟ್‌ಗಳಲ್ಲಿ ಹಾಗೂ ಫ್ಯಾಷನ್‌ ಶೂಟ್‌ಗಳಲ್ಲೂ ತಮ್ಮದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಮೂಲಕ ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಡಿಸೈನರ್‌ ಮಹ್ಮಮದ್‌ ಮಜರ್‌ ಡಿಸೈನ್‌ ಮಾಡಿದ ಈ 3ಡಿ ಸೀರೆಯಲ್ಲಿ ಕಾಣಿಸಿಕೊಂಡಿರುವುದು ಸೀರೆ ಪ್ರಿಯರನ್ನು ಸೆಳೆದಿದೆ. ಇನ್ನು, ಮನೀಶಾ ಮೆಲ್ವಾನಿ ಹಾಗೂ ಹರ್ಷಿತಾ ಅವರ ಸ್ಟೈಲಿಂಗ್‌ ಸಾನ್ಯಾರನ್ನು ಸಖತ್‌ ಆಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

4/5

3ಡಿ ಸೀರೆಯ ವಿಶೇಷತೆ

ಸಾನ್ಯಾ ಉಟ್ಟಿರುವ ಈ ತ್ರೀ ಡಿ ಸೀರೆ ಪಾರದರ್ಶಕವಾಗಿದೆ. ಸೂಕ್ಷ್ಮವಾದ ಫ್ಲೋರಲ್‌ ಎಂಬೋಸಿಂಗ್‌ ಡಿಸೈನ್‌ ವಿನ್ಯಾಸ ಒಳಗೊಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸೀರೆಯ ಶ್ವೇತ ವರ್ಣ ಹಾಗೂ ಮ್ಯಾಚ್‌ ಮಾಡಿರುವ ಹಾಲ್ಟರ್‌ ನೆಕ್‌ನ ಬ್ಲೌಸ್‌, ಪಕ್ಕಾ ಈ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ ಎಂದಿದ್ದಾರೆ ಎಕ್ಸ್‌ಪರ್ಟ್ಸ್.

5/5

ಮಾರುಕಟ್ಟೆಗೆ ಕಾಲಿಟ್ಟ ಲೋಕಲ್‌ ತ್ರೀಡಿ ಸೀರೆಗಳು

ಪ್ರತಿಷ್ಠಿತ ಬ್ರಾಂಡ್‌ಗಳಲ್ಲಿ ಇಂತಹ ಸೀರೆಗಳು ಟ್ರೆಂಡಿಯಾಗುವುದೇ ತಡ, ಅದೇ ರೀತಿಯಾ ರಿಪ್ಲೀಕಾ ಸೀರೆಗಳು ಲೋಕಲ್‌ ಬ್ರಾಂಡ್‌ಗಳಲ್ಲಿಯೂ ಕೈಗೆಟಕುವ ದರದಲ್ಲಿ ಬಿಡುಗಡೆಗೊಳ್ಳುತ್ತವೆ. ಇದೇ ಲಿಸ್ಟ್‌ಗೆ ಇದೀಗ ಈ ಸೀರೆ ಕೂಡ ಸೇರಿದೆ. ಒಟ್ಟಿನಲ್ಲಿ, ಸದ್ಯದಲ್ಲೆ ಮಾನಿನಿಯರನ್ನು ಇವು ಸವಾರಿ ಮಾಡಲಿವೆ ಎಂದು ಭವಿಷ್ಯ ನುಡಿದಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ ವಿದ್ಯಾ ವಿವೇಕ್‌.

ಶೀಲಾ ಸಿ ಶೆಟ್ಟಿ

View all posts by this author