Star Saree Fashion 2026: ಶ್ರುತಿ ಹಾಸನ್ ರೀತಿ ಗೋಲ್ಡನ್ ಸೀರೆಯಲ್ಲಿ ಕಾಣಲು ಇಲ್ಲಿವೆ ಟಿಪ್ಸ್
Star Saree Fashion: ನಟಿ ಹಾಗೂ ಗಾಯಕಿ ಶ್ರುತಿ ಹಾಸನ್ ಗೋಲ್ಡನ್ ಸೀರೆಯಲ್ಲಿ ಗೊಂಬೆಯಂತೆ ಕಾಣಿಸಿಕೊಳ್ಳಬೇಕೇ! ಹಾಗಾದಲ್ಲಿ ಒಂದಿಷ್ಟು ಸಿಂಪಲ್ ಸ್ಟೈಲಿಂಗ್ ಹಾಗೂ ಐಡಿಯಾ ಪಾಲಿಸಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ನಟಿ ಹಾಗೂ ಗಾಯಕಿ ಶ್ರುತಿ ಹಾಸನ್ ಗೋಲ್ಡನ್ ಸ್ಯಾಟಿನ್ ಸೀರೆಯಲ್ಲಿ ಗೊಂಬೆಯಂತೆ ಕಾಣಿಸುತ್ತಿದ್ದಾರೆ. ಅವರಂತೆ ಥಳುಕು-ಬಳುಕಾಡುವ ಸೀರೆಯ ಲುಕ್ ನಿಮ್ಮದಾಗಬೇಕೇ! ಹಾಗಾದಲ್ಲಿ ಒಂದಿಷ್ಟು ಸಿಂಪಲ್ ಸ್ಟೈಲಿಂಗ್ ಹಾಗೂ ಐಡಿಯಾ ಪಾಲಿಸಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಲೈಟ್‌ವೇಟ್ ಸ್ಯಾಟಿನ್ ಗೋಲ್ಡನ್ ಸೀರೆ ಆಯ್ಕೆ
ಈ ಸಮ್ಮರ್‌ಗೆ ಹೊಂದುವಂತಹ ಲೈಟ್‌ವೈಟ್ ಸ್ಯಾಟಿನ್ ಸೀರೆಯನ್ನು ಆಯ್ಕೆ ಮಾಡಿಕೊಳ್ಳಿ. ಗೋಲ್ಡನ್ ಹಾಗೂ ಸಿಲ್ವರ್ ಕಲರ್‌ನವು ಈ ವೆಡ್ಡಿಂಗ್ ಸೀಸನ್‌ನಲ್ಲಿ ಕಾಲಿಟ್ಟಿದ್ದು, ಇವನ್ನೇ ಆರಿಸಿ, ಉಟ್ಟುಕೊಳ್ಳಿ.
ಮಾನೋಕ್ರೋಮ್ ಶೇಡ್‌ನ ಬಾರ್ಡರ್
ಸೇಮ್ ಟು ಸೇಮ್ ಬಣ್ಣದ ಮಾನೋಕ್ರೋಮ್ ವಿನ್ಯಾಸದ ಬಾರ್ಡರ್ ಇರುವ ಸ್ಯಾಟೀನ್ ಸೀರೆ ಗ್ರ್ಯಾಂಡ್ ಲುಕ್ ನೀಡುತ್ತದೆ. ನೀವು ಕೊಂಡ ಸೀರೆಗೆ ಬಾರ್ಡರ್ ಇರದಿದ್ದಲ್ಲಿ, ರೆಡಿಮೇಡ್ ಗೋಲ್ಡನ್ ಲೇಸ್ ಡಿಸೈನ್ ಬಾರ್ಡರ್ ಹೊಲೆಸಿ ಉಡಬಹುದು.
ಗೋಲ್ಡನ್ ಮಿರರ್ ಬ್ಲೌಸ್ ಧರಿಸಿ
ಇತ್ತೀಚೆಗೆ ಟ್ರೆಂಡಿಯಾಗಿರುವ ಗೋಲ್ಡನ್ ಮಿರರ್ ಬ್ಲೌಸ್‌ಗಳನ್ನು ಧರಿಸಿ, ಸೀರೆಗೆ ಮ್ಯಾಚ್ ಮಾಡಿ. ಇದು ಗ್ರ್ಯಾಂಡ್ ಲುಕ್ ನೀಡುವುದರೊಂದಿಗೆ ನಿಮ್ಮನ್ನು ಸೆಲೆಬ್ರೆಟಿಯಂತೆ ಬಿಂಬಿಸುತ್ತದೆ.
ಮೇಕಪ್ ಸಿಂಪಲ್ಲಾಗಿರಲಿ
ಈ ಸಮ್ಮರ್‌ನಲ್ಲಿ ಅತಿ ಹೆಚ್ಚು ಮೇಕಪ್ ಬೇಡ! ಆದಷ್ಟೂ ನ್ಯಾಚುರಲ್ ಮೇಕಪ್ ಮಾಡಿ. ನೋಡಲು ಎಲಿಗೆಂಟ್ ಆಗಿ ಕಾಣಿಸುವುದು. ಅಗತ್ಯವಿದ್ದಲ್ಲಿ ಮಾತ್ರ ಗ್ರ್ಯಾಂಡ್ ಲುಕ್‌ಗೆ ಆದ್ಯತೆ ನೀಡಿ.
ಆಭರಣಗಳನ್ನು ಧರಿಸಿ
ಗೋಲ್ಡನ್ ಸೀರೆಯ ಜತೆಗೆ ಆದಷ್ಟೂ ಆಭರಣಗಳನ್ನು ಧರಿಸಿ. ಅದು ಸಿಂಪಲ್ ಆಗಬಹುದು ಅಥವಾ ನೋಡಲು ಹೈಲೈಟ್ ಆಗುವಂತದ್ದಾಗಬಹುದು. ಹರಳಿನ ಆಭರಣಗಳು, ಇಮಿಟೇಷನ್ ಜ್ಯುವೆಲರಿಗಳು ಯಾವುದಾದರೂ ಆಗಬಹುದು. ಇವು ಸೀರೆಯ ಲುಕ್‌ಗೆ ಸಾಥ್ ನೀಡುತ್ತವೆ.