ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Saree Fashion Review 2025: ಮಹಿಳೆಯರನ್ನು ಸೆಳೆದ ಸುಹಾಸಿನಿಯವರ ಹ್ಯಾಂಡ್‌ಲೂಮ್‌ ಸೀರೆ

Actress Suhasini Saree Look: ನ್ಯಾಚುರಲ್‌ ಲುಕ್‌ ಹಾಗೂ ಸ್ಮೈಲ್‌ಗೆ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಹಿರಿಯ ನಟಿ ಸುಹಾಸಿನಿಯವರು ಧರಿಸಿರುವ ಬೂದು-ಹಳದಿ ಕಾಂಟ್ರಸ್ಟ್ ಶೇಡ್‌ನ ಹಾಫ್‌ & ಹಾಫ್‌ ಸೀರೆ ಸದ್ಯ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ.

ಹಿರಿಯ ನಟಿ ಸುಹಾಸಿನಿ
1/5

ನ್ಯಾಚುರಲ್‌ ಲುಕ್‌ ಹಾಗೂ ಅತ್ಯಾಕರ್ಷಕ ಸ್ಮೈಲ್‌ನಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಹಿರಿಯ ನಟಿ ಸುಹಾಸಿನಿಯವರ ಹಾಫ್‌ ಆಂಡ್‌ ಹಾಫ್‌ ಹ್ಯಾಂಡ್‌ಲೂಮ್‌ ಕಾಂಟ್ರಾಸ್ಟ್ ಸೀರೆ ಇದೀಗ ಸೀರೆ ಪ್ರಿಯ ಮಹಿಳೆಯರನ್ನು ಸೆಳೆದಿದೆ.

2/5

ಯೂನಿಕ್‌ ಸೀರೆ ಫ್ಯಾಷನ್‌ಗೆ ಅಭಿಮಾನಿಗಳು

ಹೌದು, 90ರ ದಶಕದ ಆಸು-ಪಾಸಿನಲ್ಲಿ, ತಮ್ಮದೇ ಆದ ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ದ ಸುಹಾಸಿನಿಯವರು ತಮ್ಮ ಸಿಂಪಲ್‌ ಹಾಗೂ ನ್ಯಾಚುರಲ್‌ ಲುಕ್‌ನಿಂದಾಗಿಯೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಅವರಿಗೆ ಯಾವ ಮಟ್ಟಿಗೆ ಅಭಿಮಾನಿಗಳಿದ್ದರೆಂದರೇ ಅವರಲ್ಲಿ ಬಹುತೇಕ ಸಂಖ್ಯೆ ಪುರುಷರಿದ್ದರಂತೆ! ಹಾಗೆನ್ನುತ್ತಾರೆ ವಿಮರ್ಶಕರು.

3/5

ಸುಹಾಸಿನಿಯವರ ಬದಲಾಗದ ಎಲಿಗೆಂಟ್‌ ಲುಕ್‌

ಸಿನಿಮಾ ಸ್ಟೈಲಿಸ್ಟ್‌ಗಳ ಪ್ರಕಾರ, ಅಂದು ಸಿನಿಮಾಗಳಲ್ಲಿ ಕೇವಲ ಸುಹಾಸಿನಿಯವರ ನಟನೆಗೆ ಮಾತ್ರವಲ್ಲ, ಅವರು ಧರಿಸುವ ಸೀರೆ, ಕಾಲರ್‌ ನೆಕ್‌ ಬ್ಲೌಸ್‌ ಹಾಗೂ ಹೇರ್‌ಸ್ಟೈಲ್‌ ಹೀಗೆ ಎಲ್ಲವನ್ನು ಫಾಲೋ ಮಾಡುವ ಫ್ಯಾನ್‌ ಫಾಲೋವಿಂಗ್‌ ಮಹಿಳೆಯರಿದ್ದರು. ಅಷ್ಟೇಕೆ! ಈಗಲೂ ಇದ್ದಾರಂತೆ!

4/5

ಸುಹಾಸಿನಿಯವರ ಹ್ಯಾಂಡ್‌ ಲೂಮ್‌ ಸೀರೆ

ಅಂದಹಾಗೆ, ಸುಹಾಸಿನಿಯವರು ಈ ಫೋಟೋದಲ್ಲಿ ಧರಿಸಿರುವ ಬೂದು ಬಣ್ಣದ ಹ್ಯಾಂಡ್‌ಲೂಮ್‌ ಸೀರೆ ಹಾಫ್‌ ಆಂಡ್‌ ಹಾಫ್‌ ಡಿಸೈನ್‌ ಹೊಂದಿದ್ದು, ಅಂದರೇ, ಎರಡೆರಡು ಬಣ್ಣ ಹೊಂದಿದೆ. ಹಳದಿಯೊಂದಿಗೆ ಬೂದು ಬಣ್ಣವನ್ನು ಕಾಂಟ್ರಾಸ್ಟ್ ಮಾಡಿ ವಿನ್ಯಾಸ ಗೊಳಿಸಿರುವುದು ಸೀರೆಗೆ ಡಿಫರೆಂಟ್‌ ಲುಕ್‌ ನೀಡಿದೆ. ಇನ್ನು, ಈ ಸೀರೆಗೆ ಧರಿಸಿರುವ ಹೈ ಕಾಲರ್‌ ನೆಕ್‌ನ ಬ್ಲೌಸ್‌ ಸೀರೆಯನ್ನು ಮತ್ತಷ್ಟು ಹೈಲೈಟ್‌ ಮಾಡಿದೆ ಎನ್ನುತ್ತಾರೆ ವಿಶ್ಲೇಷಕರಾದ ವಿದ್ಯಾ ವಿವೇಕ್‌.

5/5

ಒಟ್ಟಾರೆ, ಸುಹಾಸಿನಿಯವರ ಈ ಸೀರೆ, ವಿಂಟರ್‌ ಸೀಸನ್‌ ಟ್ರೆಂಡ್‌ಗೂ ಹೊಂದಿಕೊಂಡಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author