ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Winter Fashion 2025: ವಿಂಟರ್‌ಗೆ ಬದಲಾಗುವ ಆದಿತ್ಯಾ ರಾಯ್ ಕಪೂರ್ ಲೈಫ್‌ಸ್ಟೈಲ್

Aditya Roy Kapur lifestyle: ಹೆಲ್ತಿ ಲೈಫ್‌ಸ್ಟೈಲ್ ಯುವಕರನ್ನು ಫಿಟ್ ಆಗಿರಿಸಲು ಸಹಕಾರಿ ಎನ್ನುವ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಲೈಫ್‌ಸ್ಟೈಲ್ ಬಗ್ಗೆ ಹೇಳಿಕೊಳ್ಳುವುದರೊಂದಿಗೆ ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ.

ನಟ ಆದಿತ್ಯಾ ರಾಯ್ ಕಪೂರ್
1/5

ಪ್ರತಿ ಯುವಕನೂ ತಾನು ಕೂಡ ಸ್ಟಾರ್‌ನಂತೆ ಕಾಣಿಸಲು ಬಯಸುತ್ತಾನೆ. ಅದಕ್ಕಾಗಿ ಕೇವಲ ಫ್ಯಾಷನೆಬಲ್ ಆಗಿ ಕಾಣಿಸಿದರೇ ಸಾಲದು, ಅದಕ್ಕಾಗಿ ಹೆಲ್ತಿ ಲೈಫ್‌ಸ್ಟೈಲ್ ಕೂಡ ಪಾಲಿಸಬೇಕು ಎನ್ನುತ್ತಾರೆ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್. ಮಾಧ್ಯಮವೊಂದಕ್ಕೆ ಲೈಫ್‌ಸ್ಟೈಲ್ ಕುರಿತಂತೆ ನೀಡಿದ ಸಂದರ್ಶನದಲ್ಲಿ ತಮ್ಮ ಸೀಸನ್ ಲೈಫ್‌ಸ್ಟೈಲ್ ಕುರಿತಂತೆ ಮಾತನಾಡಿದ್ದಾರೆ.

2/5

ಯುವಕರಿಗೂ ಬೇಕು ಸೌಂದರ್ಯ ಪ್ರಜ್ಞೆ

ಯುವಕರು ಕೂಡ ಒಂದಿಷ್ಟು ಸೌಂದರ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ವಿಂಟರ್ ಸೀಸನ್‌ಗೆ ಅಗತ್ಯವಿರುವ ಕ್ರೀಮ್ ಹಾಗೂ ಸನ್‌ಸ್ಕ್ರೀನ್‌ಗಳನ್ನು ಬಿಸಿಲಿನಲ್ಲಿ ಹೊರ ಹೋಗುವಾಗ ಲೇಪಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಯುವಕರಿಗೆ ಒಂದಿಷ್ಟು ಸಿಂಪಲ್ ಸಲಹೆ ನೀಡಿದ್ದಾರೆ.

3/5

ಸ್ಮೋಕಿಂಗ್‌ನಿಂದ ತ್ವಚೆಯ ಕಾಂತಿ ಕುಂಠಿತ

ಯುವಕರಿಗೆ ಮುಖದ ಮೇಲೆ ಹೆಚ್ಚು ಸುಕ್ಕು ಬರಲು ಅತಿಯಾದ ಧೂಮಪಾನವೂ ಕಾರಣ ಎಂಬುದು ಸಂಶೋಧನೆಗಳಿಂದ ಗೊತ್ತಾಗಿದೆ. ಅತಿಯಾಗಿ ಸೀಗರೆಟ್ ಸೇದುವುದರಿಂದ ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಉತ್ತಮ ತ್ವಚೆ ಬೇಕೆನ್ನುವವರು ಅತಿಯಾದ ಧೂಮಪಾನ ತ್ಯಜಿಸುವುದು ಉತ್ತಮ ಎನ್ನುತ್ತಾರೆ ಆದಿತ್ಯಾ.

4/5

ಪರ್ಫೆಕ್ಟ್ ಡಯಟ್ ಪಾಲಿಸಿ ನೋಡಿ

ಸಮತೋಲಿತ ಆಹಾರವೇ ಎಲ್ಲಾಆರೋಗ್ಯ ಸಮಸ್ಯೆಗಳಿಗೆ ಪರಿಹಾರ. ಆದಷ್ಟೂ ಫೈಬರ್‌ನಿಂದ ತುಂಬಿದ ಆಹಾರವನ್ನು ಸೇವಿಸುವುದು ಉತ್ತಮ. ಆಯಾ ಸೀಸನ್‌ಗೆ ತಕ್ಕಂತೆ ಒಂದಿಷ್ಟು ಆರೋಗ್ಯಕರ ಅಂಶಗಳನ್ನು ರೂಢಿಸಿಕೊಂಡಲ್ಲಿ ಪರ್ಫೆಕ್ಟ್ ಲೈಫ್‌ಸ್ಟೈಲ್ ನಮ್ಮದಾಗುವುದು ಎನ್ನುತ್ತಾರೆ.

5/5

ಆದಿತ್ಯಾ ಫುಡ್ ಚಾಯ್ಸ್

ಸ್ವಲ್ಪ ಪ್ರಮಾಣದ ಕೊಬ್ಬಿನಂಶ ಇರುವಂತಹ ಫುಡ್, ಫಿಶ್ ಮತ್ತು ಆಲಿವ್ ಆಯಿಲ್ ಬಳಸಿದ ಮೆಡಿಟರೇನಿಯನ್ ಫುಡ್ ನನಗಿಷ್ಟ ಎನ್ನುವ ಆದಿತ್ಯಾ ರಾಯ್ ಕಪೂರ್, ಆದಷ್ಟೂ ಹೆಲ್ತಿ ಲೈಫ್‌ಸ್ಟೈಲ್ ಲೀಡ್ ಮಾಡಲು ಪ್ರಯತ್ನಿಸುತ್ತಾರಂತೆ.

ವ್ಯಾಯಾಮ ಅತ್ಯಗತ್ಯ

ಇವೆಲ್ಲದರ ಜತೆಗೆ ಪ್ರತಿದಿನ ವ್ಯಾಯಾಮ ಮಾಡುವುದು ಅತ್ಯಗತ್ಯ. ಇದು ದೇಹವನ್ನು ಫಿಟ್ ಆಗಿರಿಸುತ್ತದೆ ಎನ್ನುತ್ತಾರೆ ಆದಿತ್ಯಾ.

ಶೀಲಾ ಸಿ ಶೆಟ್ಟಿ

View all posts by this author