ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Winter Fashion 2026: ವಿಂಟರ್‌ ಪವರ್‌ ಲುಕ್‌ನಲ್ಲಿ ನಟಿ ಸಾನಿಯಾ ಮಲ್ಹೋತ್ರಾ

ಸೂಟ್‌ ಮೇಲೆ ಲೆದರ್‌ ಟ್ರೆಂಚ್‌ ಕೋಟ್‌ ಧರಿಸಿರುವ ಬಾಲಿವುಡ್‌ ನಟಿ ಸಾನಿಯಾ ಮಲ್ಹೋತ್ರಾ ವಿಂಟರ್‌ ಫ್ಯಾಷನ್‌ನ ಪವರ್‌ ಲುಕ್‌ಗೆ ಸೈ ಎಂದಿದ್ದಾರೆ. ಇದ್ಯಾವ ಬಗೆಯ ಲುಕ್‌? ಔಟ್‌ಫಿಟ್‌ ವಿಶೇ‍ಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಸಾನಿಯಾ ಮಲ್ಹೋತ್ರಾ, ಬಾಲಿವುಡ್‌ ನಟಿ., ಚಿತ್ರಕೃಪೆ: ಸಾನಿಧ್ಯ ಅಗರ್‌ವಾಲ್‌
1/5

ನಟಿ ಸಾನಿಯಾ ಮಲ್ಹೋತ್ರಾ ವಿಂಟರ್‌ ಪವರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಲೇಯರ್‌ ಲುಕ್‌ ನೀಡುವ ಕ್ರಾಪ್‌ ಸೂಟ್‌ ಮೇಲೆ ಲೆದರ್‌ ಟ್ರೆಂಚ್‌ ಕೋಟ್‌ ಧರಿಸಿ, ಫ್ಯಾಷನ್‌ ಶೂಟ್‌ ಮಾಡಿರುವ ಬಾಲಿವುಡ್‌ ಬೆಡಗಿ ನಟಿ ಸಾನಿಯಾ ಮಲ್ಹೋತ್ರಾ ಟ್ರೆಂಡಿಯಾಗಿರುವ ವಿಂಟರ್‌ ಫ್ಯಾಷನ್‌ನ ಪವರ್‌ ಲುಕ್‌ಗೆ ಸೈ ಎಂದಿದ್ದಾರೆ. ಸೂಟ್‌ ಪ್ರಿಯರನ್ನು ಸೆಳೆದಿದ್ದಾರೆ.

2/5

ಸಾನಿಯಾ ಫ್ಯಾಷನ್‌ ಪ್ರೇಮ

ಅಂದಹಾಗೆ, ಸಾನಿಯಾ ಮಲ್ಹೋತ್ರಾ ಬಾಲಿವುಡ್‌ನಲ್ಲಿ ಇತ್ತೀಚೆಗೆ ನಾನಾ ಪಾತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇದರೊಂದಿಗೆ ಫ್ಯಾಷನ್‌ ಶೋಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ಫ್ಯಾಷನ್‌ಲೋಕಕ್ಕೂ ಕಾಲಿಟ್ಟಿದ್ದಾರೆ. ಇವುಗಳ ಮಧ್ಯೆ ಆಗಾಗ್ಗೆ ಇವರ ಭಿನ್ನ-ವಿಭಿನ್ನ ಫೋಟೋ ಶೂಟ್‌ಗಳು ಕೂಡ ಇವರ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿದೆ.

3/5

ಸಾನಿಯಾ ಮಲ್ಹೋತ್ರಾ ಪವರ್‌ ಲುಕ್‌ ಹೇಗಿದೆ?

ಸಾನಿಯಾ ಧರಿಸಿರುವ ಈ ಪವರ್‌ ಲುಕ್‌ ನೋಡಲು ಲೇಯರ್‌ ಲುಕ್‌ ಆಗಿದ್ದರೂ ಕೂಡ ಫೆಮಿನಿಸಂ ಬಿಂಬಿಸುವಂತಿದೆ. ಜತೆಗೆ ಸಾನಿಯಾರ ವಿಂಟರ್‌ ಸೀಸನ್‌ ಫ್ಯಾಷನ್‌ ಅನ್ನು ಬಿಂಬಿಸಿದೆ. ಹಾಗಾಗಿ ಇವರನ್ನು ಸೀಸನ್‌ ಟ್ರೆಂಡ್‌ ಸೆಟ್ಟರ್‌ ಎನ್ನಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಪವರ್‌ ಲುಕ್‌ ವಿಶೇ‍ಷತೆ

ಸಾನಿಯಾರ ಈ ಪವರ್‌ ಲುಕ್‌ನಲ್ಲಿ ಅಷ್ಟಾಗಿ ಕಾಣಿಸದ ಚಿಕ್ಕ ಚಿಕ್ಕ ಸ್ಟ್ರೈಪ್ಸ್‌ನ ಇರುವಂತಹ ಸೂಟ್‌ ಸೇರಿದೆ. ಅದೇ ವರ್ಣದ ಇನ್ನರ್‌ವೇರ್‌ ಮೇಲೆ ಕ್ರಾಪ್‌ ಬ್ಲೇಜರ್‌ ಸಾಥ್‌ ನೀಡಿದೆ.

5/5

ಇದರ ಪ್ಯಾಂಟ್‌ ಕೂಡ ಸೇಮ್‌ ವರ್ಣದ್ದಾಗಿದ್ದು, ಅವರಿಗೆ ಮಾನೋಕ್ರೋಮ್‌ ಲುಕ್‌ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇವೆಲ್ಲದರ ಮೇಲೆ ಧರಿಸಿರುವ ಲಾಂಗ್‌ ಲೆದರ್‌ ಟ್ರೆಂಚ್‌ ಕೋಟ್‌ ಸಾನಿಯಾಗೆ ಕಂಪ್ಲೀಟ್‌ ಪವರ್‌ ಲುಕ್‌ ನೀಡಿದೆ. ಸ್ಟ್ರಾಂಗ್‌ ಮಹಿಳೆಯಂತೆ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಶೀಲಾ ಸಿ ಶೆಟ್ಟಿ

View all posts by this author