Star Winter Lifestyle 2025: ನಟಿ ಅನನ್ಯಾ ಪಾಂಡೆ ಪಾಲಿಸುವ ವಿಂಟರ್ ಲೈಫ್ ಸ್ಟೈಲ್
Ananya Panday: ವಿಂಟರ್‌ಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆಯ ಲೈಫ್‌ಸ್ಟೈಲ್ ಕಂಪ್ಲೀಟ್ ಬದಲಾಗುತ್ತದಂತೆ. ಸೀಸನ್‌ಗೆ ತಕ್ಕಂತೆ ಆರೈಕೆ ಮಾಡುತ್ತಾರಂತೆ. ಈ ಕುರಿತಂತೆ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ವಿಂಟರ್ ಸೀಸನ್‌ಗೆ ತಕ್ಕಂತೆ ನನ್ನ ಲೈಫ್‌ಸ್ಟೈಲ್ ಬದಲಾಗುತ್ತದೆ ಎನ್ನುತ್ತಾರೆ ಬಾಲಿವುಡ್ ನಟಿ ಅನನ್ಯಾ ಪಾಂಡೆ. ಆದಷ್ಟೂ, ಪ್ರತಿ ಸೀಸನನ್ನು ನಾನು ಆದಷ್ಟೂ ಪರ್ಫೆಕ್ಟ್ ಆಗಿ ಪಾಲಿಸುತ್ತೇನೆ. ಅದರಲ್ಲೂ ನನ್ನ ಪರ್ಸನಾಲಿಟಿಗೆ ಹೊಂದುವಂತಹ ಡೈಲಿ ರುಟೀನ್ ಫಾಲೋ ಮಾಡುತ್ತೇನೆ ಎಂದು ಸೀಸನ್ ಲೈಫ್‌ಸ್ಟೈಲ್ ಕುರಿತಂತೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ಟ್ರೆಂಡ್ ಸೆಟ್ಟರ್
ಸಿನಿಮಾ ಹಾಗೂ ಔಟಿಂಗ್ ಹೊರತುಪಡಿಸಿದಲ್ಲಿ ಆದಷ್ಟೂ ಈ ಸೀಸನ್‌ನಲ್ಲಿ ಬೆಚ್ಚಗಿರಲು ಟ್ರೈ ಮಾಡುತ್ತೇನೆ. ಇನ್ನುಳಿದಂತೆ, ಡಿಸೈನರ್‌ವೇರ್‌ಗಳು, ಆಯಾ ಡಿಸೈನರ್ ಹಾಗೂ ಸ್ಟೈಲಿಸ್ಟ್ ಕ್ರಿಯೆಟಿವಿಟಿಗೆ ತಕ್ಕಂತೆ ಧರಿಸುತ್ತೇನೆ ಎನ್ನುತ್ತಾರೆ ಅನನ್ಯಾ ಪಾಂಡೆ.
ಡಯಟ್ ಫಾಲೋವರ್
ಹೆಚ್ಚು ಕೊಲೆಸ್ಟ್ರಾಲ್ ಇಲ್ಲದ ಆಲಿವ್ ಎಣ್ಣೆ, ತೆಂಗಿನ ಎಣ್ಣೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸವಿಯುತ್ತೇನೆ. ಕಂಪ್ಲೀಟ್ ಹೆಲ್ತಿ ಫುಡ್ ಸ್ಟೈಲ್ ನನ್ನದು. ಪರ್ಫೆಕ್ಟ್ ಡಯಟ್ ಫಾಲೋ ಮಾಡುವವರು ಜಿಡ್ಡಿನಂಶಕ್ಕಿಂತ ಪೌಷ್ಟಿಕಾಂಶ ಇರುವ ಆಹಾರಕ್ಕೆ ಹೆಚ್ಚು ಆದ್ಯತೆ ನೀಡುವುದು ಉತ್ತಮ ಎನ್ನುತ್ತಾರೆ.
ವಿಂಟರ್‌ನಲ್ಲಿ ವ್ಯಾಯಾಮ ಅಗತ್ಯ
ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವ ಬದಲು ವ್ಯಾಯಾಮಕ್ಕೆ ಅರ್ಧ ಗಂಟೆ ಮೊದಲು ಲಘು ಆಹಾರ ಸೇವಿಸುವುದು ಉತ್ತಮ. ವಿಂಟರ್‌ನಲ್ಲಿ ಪ್ರತಿದಿನ ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಇನ್ನು, ನನ್ನ ಪ್ರಕಾರ, ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ಕನಿಷ್ಠ 7-8 ಗಂಟೆ ನಿದ್ದೆ ಮಾಡುವುದು ಅತಿ ಮುಖ್ಯ. ಶೂಟಿಂಗ್ ಇದ್ದಾಗ ನಾನು ಸಾಕಷ್ಟು ವಿಶ್ರಾಂತಿ ಪಡೆದು, ಜಿಮ್‌ಗೆ ಹೋಗುತ್ತೇನೆ ಎನ್ನುವ ಅನನ್ಯಾಗೆ ವ್ಯಾಯಾಮ ಮಾಡುವುದಕ್ಕೆ ಇಂತದ್ದೇ ಸಮಯವೆಂಬುದು ಇಲ್ಲವಂತೆ.
ಸೀಸನ್ ಆರೈಕೆ ಅಗತ್ಯ
ಇನ್ನು, ಈ ಸೀಸನ್‌ನಲ್ಲಿ ಮುಖಕ್ಕೆ ಆರೈಕೆ ಮಾಡುವುದು ಅವಶ್ಯ. ಆದಷ್ಟೂ ಕೂದಲಿಗೆ ಜೆಲ್ ಬಳಕೆ ಬೇಡ. ವೀಕೆಂಡ್‌ನಲ್ಲಿ ಕೂದಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡಿ. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ ಎಂದು ಅನನ್ಯಾ ಸಿಂಪಲ್ ಟಿಪ್ಸ್ ನೀಡುತ್ತಾರೆ.