ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stars Fashion 2025: ಬಾಲಿವುಡ್ ತಾರೆಯರ ಕರ್ವಾಚೌತ್ ಫ್ಯಾಷನ್

Karwa Chauth: ಪ್ರತಿ ವರ್ಷದಂತೆ ಈ ಬಾರಿಯು ಅತ್ಯಾಕರ್ಷಕ ಹಾಗೂ ಟ್ರೆಂಡಿ ಎಥ್ನಿಕ್ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಲ್ಲಿ ಬಾಲಿವುಡ್ ತಾರೆಯರು ಕರ್ವಾಚೌತನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ವಿಭಿನ್ನ ಶೈಲಿಯ ಫ್ರಿಲ್ ಲೆಹೆಂಗಾ, ಡಬ್ಬಲ್ ಫೋಲ್ಡ್ ಗಾಗ್ರಾ, ಜಗಮಗಿಸುವ ಸೆಲ್ವಾರ್, ಧೋತಿ, ಕಮೀಝ್, ಶೆರ್ವಾನಿ ಹಾಗೂ ಡಿಸೈನರ್ ಶರಾರಾಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಗಳು: ಗ್ರ್ಯಾಂಡ್ ಡಿಸೈನರ್‌ವೇರ್‌ನಲ್ಲಿ ಕರ್ವಾಚೌತ್ ಸೆಲೆಬ್ರೇಟ್ ಮಾಡಿದ ತಾರೆಯರು.
1/5

ಅತ್ಯಾಕರ್ಷಕ ಹಾಗೂ ಮನಮೋಹಕವಾಗಿ ಕಾಣುವ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಕರ್ವಾಚೌತ್‌ ಆಚರಿಸಿದರು.

2/5

ಕಣ್ಮನ ಸೆಳೆದ ಬಾಲಿವುಡ್ ನಟ-ನಟಿಯರ ಡಿಸೈನರ್‌ವೇರ್

ನಟಿ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ, ರವೀನಾ ಟಂಡನ್, ಎರಡನೇ ಬಾರಿ ತಾಯಿಯಾಗುತ್ತಿರುವ ಸೋನಂ ಕಪೂರ್, ಸುನೀತಾ ಕಪೂರ್, ಅಂಕಿತಾ ಲೋಖಂಡೆ ದಂಪತಿ, ಪ್ರಿಯಾಂಖಾ ಚೋಪ್ರಾ-ನಿಕ್, ಭಾರತಿ ಸಿಂಗ್ ಸೇರಿದಂತೆ ಬಾಲಿವುಡ್ ಹಾಗೂ ಟೆಲಿವುಡ್‌ನ ಹಲವು ಸೆಲೆಬ್ರಿಟಿಗಳು ವಿಭಿನ್ನ ಶೈಲಿಯ ಫ್ರಿಲ್ ಲೆಹೆಂಗಾ, ಡಬ್ಬಲ್ ಫೋಲ್ಡ್ ಗಾಗ್ರಾ, ಜಗಮಗಿಸುವ ಸೆಲ್ವಾರ್, ಧೋತಿ, ಕಮೀಝ್, ಶೆರ್ವಾನಿ ಹಾಗೂ ಡಿಸೈನರ್ ಶರಾರಾಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು.

3/5

ಟ್ರೆಂಡಿಯಾಗುವ ಕರ್ವಾಚೌತ್ ಗ್ರ್ಯಾಂಡ್ ಡಿಸೈನರ್ವೇರ್ಸ್

ಬಾಲಿವುಡ್‌ನಲ್ಲಿ ತಾರೆಯರು ಧರಿಸುವ ಹಬ್ಬದ ಒಂದೊಂದು ಡಿಸೈನರ್‌ವೇರ್‌ಗಳು ಟ್ರೆಂಡಿಯಾಗುತ್ತವೆ ಎನ್ನುವ ಡಿಸೈನರ್ ರಕ್ಷಾ ಪ್ರಕಾರ, ಇವು ಮುಂಬರುವ ಹಬ್ಬದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತವೆ ಎನ್ನುತ್ತಾರೆ ಡಿಸೈನರ್‌ವೇರ್ಸ್ .

4/5

ಫ್ಯಾಷನಿಸ್ಟಾಗಳ ವಿಮರ್ಶೆ

ಇನ್ನು, ತಾರೆಯರು ಧರಿಸಿದ ಡಿಸೈನರ್‌ವೇರ್ ಹಾಗೂ ಸೀರೆಯನ್ನು ಮತ್ತೊಮ್ಮೆ ಧರಿಸುವುದಿಲ್ಲ! ಅಲ್ಲದೇ, ತಾವು ಧರಿಸುವ ಡಿಸೈನರ್‌ವೇರ್‌ಗಳಿಗೆ ಲೆಕ್ಕವಿಲ್ಲದಷ್ಟು ಖರ್ಚು ಮಾಡಿರುತ್ತಾರೆ. ಮತ್ತೊಬ್ಬರದ್ದನ್ನು ಆದಷ್ಟೂ ಕಾಪಿ ಕೂಡ ಮಾಡುವುದಿಲ್ಲ. ಬದಲಿಗೆ ಎಲ್ಲರಿಗಿಂತ ವಿಭಿನ್ನವಾಗಿ ಹಾಗೂ ಆಕರ್ಷಕವಾಗಿ ಇರಬೇಕೆಂದು ಬಯಸುತ್ತಾರೆ. ಪರಿಣಾಮ, ಹಬ್ಬಗಳಂದು ತಾರೆಯರು ಧರಿಸುವ ಡಿಸೈನರ್‌ವೇರ್ ಹಾಗೂ ಸೀರೆಗಳು ಟ್ರೆಂಡಿಯಾಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಯಂತ್.

5/5

ಕಾಪಿಕ್ಯಾಟ್ ಡಿಸೈನರ್‌ವೇರ್ಸ್

ಡಿಸೈನರ್ ರಿಯಾಜ್ ಪ್ರಕಾರ, ತಾರೆಯರು ಧರಿಸುವ ಸಾಕಷ್ಟು ಡಿಸೈನ್‌ನ ಕಾಪಿಕ್ಯಾಟ್ ಡಿಸೈನರ್‌ವೇರ್‌ಗಳು ನಾನಾ ಬ್ರಾಂಡ್‌ಗಳಲ್ಲಿ ಫೆಸ್ಟೀವ್ ಸೀಸನ್‌ನಲ್ಲಿ ಬಿಡುಗಡೆಗೊಳ್ಳುತ್ತವೆ. ಇವೇ ಮುಂದೆ ಟ್ರೆಂಡಿ ಸೀರೆ ಹಾಗೂ ಡಿಸೈನರ್ ಉಡುಪುಗಳಾಗಿ ಪರಿವರ್ತನೆಯಾಗುತ್ತವೆ. ಇದು ಫ್ಯಾಷನ್ ಇಂಡಸ್ಟ್ರೀಯ ಲಾಜಿಕ್ ಎನ್ನುತ್ತಾರೆ.

ಶೀಲಾ ಸಿ ಶೆಟ್ಟಿ

View all posts by this author