Stars Holi Fashion 2026: ಹೋಳಿಯ ಔಟ್‌ಫಿಟ್ಸ್‌ನಲ್ಲಿ ರಂಗೇರಿದ ತಾರೆಯರು
ಕಂಫರ್ಟಬಲ್ ಡಿಸೈನರ್‌ವೇರ್ಸ್, ವೈಟ್ ಔಟ್‌ಫಿಟ್ಸ್ ಹಾಗೂ ಎಥ್ನಿಕ್ ಉಡುಗೆ-ತೊಡುಗೆಗಳಲ್ಲಿ ತಮಗಿಷ್ಟ ಬಂದಂತೆ ಕಾಣಿಸಿಕೊಂಡ ಸಿನಿಮಾ ತಾರೆಯರು ಹಾಗೂ ಸೆಲೆಬ್ರೆಟಿಗಳು ಎಂದಿನಂತೆ ಕಲರ್‌ಫುಲ್ ಹೋಳಿಯನ್ನು ಸಂಭ್ರಮಿಸಿದರು. ಯಾರ‍್ಯಾರು ಹೇಗೆಲ್ಲಾ ಆಚರಿಸಿದರು? ಕಾಣಿಸಿಕೊಂಡರು? ಎಂಬುದರ ಬಗ್ಗೆ ಇಲ್ಲಿದೆ ವರದಿ.
ಕಂಫರ್ಟಬಲ್ ಡಿಸೈನರ್‌ವೇರ್ಸ್, ವೈಟ್ ಔಟ್‌ಫಿಟ್ಸ್ ಹಾಗೂ ಎಥ್ನಿಕ್ ಉಡುಗೆ-ತೊಡುಗೆಗಳಲ್ಲಿ ತಮಗಿಷ್ಟ ಬಂದಂತೆ ಕಾಣಿಸಿಕೊಂಡ ಸಿನಿಮಾ ತಾರೆಯರು ಹಾಗೂ ಸೆಲೆಬ್ರೆಟಿಗಳು ಎಂದಿನಂತೆ ಕಲರ್‌ಫುಲ್ ಹೋಳಿಯನ್ನು ಸಂಭ್ರಮಿಸಿದರು.
ಕಂಫರ್ಟಬಲ್ ಔಟ್‌ಫಿಟ್ಸ್‌ನಲ್ಲಿ ರಂಗೇರಿದ ತಾರೆಯರು
ಹೋಳಿ ಪಾರ್ಟಿಯ ಥೀಮ್‌ಗೆ ತಕ್ಕಂತೆ ಡ್ರೆಸ್‌ಕೋಡ್‌ಗಳಲ್ಲಿ ಕೆಲವು ಸಿನಿಮಾ ನಟ-ನಟಿಯರು ಕಾಣಿಸಿಕೊಂಡರೇ, ಇನ್ನು, ಕೆಲವರು ತಮಗೆ ಕಂಫರ್ಟಬಲ್ ಎಂದನಿಸಿದ ಕುರ್ತಾ, ಸೆಲ್ವರ್, ಕ್ಯಾಶುವಲ್ ವೇರ್ಸ್ ಹಾಗೂ ವೈಟ್ ಧೋತಿ-ಕುರ್ತಾ, ಪೈಜಾಮ-ಶಾರ್ಟ್ ಕುರ್ತಾಗಳಲ್ಲಿ ಕಾಣಿಸಿಕೊಂಡರು.
ಶ್ವೇತ ವರ್ಣದ ಉಡುಗೆಗಳಲ್ಲಿ ಮಿಂದೆದ್ದ ಸೆಲೆಬ್ರೆಟಿಗಳು
ಇನ್ನು ಕೆಲವು ನಟ-ನಟಿಯರು, ಸೆಲೆಬ್ರೆಟಿಗಳು ತಮ್ಮದೇ ಆದ ಹೋಳಿಯ ವೈಟ್ ಉಡುಪುಗಳಲ್ಲಿ ರಂಗೇರಿದ್ದರು. ಇವರನ್ನು ಹೊರತುಪಡಿಸಿದಲ್ಲಿ, ಪೇಜ್3 ಹಾಗೂ ಫ್ಯಾಷನ್ ಸೆಲೆಬ್ರೆಟಿಗಳು ತಮ್ಮದೇ ಆದ ಡಿಸೈನರ್‌ವೇರ್‌ಗಳನ್ನು ಧರಿಸಿ ಸಂಭ್ರಮಿಸಿದರು. ಮಾಡೆಲ್‌ಗಳು ಈ ಫೆಸ್ಟಿವ್ ಸೆಲೆಬ್ರೇಷನ್‌ಗೆ ಹೊಂದುವಂತಹ ಕಸ್ಟಮೈಸ್ಡ್ ಔಟ್‌ಫಿಟ್‌ಗಳನ್ನು ಧರಿಸಿ, ಆಚರಿಸಿದರು.
ಬಾಲಿವುಡ್ ತಾರೆಯರ ರಂಗು-ರಂಗಿನ ಔಟ್‌ಫಿಟ್ಸ್
ಬಾಲಿವುಡ್‌ನ ಹೋಳಿ ಪಾರ್ಟಿಗಳಲ್ಲಿ ನಟ-ನಟಿಯರು ಸಿನಿಮಾ ಮಂದಿ ಪಾರ್ಟಿಯ ಡ್ರೆಸ್‌ಕೋಡ್‌ಗೆ ತಕ್ಕಂತೆ ಕಾಣಿಸಿಕೊಂಡರು. ನಟರು ವೈಟ್ ಕುರ್ತಾ ಹಾಗೂ ಪೈಜಾಮದಲ್ಲಿ ಕಾಣಿಸಿಕೊಂಡರೇ, ನಟಿಯರು ಮಾತ್ರ ಬಗೆಬಗೆಯ ಡಿಸೈನರ್‌ವೇರ್‌ಗಳಲ್ಲಿ ಪೋಸ್ ನೀಡುತ್ತಾ ಕುಣಿದರು.
ಸೋಷಿಯಲ್ ಮೀಡಿಯಾದಲ್ಲಿ ಹೋಳಿ ಕಲರವ
ರವೀನಾ ಟಂಡನ್, ನೀಲ್ ನಿತಿನ್ ಮುಕೇಶ್, ಸೋಹಾ ಅಲಿ ಖಾನ್, ವರುಣ್ ಧವನ್, ಕತ್ರೀನಾ-ವಿಕ್ಕಿ, ಪ್ರಿಯಾಂಕಾ-ನಿಕ್, ಬಿಗ್ ಬಿ ಫ್ಯಾಮಿಲಿ, ರಣ್‌ದೀಪ್ ಹೂಡಾ, ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ, ವಿಜಯ್ ವರ್ಮಾ, ಟೈಗರ್ ಶ್ರಾಫ್, ಅನನ್ಯಾ, ಶ್ರದ್ಧಾ, ಅಂಕಿತಾ, ಶರ್ಲೀನ್ ಚೋಪ್ರಾ, ಸ್ಯಾಂಡಲ್‌ವುಡ್‌ನ ಸಂಯುಕ್ತಾ ಹೆಗಡೆ, ಕೋಳಿ ರಮ್ಯಾ ಸೇರಿದಂತೆ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ನಟ-ನಟಿಯರು ಡಿಸೈನರ್ ಔಟ್‌ಫಿಟ್‌ಗಳಲ್ಲಿ ಆಚರಿಸಿರುವ ಕುಣಿದಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದರು.