ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summar Fashion 2026: ಸಮ್ಮರ್ ಫ್ಯಾಷನ್‌ಗೆ ಮರಳಿ ಲಗ್ಗೆ ಇಟ್ಟ ವೈವಿಧ್ಯಮಯ ವಿನ್ಯಾಸದ ಸ್ಟ್ರಾಪ್ ಡ್ರೆಸ್

ಸಮ್ಮರ್ ಫ್ಯಾಷನ್‌ಗೆ ವೈವಿಧ್ಯಮಯ ವಿನ್ಯಾಸದ ಸ್ಟ್ರಾಪ್ ಡ್ರೆಸ್‌ಗಳು ಫ್ಯಾಷನ್‌ ಲೋಕದಲ್ಲಿಎಂಟ್ರಿ ನೀಡಿ, ಟ್ರೆಂಡಿಯಾಗಿವೆ. ಹೊಸ ಬಗೆಯ ಸ್ಪೆಗೆಟಿ, ಶೋಲ್ಡರ್ ಸ್ಟ್ರಾಪ್ ಹಾಗೂ ಬಾರ್ಡಟ್ ಸ್ಟ್ರಾಪ್ ಡ್ರೆಸ್‌ಗಳು ಊಹೆಗೂ ಮೀರಿದ ಡಿಸೈನ್‌ನಲ್ಲಿ ಬಂದಿವೆ. ಯಾವ್ಯಾವ ಬಗೆಯವು ಫ್ಯಾಷನ್‌ನಲ್ಲಿವೆ? ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

ಸ್ಟ್ರಾಪ್ ಡ್ರೆಸ್ (ಚಿತ್ರಕೃಪೆ: ಪಿಕ್ಸೆಲ್)
1/5

ಈ ಬಾರಿಯ ಬೇಸಿಗೆಯಲ್ಲಿ ಸ್ಟ್ರಾಪ್ ಡ್ರೆಸ್‌ಗಳು ಮರಳಿದ್ದು, ಬಗೆಬಗೆಯವು ಟ್ರೆಂಡಿಯಾಗಿವೆ. ಅವುಗಳಲ್ಲಿ ಎಂದಿನಂತೆ ಲೆಕ್ಕವಿಲ್ಲದಷ್ಟು ವಿನ್ಯಾಸದವು ಈಗಾಗಲೇ ಫ್ಯಾಷನ್ ಪ್ರಿಯರನ್ನು ಸವಾರಿ ಮಾಡತೊಡಗಿವೆ. ಹೊಸ ಬಗೆಯ ಸ್ಪೆಗೆಟಿ, ಶೋಲ್ಡರ್ ಸ್ಟ್ರಾಪ್ ಹಾಗೂ ಬಾರ್ಡಟ್ ಸ್ಟ್ರಾಪ್ ಡ್ರೆಸ್‌ಗಳು ಊಹೆಗೂ ಮೀರಿದ ಡಿಸೈನ್‌ನಲ್ಲಿ ಬಂದಿವೆ.

2/5

ವೈವಿಧ್ಯಮಯ ಡಿಸೈನ್‌ಗಳಲ್ಲಿ ಸ್ಟ್ರಾಪ್ ಡ್ರೆಸ್‌ಗಳು

ಈ ಬೇಸಿಗೆಯಲ್ಲಿ ಕ್ಯಾಶುವಲ್ ಲುಕ್ ನೀಡುವಂತಹ ಲೇಸ್ ವೆಸ್ಟ್ ಸ್ಟ್ರಾಪ್, ಡೆನೀಮ್, ಸ್ಟ್ರೈಪ್ಡ್, ಫಿಟ್ಟೆಡ್, ಪೆಪ್ಲಂ ಡಿಸೈನ್, ಸ್ಪೆಗೆಟಿ, ಶೋಲ್ಡರ್ ಸ್ಟ್ರಾಪ್ ಡ್ರೆಸ್‌ಗಳು ಕಾಲೇಜು ಹುಡುಗಿಯರನ್ನು ಸೆಳೆದಿವೆ. ಇನ್ನು, ಲೇಯರ್ಡ್, ಬಾರ್ಡಟ್, ಎ ಲೈನ್, ಬ್ಯಾಕ್ ಟಾಪ್, ಪ್ರಿಂಟೆಡ್, ಸಾಲಿಡ್ ಟಾಪ್, ಕೋಲ್ಡ್ ಶೋಲ್ಡರ್, ಟ್ಯಾಂಕ್, ಎಂಪೈರ್ಡ್ ಟಾಪ್‌ಗಳು ಕಾರ್ಪೊರೇಟ್ ಕ್ಷೇತ್ರ ಹಾಗೂ ವರ್ಕಿಂಗ್ ಮಹಿಳೆಯರನ್ನು ಆಕರ್ಷಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.

3/5

ಚಾಲ್ತಿಯಲ್ಲಿರುವ ಸ್ಟ್ರಾಪ್ ಡ್ರೆಸ್‌ಗಳು

ಲೈಟ್ ಕಲರ್‌ನ ಪ್ರಿಂಟೆಡ್ ಸ್ಟ್ರಾಪ್ ಫ್ರಾಕ್‌ಗಳು ಇಂದು ಹೆಚ್ಚು ಫ್ಯಾಷನ್‌ನಲ್ಲಿವೆ. ಯಂಗ್ ಲುಕ್ ನೀಡುವ ಈ ಸ್ಟ್ರಾಪ್ ಡ್ರೆಸ್‌ಗಳು ಎಲ್ಲಾ ವಯಸ್ಸಿನ ಮಾಡರ್ನ್ ಲುಕ್ ಬಯಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ. ಅದರಲ್ಲೂ ಫ್ಲೋಟಿ, ಟ್ಯಾಂಕ್ ಹಾಗೂ ಶೋಲ್ಡರ್ ಸ್ಟ್ರಾಪ್ ಟಾಪ್‌ಗಳಂತೆ ಕಾಣುವ ಡ್ರೆಸ್‌ಗಳು ಮನಮೋಹಕ ಡಿಸೈನ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.

4/5

ಸ್ಟ್ರಾಪ್ ಡ್ರೆಸ್ ಪ್ರಿಯರಿಗೆ ಇಲ್ಲಿವೆ 7 ಸಲಹೆಗಳು

  • ನಿಮ್ಮ ಪರ್ಸನಾಲಿಟಿಗೆ ತಕ್ಕಂತಹ ಸ್ಟ್ರಾಪ್ ಡ್ರೆಸ್ ಆಯ್ಕೆ ಮಾಡಿ ಧರಿಸಿ.
  • ಸ್ಟ್ರಾಪ್ ಡ್ರೆಸ್ ಫಿಟ್ಟಿಂಗ್ ಇರಬೇಕು. ಇಲ್ಲವಾದಲ್ಲಿ ಬಾಡಿ ಎಕ್ಸ್‌ಪೋಸ್ ಆಗಬಹುದು.
  • ಡಿಸೈನ್ ಹಾಗೂ ಫ್ಯಾಬ್ರಿಕ್ ವಿನ್ಯಾಸ ನೋಡಿ, ಕೊಂಡರೆ ಒಳಿತು.
5/5
  • ಈ ಸೀಸನ್‌ನಲ್ಲಿ ಹೆಚ್ಚು ದಪ್ಪನೆಯ ಮೆಟೀರಿಯಲ್‌ನ ಸ್ಟ್ರಾಪ್ ಡ್ರೆಸ್ ಬೇಡ!
  • ಸ್ಟ್ರೈಫ್ಸ್ ಸ್ಟ್ರಾಪ್, ಪ್ರಿಂಟೆಡ್‌ನವು ಮತ್ತೊಮ್ಮೆ ಫ್ಯಾಷನ್‌ನಲ್ಲಿವೆ.
  • ನೆಕ್ಲೈನ್ ಅಗಲವಾಗಿರುವುದರಿಂದ ನೆಕ್ ಚೈನ್ಸ್ ಧರಿಸಬಹುದು.
  • ಸ್ಲಿವ್ಲೆಸ್ ಕ್ರಾಪ್ ಟಾಪ್ ಧರಿಸಿಯೂ ಸ್ಟ್ರಾಪ್ ಡ್ರೆಸ್ ಧರಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author