Summer Accessories 2026: ಬೇಸಗೆಯಲ್ಲಿ ಶ್ವಾನಗಳನ್ನು ಕೂಲಾಗಿರಿಸುವ ಆಕ್ಸೆಸರೀಸ್
ಸಮ್ಮರ್‌ನಲ್ಲಿ ಮುದ್ದಿನ ಶ್ವಾನಗಳನ್ನು ಕೂಲಾಗಿರಿಸುವ ಆಕ್ಸೆಸರೀಸ್‌ಗಳು ಟ್ರೆಂಡಿಯಾಗಿವೆ. ಈಗಾಗಲೇ ಆಫ್‌ಲೈನ್ ಹಾಗೂ ಆನ್‌ಲೈನ್ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು ಆಗಮಿಸಿವೆ? ಏನೆಲ್ಲ ಡಿಸೈನ್‌ನಲ್ಲಿ ಲಭ್ಯ? ಎಂಬುದರ ಬಗ್ಗೆ ಡಾಗ್ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
ಟ್ರಂಡ್ ಆಕ್ಸೆಸರೀಸ್
ಸಮ್ಮರ್‌ನಲ್ಲಿ ಮುದ್ದಿನ ಶ್ವಾನಗಳನ್ನು ಕೂಲಾಗಿರಿಸುವ ಆಕ್ಸೆಸರೀಸ್‌ಗಳು ಟ್ರೆಂಡಿಯಾಗಿವೆ. ಹೌದು, ಈಗಾಗಲೇ ಆಫ್‌ಲೈನ್ ಹಾಗೂ ಆನ್‌ಲೈನ್ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.
ಡಾಗ್ ಕೂಲಿಂಗ್ ಬಾಂದನಾ
ನೋಡಲು ಸ್ಕಾರ್ಫ್‌ನಂತೆ ಕಾಣಿಸುವ ಶ್ವಾನಗಳನ್ನು ಕೂಲಾಗಿರಿಸುವ ಹಾಗೂ ನೋಡಲು ಕೂಡ ಆಕರ್ಷಕವಾಗಿ ಬಿಂಬಿಸುವ ಕೂಲಿಂಗ್ ಬಾಂದನಾಗಳು ಈ ಸಮ್ಮರ್ ಸೀಸನ್‌ನಲ್ಲಿ ಡಾಗ್ ಪ್ರಿಯರನ್ನು ಸೆಳೆದಿವೆ. ಪೆಟ್ ಶಾಪ್‌ಗಳಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ತೀರಾ ಬಿಸಿಲಿನ ಝಳ ನಿಮ್ಮ ಶ್ವಾನಗಳನ್ನು ಸುಸ್ತಾಗಿಸುತ್ತಿದ್ದಲ್ಲಿ ಈ ಕೂಲಿಂಗ್ ಮ್ಯಾಟ್‌ಗಳು ಅವನ್ನು ಕೂಲಾಗಿರಿಸಬಹುದು. ನಾನಾ ವಿನ್ಯಾಸದ ಕಲರ್‌ಗಳ ಈ ಫ್ಯಾಷೆನಬಲ್ ಮ್ಯಾಟ್‌ಗಳು ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ಸಮ್ಮರ್ ಲೈಟ್‌ವೇಟ್ ಟೀ ಶರ್ಟ್ಸ್
ಚಳಿಗಾಲಕ್ಕೆ ಮಾತ್ರವಲ್ಲ, ಬಿಸಿಲಿನಲ್ಲಿ ವಾಕಿಂಗ್ ಹೋಗುವಾಗ ಸೂರ್ಯನ ಕಿರಣಗಳಿಂದ ಕಾಪಾಡುವ ಹಾಗೂ ಅಲರ್ಜಿಗಳಿಂದ ಸಂರಕ್ಷಿಸುವಂತಹ ಲೈಕ್ರಾ ಫ್ಯಾಬ್ರಿಕ್‌ನ ಲೈಟ್‌ವೇಟ್ ಟೀ ಶರ್ಟ್‌ಗಳು ಕೂಡ ಈ ಸೀಸನ್‌ನಲ್ಲಿ ವೈಬ್ರೆಂಟ್ ಕಲರ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಪೆಟ್ ಶಾಪ್‌ನ ಮ್ಯಾನೇಜರ್.
ಕಲರ್‌ಫುಲ್ ಹ್ಯಾಟ್ಸ್ & ಕ್ಯಾಪ್ಸ್
ಮನೆಯ ಮುದ್ದು ನಾಯಿಮರಿಗಳನ್ನು ಕ್ಯೂಟಾಗಿಸಬಲ್ಲ ನಾನಾ ಬಗೆಯ ಸಮ್ಮರ್ ಕ್ಯಾಪ್ ಹಾಗೂ ಹ್ಯಾಟ್ಸ್ ಆನ್‌ಲೈನ್ ಶಾಪ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಂದಿವೆ. ಆಯಾ ಬ್ರೀಡ್‌ಗೆ ತಕ್ಕಂತೆ ಹಾಕಬಹುದಾದ ಈ ಕ್ಯಾಪ್‌ಗಳು ಕೆಲವು ಹ್ಯಾಟ್ ರೂಪದಲ್ಲಿದ್ದರೆ ಇನ್ನು ಕೆಲವು ಡಿಫರೆಂಟಾಗಿವೆ.
ಟ್ರೆಂಡಿಯಾಗಿರುವ ಡಾಗ್ ಕ್ಯಾಪ್
ಡಾಗ್ ಬೇಸ್ಬಾಲ್ ಕ್ಯಾಪ್, ಕೂಲಿಂಗ್ ಡಾಗ್ ಹ್ಯಾಟ್, ಡಾಗ್ ಸನ್ ಹ್ಯಾಟ್, ಅಡ್ಜಸ್ಟಬಲ್ ಲೇಸ್ ಹ್ಯಾಟ್, ಪಪ್ಪಿ ಹಾಲಿಟೇ ಹ್ಯಾಟ್ಸ್, ಡಾಗ್ ಟ್ರಕ್ಕರ್ ಹ್ಯಾಟ್, ಸ್ಟ್ರಾ ಹ್ಯಾಟ್, ಟ್ರಕ್ಕರ್ ಹ್ಯಾಟ್, ಕ್ಯಾಮೋ ಬಕೆಟ್ ಹ್ಯಾಟ್ ಸೇರಿದಂತೆ ನಾನಾ ವಿನ್ಯಾಸದ ಕ್ಯಾಪ್ ಹಾಗೂ ಹ್ಯಾಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ ಎನ್ನುತ್ತಾರೆ ಪೆಟ್ ಶಾಪ್‌ವೊಂದರ ಮಾಲಕರು.