Summer Fashion 2026: ಬೇಸಿಗೆಯ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಬಂತು ಕಾರ್ಸೆಟ್ ಬ್ಲೌಸ್ ಲೆಹೆಂಗಾ!
Corset Blouse Lehenga: ಸಮ್ಮರ್ ಸೀಸನ್‌ಗೆ ಹೊಂದುವಂತಹ ಗ್ಲಾಮರಸ್ ಕಾರ್ಸೆಟ್ ಬ್ಲೌಸ್ ಲೆಹೆಂಗಾಗಳು ಈ ಸೀಸನ್‌ನ ವೆಡ್ಡಿಂಗ್ ಫ್ಯಾಷನ್‌ಗೆ ಆಗಮಿಸಿವೆ. ನಟಿ ನುಸ್ರತ್ ಬರುಚಾ ಧರಿಸಿದ್ಧ ಈ ಔಟ್‌ಫಿಟ್ ವಿಶೇಷತೆಯಾದರೂ ಏನು? ಇಲ್ಲಿದೆ ಡಿಟೇಲ್ಸ್.
ಕಾರ್ಸೆಟ್ ಬ್ಲೌಸ್ ಲೆಹೆಂಗಾಗಳು ಈ ಸೀಸನ್‌ನ ವೆಡ್ಡಿಂಗ್ ಸೀಸನ್‌ಗೆ ಲಗ್ಗೆ ಇಟ್ಟಿವೆ. ಹೌದು, ಈ ಸಮ್ಮರ್ ಸೀಸನ್‌ಗೆ ಹೊಂದುವಂತಹ ಗ್ಲಾಮರಸ್ ಲುಕ್ ನೀಡುವ ಬಾಡಿ ಫಿಟ್ ಕಾರ್ಸೆಟ್ ಬ್ಲೌಸ್ ಲೆಹೆಂಗಾಗಳು ಈಗಾಗಲೇ ಅಲ್ಟ್ರಾ ಮಾಡರ್ನ್ ಯುವತಿಯರನ್ನು ಸವಾರಿ ಮಾಡತೊಡಗಿವೆ.
ನುಸ್ರತ್ ಬರೂಚಾ ಕಾರ್ಸೆಟ್ ಬ್ಲೌಸ್
ಇದಕ್ಕೆ ಪೂರಕ ಎಂಬಂತೆ, ನಟಿ ನುಸ್ರತ್ ಬರೂಚಾ ಧರಿಸಿದ್ಧ ಸಿಮೋನ್ ಹ್ಯಾಂಡಿಕ್ರಾಫ್ಟೆಡ್ ಬ್ರಾಂಡ್‌ನ ಕಾರ್ಸೆಟ್ ಬ್ಲೌಸ್ ಲೆಹೆಂಗಾ ಇದೀಗ ಫ್ಯಾಷನ್ ಲೋಕದಲ್ಲಿ ವೈರಲ್ ಆಗೋಗಿದೆ. ಅವರ ಲುಕ್ ಕೂಡ ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಾರ್ಸೆಟ್ ಬ್ಲೌಸ್ ವಿಶೇಷತೆ
ಇನ್ನು, ಎಲ್ಲರಿಗೂ ತಿಳಿದಿರುವಂತೆ, ಕಾರ್ಸೆಟ್ ಬ್ಲೌಸ್ ಬಾಡಿ ಫಿಟ್ ಆಗಿರುತ್ತದೆ. ಅದರಲ್ಲೂ ಧರಿಸಿದಾಗ ಗ್ಲಾಮರಸ್ ಲುಕ್ ನೀಡುತ್ತದೆ. ಜತೆಗೆ ಸಮ್ಮರ್‌ಗೆ ಮ್ಯಾಚ್ ಆಗುವಂತಹ ಸ್ಟ್ರಾಪ್‌ನಂತಹ ಡಿಸೈನ್ ಕಂಫರ್ಟಬಲ್ ಫಿಲ್‌ನೊಂದಿಗೆ ಗ್ಲಾಮರಸ್ ಲುಕ್ ನೀಡುತ್ತದೆ. ಹಾಗಾಗಿ ಇದು ಬಾಡಿ ಫಿಟ್ ಆಗಿದ್ದರೂ ಕೂಡ ಸೆಕೆಯಾಗುವುದಿಲ್ಲ ಎಂಬುದು ಫ್ಯಾಷನಿಸ್ಟಾಗಳ ಅಭಿಪ್ರಾಯ.
ಸೆಲೆಬ್ರೆಟಿ ಲುಕ್ ನೀಡುವ ಕಾರ್ಸೆಟ್ ಲೆಹೆಂಗಾ
ಕಾರ್ಸೆಟ್ ಲೆಹೆಂಗಾ ಸೆಲೆಬ್ರೆಟಿ ಲುಕ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ! ಬಾಲಿವುಡ್ ಸೆಲೆಬ್ರೆಟಿಗಳಿಂದಿಡಿದು ಫ್ಯಾಷನ್ ಸೆಲೆಬ್ರೆಟಿಗಳು ಇತ್ತೀಚೆಗೆ ಕಾರ್ಸೆಟ್ ಟಾಪ್ ಅಥವಾ ಕಾರ್ಸೆಟ್ ಬ್ಲೌಸ್‌ಗಳತ್ತ ವಾಲುತ್ತಿದ್ದಾರೆ. ಪರಿಣಾಮ, ಇತ್ತೀಚೆಗೆ ಯುವತಿಯರು ಅದರಲ್ಲೂ ಅಲ್ಟ್ರಾ ಮಾಡರ್ನ್ ಹುಡುಗಿಯರು ಈ ಔಟ್‌ಫಿಟ್ ಪ್ರೇಮಪಾಶಕ್ಕೆ ಸಿಲುಕಿದ್ದಾರೆ ಎನ್ನುತ್ತಾರೆ ಫ್ಯಾಷನ್ ಸೆಲೆಬ್ರೆಟಿಗಳು.
ಕಾರ್ಸೆಟ್ ಕ್ರಾಪ್ ಬ್ಲೌಸ್ ಸ್ಟೈಲಿಂಗ್
ಬಹುತೇಕ ಕಾರ್ಸೆಟ್ ಬ್ಲೌಸ್‌ಗಳು ಇಂಡೋ-ವೆಸ್ಟರ್ನ್ ಲುಕ್ ನೀಡುತ್ತವೆ. ದೇಸಿ ಲುಕ್ ನೀಡುವುದಿಲ್ಲ! ಅದರಲ್ಲೂ ಈ ವೆಡ್ಡಿಂಗ್ ಸೀಸನ್‌ನಲ್ಲಿ ಈ ಶೈಲಿಯ ಡಿಸೈನರ್‌ವೇರ್‌ಗಳ ಸ್ಟೈಲಿಂಗ್ ಇವುಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.