ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಜೆನ್‌ ಜಿ ಯುವತಿಯರನ್ನು ಅಪ್ಪಿದ ಕಾಟನ್‌ ಕಾರ್ಸೆಟ್ ಡ್ರೆಸ್

ಇದುವರೆಗೂ ಹೈ ಫ್ಯಾಷನ್‌ ಲಿಸ್ಟ್‌ನಲ್ಲಿದ್ದ ಕಾರ್ಸೆಟ್‌ ಡ್ರೆಸ್‌ಗಳು, ಕಾಟನ್‌ ಫ್ಯಾಬ್ರಿಕ್‌ನಲ್ಲಿ ಲಗ್ಗೆ ಇಟ್ಟಿದ್ದು, ಸದ್ಯ ಜೆನ್‌ ಜಿ ಹುಡುಗಿಯರನ್ನು ಅಪ್ಪಿವೆ. ಈ ಉಡುಗೆಯ ಸ್ಪೆಷಾಲಿಟಿಯಾದರೂ ಏನು? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಗೀತಾಂಜಲಿ ಸಿಂಗ್‌, ನಟಿ
1/5

ಕಾಟನ್‌ ಕಾರ್ಸೆಟ್‌ ಡ್ರೆಸ್‌ಗಳು ಜೆನ್‌ ಜಿ ಹುಡುಗಿಯರನ್ನು ಬೇಸಿಗೆಯಲ್ಲೂ ಅಪ್ಪಿಕೊಂಡಿವೆ.

2/5

ಕೈಗೆಟಕುವ ಬೆಲೆಯಲ್ಲಿ ಕಾಟನ್‌ ಕಾರ್ಸೆಟ್‌ ಡ್ರೆಸ್‌

ಹೌದು, ಇದುವರೆಗೂ ನಾನಾ ದುಬಾರಿ ಬೆಲೆಯ ಫ್ಯಾಬ್ರಿಕ್‌ನಲ್ಲಿ ಹೈ ಫ್ಯಾಷನ್‌ ಲಿಸ್ಟ್‌ನಲ್ಲಿದ್ದ ಕಾರ್ಸೆಟ್‌ ಡ್ರೆಸ್‌ಗಳು, ಇದೀಗ ಸಾಮಾನ್ಯ ಹುಡುಗಿಯರು ಧರಿಸುವಂತೆ, ಕೈಗೆಟಕುವ ದರದಲ್ಲಿ ಫ್ಯಾಷನ್‌ಲೋಕದಲ್ಲಿ ಬಿಡುಗಡೆಗೊಂಡಿವೆ. ಸಮ್ಮರ್‌ ಸೀಸನ್‌ನ ಫ್ಯಾಷನ್‌ನ ಟಾಪ್‌ ಲಿಸ್ಟ್‌ಗೆ ಸೇರಿವೆ.

3/5

ಗೀತಾಂಜಲಿ ಧರಿಸಿದ ಕಾಟನ್‌ ಕಾರ್ಸೆಟ್‌ ಡ್ರೆಸ್‌

ನಟಿ ಗೀತಾಂಜಲಿ ಧರಿಸಿದ್ಧ ಕಾಟನ್‌ ಕಾರ್ಸೆಟ್‌ ಡ್ರೆಸ್, ಈ ಸೀಸನ್‌ನ ಟಾಪ್‌ ಕಾಟನ್‌ ಡ್ರೆಸ್‌ಗಳ ಲಿಸ್ಟ್‌ನಲ್ಲಿ ಸೇರಿದೆ. ವಕೇಷನ್‌ ಮೋಡ್‌ನಲ್ಲಿರುವ ಸೆಲೆಬ್ರೆಟಿಗಳು ಕೂಡ ಈ ಕಾಟನ್‌ ಕಾರ್ಸೆಟ್‌ ಡ್ರೆಸ್‌ಗಳ ಮೋಹಕ್ಕೆ ಸಿಲುಕತೊಡಗಿದ್ದಾರೆ. ಪರಿಣಾಮ, ಇದೀಗ ಸಾಮಾನ್ಯ ಯುವತಿಯರು ಅದರಲ್ಲೂ ಜೆನ್‌ ಜಿ ಹುಡುಗಿಯರು ಇವನ್ನು ಅಪ್ಪಿಕೊಂಡಿದ್ದಾರೆ. ಸೀಸನ್‌ ಟ್ರೆಂಡ್‌ಗೆ ಸೇರಿಸಿದ್ದಾರೆ.

4/5

ಕಾಟನ್‌ ಕಾರ್ಸೆಟ್‌ ಡ್ರೆಸ್‌ ಸ್ಪೆಷಾಲಿಟಿ

ಇದುವರೆಗೂ ಕಾಟನ್‌ ಫ್ಯಾಬ್ರಿಕ್‌ನ ನಾನಾ ಉಡುಪುಗಳು ಬೇಸಿಗೆಯಲ್ಲಿ ಚಾಲ್ತಿಯಲ್ಲಿದ್ದವು. ದೇಹದ ಮೇಲ್ಭಾಗದ ವಿನ್ಯಾಸ ಬಿಗಿಯಾಗಿ ಕೂರುವುದರಿಂದ ಈ ಕಾರ್ಸೆಟ್‌ ಡ್ರೆಸ್‌ ಸೀಸನ್‌ನಲ್ಲಿ ಔಟ್‌ ಆಗಬಹುದೆಂದು ಫ್ಯಾಷನಿಸ್ಟಾಗಳು ಭಾವಿಸಿದ್ದರು. ಆದರೆ, ಪ್ರಯೋಗಾತ್ಮಕವಾಗಿ ವಿನ್ಯಾಸಗೊಳಿಸಿದ ಈ ಡ್ರೆಸ್‌ಗಳು ಬಿಡುಗಡೆಗೊಂಡಿದ್ದೇ ತಡ ಜೆನ್‌ ಜಿ ಯುವತಿಯರು ಮುಗಿಬಿದ್ದು ಕೊಳ್ಳಲಾರಂಭಿಸಿದರು. ಹಾಗಾಗಿ ಬೇಸಿಗೆಯಲ್ಲೂ ಈ ಡ್ರೆಸ್‌ ಟ್ರೆಂಡಿಯಾಗಲು ಕಾರಣವಾಯಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಕಾಟನ್‌ ಕಾರ್ಸೆಟ್‌ ಡ್ರೆಸ್‌ ಟಿಪ್ಸ್

  • ಖರೀದಿಸುವಾಗ ಆದಷ್ಟೂ ಸಾಫ್ಟ್ ಕಾಟನ್‌ ಕಾರ್ಸೆಟ್‌ ಔಟ್‌ಫಿಟ್‌ ಕೊಳ್ಳಿ.
  • ಈ ಉಡುಗೆ ಬಿಗಿಯಾಗಿ ಕೂರುವುದರಿಂದ ಆದಷ್ಟೂ ಒಂದಿಂಚು ಲೂಸಾಗಿರುವ ಡ್ರೆಸ್‌ ಆಯ್ಕೆ ಮಾಡಿ.
  • ಬೇಸಿಗೆಯ ಫೋಟೋಶೂಟ್‌ನಲ್ಲಿ ಅಂದವಾಗಿ ಕಾಣಿಸುತ್ತದೆ.
  • ಸಿಂಪಲ್‌ ಲುಕ್‌ ಕೂಡ ಈ ಡ್ರೆಸ್‌ಗೆ ಹೊಂದುತ್ತದೆ.

ಶೀಲಾ ಸಿ ಶೆಟ್ಟಿ

View all posts by this author