ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಬೇಸಿಗೆಯಲ್ಲಿ ಕೂಲಾಗಿರಿಸುವ ಕುಲ್ಲೊಟ್ಸ್ ಫ್ಯಾಷನ್

ಬೇಸಿಗೆಯ ಧಗೆಯಲ್ಲೂಆರಾಮಾವಾಗಿ ಧರಿಸಬಹುದಾದಂತಹ ಕುಲ್ಲೊಟ್ಸ್ ಇಂದು ಮಾನಿನಿಯರನ್ನು ಮೆಚ್ಚಿಸಿದೆ. ಈ ಸೀಸನ್‌ಗೆ ತಕ್ಕಂತೆ ಸೂಟ್ ಆಗುವಂತೆ ದೊಗಲೆಯಾಗಿರುವ ಈ ಅರ್ಧ ಶೇಪ್‌ನ ಪ್ಯಾಂಟ್‌ಗಳು ಈ ಬಾರಿಯ ಫ್ಯಾಷನ್‌ನಲ್ಲಿ ಹೊಸ ರೂಪದಲ್ಲಿ ಚಾಲ್ತಿಯಲ್ಲಿವೆ. ಯಾವ್ಯಾವ ಬಗೆಯವು ಈ ಬಾರಿ ಸೀಸನ್‌ಗೆ ಮರಳಿವೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.

ಕುಲ್ಲೊಟ್ಸ್ (ಚಿತ್ರಕೃಪೆ: ಪಿಕ್ಸೆಲ್)
1/5

ಬೇಸಿಗೆಯ ಲೇಡೀಸ್ ಡ್ರೆಸ್‌ಕೋಡ್‌ನಲ್ಲಿ ಕುಲ್ಲೊಟ್ಸ್ ಟಾಪ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. ಈ ಸೀಸನ್‌ಗೆ ತಕ್ಕಂತೆ ಸೂಟ್ ಆಗುವಂತೆ ದೊಗಲೆಯಾಗಿರುವ ಈ ಅರ್ಧ ಶೇಪ್‌ನ ಪ್ಯಾಂಟ್‌ಗಳು ಈ ಬಾರಿಯ ಫ್ಯಾಷನ್‌ನಲ್ಲಿ ಹೊಸ ರೂಪದಲ್ಲಿ ಚಾಲ್ತಿಯಲ್ಲಿವೆ.

2/5

ಏನಿದು ಕುಲ್ಲೊಟ್ಸ್?

ಸಿಂಪಲ್ ಆಗಿ ಹೇಳುವುದಾದಲ್ಲಿ ತ್ರಿ ಫೋರ್ತ್ ಲೆಂಥ್ ಇರುವ ಪ್ಯಾಂಟ್ ಶೈಲಿಯ ವೆಸ್ಟರ್ನ್ ಡಿಸೈನ್‌ನ ಶಾರ್ಟ್ ಪ್ಯಾಂಟ್‌ಗಳನ್ನು ಕುಲ್ಲೊಟ್ಸ್ ಎಂದು ಕರೆಯಲಾಗುತ್ತದೆ. ಕೊಂಚ ಸಡಿಲವಾಗಿ ಹಾಗೂ ದೊಗಲೆಯಾಗಿ ಇವು ಇರುತ್ತವೆ. ಹಾಗೆಂದು ಇವು ನೈಟ್ ಪ್ಯಾಂಟ್ ಅಲ್ಲ. ಡೇ ಟೈಮ್ ಡ್ರೆಸ್‌ಕೋಡ್. ದೊಗಲೆಯಾಗಿ ಇರುವುದರಿಂದ ಇವನ್ನು ಕೆಲವರು ಶಾರ್ಟ್ ಪ್ಯಾರಲಲ್ ಪ್ಯಾಂಟ್ ಎಂದು ಆಡು ಭಾಷೆಯಲ್ಲಿ ಕರೆಯುತ್ತಾರೆ. ಒಟ್ಟಿನಲ್ಲಿ, ಮಂಡಿಗಿಂತ ಕೊಂಚ ಕೆಳಗಿನ ತನಕ ಇವು ಇಳಿ ಬಿಟ್ಟಂತೆ ಇರುತ್ತವೆ.

3/5

ಬಗೆಬಗೆಯ ಕುಲ್ಲೊಟ್ಸ್

ಫ್ಲೇರ್, ನ್ಯಾರೋ, ಪ್ಯಾರಲೆಲ್ ಹೀಗೆ ನಾನಾ ಬಗೆಯಲ್ಲಿ ಸ್ಟಿಚ್ಚಿಂಗ್ ಮಾಡಿರುವಂತಹ ಕುಲ್ಲೊಟ್ಸ್ ಇಂದು ಟ್ರೆಂಡಿಯಾಗಿವೆ. ಅಚ್ಚರಿಯ ವಿಚಾರವೆಂದರೇ, ಇವನ್ನು ಮೊದಲು ಹುಡುಗರು ಹೆಚ್ಚಾಗಿ ಧರಿಸುತ್ತಿದ್ದರು. ನ್ಯಾರೋ ಶೇಪ್‌ನದ್ದು ಟ್ರೆಂಡ್‌ನಲ್ಲಿತ್ತು. ನೋಡಲು ಬರ್ಮಡಾ ಲುಕ್‌ನಲ್ಲಿಇದ್ದುದ್ದರಿಂದ ಹುಡುಗರ ಪ್ರೀತಿಗೆ ಪಾತ್ರವಾಗಿದ್ದವು. ಯೂನಿಸೆಕ್ಸ್ ಡಿಸೈನ್‌ನಲ್ಲಿಇವು ಕೆಲ ಕಾಲ ರನ್ನಿಂಗ್‌ನಲ್ಲಿದ್ದವು. ನಂತರ ಕೆಲಕಾಲ ಮಾಯವಾಗಿತ್ತಾದರೂ ವಿದೇಶಿಗರ ಮೂಲಕ ಇವು ರೀ ಎಂಟ್ರಿ ನೀಡಿದವು.

4/5

ಟ್ರಾವೆಲ್ ಫ್ರೆಂಡ್ಲಿಯಾಗಿರುವ ಕುಲ್ಲೊಟ್ಸ್

ಟ್ರಾವೆಲ್ ಮಾಡುವವರಿಗೆ ಬೆಸ್ಟ್ ಎನ್ನುವಂತಿರುವ ಇವು ಟ್ರಾವೆಲ್ ಪ್ರಿಯರ ಮೂಲಕ ಮತ್ತೊಮ್ಮೆ ಚಾಲ್ತಿಗೆ ಬಂದವು ಎನ್ನುತ್ತಾರೆ ಟ್ರಾವೆಲ್ ಸ್ಟೈಲಿಸ್ಟ್ ಜೋಸೆಫ್. ಅವರ ಪ್ರಕಾರ, ಕುಲ್ಲೊಟ್ಸ್ ಟ್ರೆಂಡ್ ಈ ಸೀಸನ್ಗೆ ಮರಳಿದೆ. ವಯಸ್ಸಿನ ಭೇದ ಭಾವವಿಲ್ಲದೇ ಎಲ್ಲರೂ ಇದನ್ನು ಧರಿಸತೊಡಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸಮ್ಮರ್ ಸೀಸನ್ ಫ್ಯಾಷನ್ ಸ್ಟೈಲ್ಸ್‌ ಸ್ಮೇಟ್‌ಮೆಂಟ್‌ಗೆ ಇವು ಸೇರಿವೆ ಎನ್ನುತ್ತಾರೆ.

5/5

ಕುಲ್ಲೊಟ್ಸ್ ಮಿಕ್ಸ್ ಮ್ಯಾಚ್ ಮಾಡುವ ಬಗೆ

ಕುಲ್ಲೊಟ್ಸ್ ಧರಿಸುವವರಿಗೆ ಮಿಕ್ಸ್ ಮ್ಯಾಚ್ಮಾಡುವ ಟೆಕ್ನಿಕ್ ಕೂಡ ಗೊತ್ತಿರಬೇಕು. ಜತೆಗೆ ಯಾವ ಬಗೆಯ ಟಾಪ್ ಧರಿಸಿದರೆ ಸುಂದರವಾಗಿ ಕಾಣುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕು. ಇನ್ನು ಕಾಂಟ್ರಾಸ್ಟ್ ವರ್ಣಗಳನ್ನು ಮ್ಯಾಚ್ ಮಾಡುವಾಗಲು ಅಷ್ಟೇ! ಕಲರ್ಸ್ ಕಾಂಬಿನೇಷನ್ಗಳನ್ನು ಪರ್ಫೆಕ್ಟ್ ಆಗಿ ಮ್ಯಾಚ್ ಮಾಡಬೇಕು ಎನ್ನುತ್ತಾರೆ ಡಿಸೈನರ್ಸ್.

ಕುಲ್ಲೊಟ್ಸ್ ಪ್ರಿಯರಿಗೆ ಟಿಪ್ಸ್

  • ಧರಿಸುವವರ ಕಾಲುಗಳು ನೀಳವಾಗಿದ್ದರೇ ಚೆನ್ನ.
  • ಟಾಪ್ ಪರ್ಫೆಕ್ಟಾಗಿ ಮ್ಯಾಚ್ ಮಾಡುವುದು ಉತ್ತಮ.
  • ಸೀಸನ್‌ಗೆ ತಕ್ಕಂತಹ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author