ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಬೇಸಿಗೆಗೆ ಮರಳಿದ ವೈವಿಧ್ಯಮಯ ಫ್ಲೋರಲ್‌ ಸೀರೆಗಳು

Floral Sarees: ಸಮ್ಮರ್‌ ಸೀಸನ್‌ನಲ್ಲಿ ಫ್ಲೋರಲ್‌ ಸೀರೆಗಳು ಮರಳಿವೆ. ಈ ಬಾರಿ ಲೈಟ್‌ ಕಲರ್ಸ್‌ನಲ್ಲಿ ಮಾತ್ರವಲ್ಲ, ಅಪರೂಪದ ಇಂಗ್ಲೀಷ್‌ ಕಲರ್‌ ಕಾಂಬಿನೇಷನ್‌ನಲ್ಲಿಯೂ ಬಿಡುಗಡೆಗೊಂಡಿವೆ. ಈ ಸೀರೆಯ ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಪ್ರಗ್ಯಾ ಜೈಸ್ವಾಲ್‌, ನಟಿ
1/5

ಈ ಬಾರಿಯ ಸಮ್ಮರ್‌ನಲ್ಲಿ ಲೈಟ್‌ ಶೇಡ್‌ನ ಫ್ಲೋರಲ್‌ ಸೀರೆಗಳ ಜತೆಗೆ ಡಾರ್ಕ್‌ ಶೇಡ್‌ ಹಾಗೂ ಇಂಗ್ಲೀಷ್‌ ಶೇಡ್‌ಗಳ ಪ್ರಿಂಟೆಡ್‌ ಫ್ಲೋರಲ್‌ ಸೀರೆಗಳು ಬಂದಿವೆ. ಮಾನಿನಿಯರ ನಾನಾ ಸ್ಟೈಲಿಂಗ್‌ಗೆ ಜೊತೆಯಾಗಿವೆ.

2/5

ವಿನೂತನ ಶೇಡ್‌ನಲ್ಲಿ ಫ್ಲೋರಲ್‌ ಸೀರೆಗಳು

ಹೌದು, ಪ್ರತಿ ಬಾರಿಯಂತೆ ಈ ಬಾರಿಯೂ ಸಮ್ಮರ್‌ ಸೀಸನ್‌ನಲ್ಲಿ ಬಗೆಬಗೆಯ ಫ್ಲೋರಲ್‌ ಸೀರೆಗಳು ಮರಳಿವೆ. ಆದರೆ, ವೈಬ್ರೆಂಟ್‌ ಹಾಗೂ ತಿಳಿ ವರ್ಣದ ಲೈಟ್‌ ಕಲರ್ಸ್‌ನ ಫ್ಲೋರಲ್‌ ಸೀರೆಗಳ ಜತೆಗೆ ಅಪರೂಪದ ಶೇಡ್‌ಗಳಾದ ಇಂಗ್ಲೀಷ್‌ ಕಲರ್‌ ಕಾಂಬಿನೇಷನ್‌ನ ಸೀರೆಗಳು ಬಿಡುಗಡೆಗೊಂಡಿವೆ. ಟ್ರೆಂಡಿಯಾಗಿವೆ.

3/5

ಪ್ರಗ್ಯಾ ಜಸ್ವಾಲ್‌ ಫ್ಲೋರಲ್‌ ಸೀರೆ

ಇತ್ತೀಚೆಗೆ ನಟಿ ಪ್ರಗ್ಯಾ ಜಸ್ವಾಲ್‌ ಉಟ್ಟಿದ್ದ ಟೀಲ್‌ ಬ್ಲ್ಯೂ ಶೇಡ್‌ನ ಮಿಕ್ಸ್ ಮ್ಯಾಚ್‌ನ ಕಾಂಬಿನೇಷನ್‌ನ ಫ್ಲೋರಲ್‌ ಸೀರೆ ಟ್ರೆಂಡಿಯಾಗಿತ್ತು. ಜತೆಗೆ ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಮಾನಿನಿಯರನ್ನು ಸವಾರಿ ಮಾಡತೊಡಗಿತ್ತು. ನೋಡಲು ತೀರಾ ಸಿಂಪಲ್‌ ಆಗಿ ಲೈಟ್‌ವೈಟ್‌ ಆಗಿದ್ದ ಈ ಸೀರೆ ಬೇಸಿಗೆಯ ಸೆಕೆಗೆ ಕಂಫರ್ಟಬಲ್‌ ಫೀಲ್‌ ನೀಡಿತ್ತು. ಪರಿಣಾಮ, ಟ್ರೆಂಡಿಯಾಯಿತು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಫ್ಲೋರಲ್‌ ಡಾರ್ಕ್‌ ಶೇಡ್‌ ಸೀರೆ

ಇದೀಗ ಬಿಡುಗಡೆಗೊಂಡಿರುವ ಡಾರ್ಕ್‌ ಶೇಡ್‌ ಇಲ್ಲವೇ ಇಂಗ್ಲೀಷ್‌ ಕಲರ್‌ನ ಫ್ಲೋರಲ್‌ ಸೀರೆಗಳು ಕಾರ್ಪೋರೇಟ್‌ ಮಹಿಳೆಯರನ್ನು ಮಾತ್ರವಲ್ಲ, ಸಾಮಾನ್ಯ ಮಹಿಳೆಯರಿಗೂ ಪ್ರಿಯವಾಗಿವೆ. ಇದಕ್ಕೆ ಕಾರಣ ಇವುಗಳನ್ನು ಉಟ್ಟಾಗ ಆರಾಮ ಎಂದೆನಿಸುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಫ್ಲೋರಲ್‌ ಸೀರೆ ಸ್ಟೈಲಿಂಗ್‌ ಟಿಪ್ಸ್

  • ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ ಮಾಡುವುದರಿಂದ ಮಾಡರ್ನ್‌ ಲುಕ್‌ ಪಡೆಯಬಹುದು.
  • ನೋಡಲು ಅತ್ಯಾಕರ್ಷಕವಾಗಿ ಕಾಣಿಸುತ್ತವೆ.
  • ಸಿಂಪಲ್‌ ಲುಕ್‌ ಕೂಡ ಅಂದವಾಗಿ ಬಿಂಬಿಸುತ್ತದೆ.
  • ಫ್ಲೋರಲ್‌ ಸೀರೆಗೆ ಆದಷ್ಟೂ ಸಿಂಪಲ್‌ ಆಕ್ಸೆಸರೀಸ್‌ ಧರಿಸುವುದು ಬೆಸ್ಟ್.

ಶೀಲಾ ಸಿ ಶೆಟ್ಟಿ

View all posts by this author