ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಮ್ಮರ್‌ನಲ್ಲಿ ಮರಳಿದ ದೊಗಲೆ ಕಫ್ತಾನ್

ಪ್ರತಿ ಬೇಸಿಗೆಯಲ್ಲೂ ಮರಳುವ ದೊಗಲೆ ಕಫ್ತಾನ್ ಸೆಟ್ ಇದೀಗ ನಯಾ ರೂಪದಲ್ಲಿ ಮತ್ತೊಮ್ಮೆ ಬಿಡುಗಡೆಯಾಗಿದೆ. ಸಾದಾ ಡಿಸೈನ್ ಮಾತ್ರವಲ್ಲ, ಫ್ಲೋರಲ್ ಹಾಗೂ ಟ್ರಾಪಿಕಲ್ ವಿನ್ಯಾಸದ ವೈವಿಧ್ಯಮಯ ಈ ಕಫ್ತಾನ್ ಸೆಟ್‌ಗಳು, ಮಹಿಳೆಯರ ವಾರ್ಡ್ರೋಬ್ ಸೇರಿವೆ. ಯಾರೆಲ್ಲಾ ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಚಿತ್ರಕೃಪೆ: ಪಿಕ್ಸೆಲ್
1/5

ಪ್ರತಿ ಬಾರಿಯಂತೆ ಈ ಬಾರಿಯೂ ಬೇಸಿಗೆಯಲ್ಲಿ ಕಫ್ತಾನ್ ಫ್ಯಾಷನ್ ರೀ ಎಂಟ್ರಿ ನೀಡಿದೆ. ರಿಲ್ಯಾಕ್ಸಿಂಗ್ ಆಗಿರಲು ಬಯಸುವ ಮಾನಿನಿಯರನ್ನು ಸೆಳೆದಿವೆ. ಹೌದು, ಸಾದಾ ಡಿಸೈನ್ ಮಾತ್ರವಲ್ಲ, ಫ್ಲೋರಲ್ ಹಾಗೂ ಟ್ರಾಪಿಕಲ್ ವಿನ್ಯಾಸದ ವೈವಿಧ್ಯಮಯ ಈ ಕಫ್ತಾನ್ ಸೆಟ್‌ಗಳು, ಮಹಿಳೆಯರ ವಾರ್ಡ್ರೋಬ್ ಸೇರಿವೆ.

2/5

ನಾನಾ ಬಗೆಯ ಕಫ್ತಾನ್ ಸೆಟ್ಸ್

ಶಾರ್ಟ್ ನೈಟ್ ಕಫ್ತಾನ್ ಸೆಟ್, ಡೀಪ್ ನೆಕ್, ಮ್ಯಾಕ್ಸಿ ಡ್ರೆಸ್, ಒವರ್‌ಸೈಝ್ ಕಫ್ತಾನ್, ಟೀ ಲೆಂಥ್ ಕೋಫ್ತಾನ್, ವೈಬ್ರೆಂಟ್ ವರ್ಣದ ಸಿಲ್ಕ್ ಕಫ್ತಾನ್, ಒಪನ್ ಸ್ಟೈಲ್, ವಿಂಟೇಜ್ ಸ್ಟೈಲ್ ಕಫ್ತಾನ್ ಡ್ರೆಸ್ ಹಾಗೂ ಸೆಟ್‌ಗಳು ಈ ಸಮ್ಮರ್ ಸೀಸನ್‌ನ ಫ್ಯಾಷನ್‌ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿವೆ.

3/5

ಪರ್ಸನಾಲಿಟಿಗೆ ತಕ್ಕಂತೆ ಕಫ್ತಾನ್ ಧರಿಸಿ

ಅವರವರ ಪರ್ಸಾನಾಲಿಟಿಗೆ ತಕ್ಕಂತೆ ಕಫ್ತಾನ್ ಧರಿಸುವುದು ಉತ್ತಮ. ಸ್ಲಿಮ್, ಅಥ್ಲೆಟಿಕ್, ಪಿಯರ್ ಶೇಪ್, ಹವರ್ ಗ್ಲಾಸ್ ಶೇಪ್ ಹೊಂದಿರುವವರಿಗೆ ಕಫ್ತಾನ್ ಸೂಟ್ ಅಥವಾ ಸೆಟ್‌ಗಳು ಮ್ಯಾಚ್ ಆಗುತ್ತವೆ. ಮ್ಯಾಕ್ಸಿ ಕಫ್ತಾನ್‌ಗಳು ಆಪಲ್ ಶೇಪ್ ಇರುವರಿಗೆ ಮಾತ್ರ ಬೆಸ್ಟ್. ಇವುಗಳನ್ನು ಧರಿಸಿದಾಗ ಟಮ್ಮಿ ಭಾಗ ಹೈಲೈಟಾಗುವುದಿಲ್ಲ ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಾಶಿ.

4/5

ಅತ್ಯಾಕರ್ಷಕವಾಗಿ ಕಾಣಿಸುವ ಪ್ರಿಂಟೆಡ್ ಕಫ್ತಾನ್

ಇನ್ನು, ಫ್ಲೋರಲ್ ಹಾಗೂ ಟ್ರಾಪಿಕಲ್ ಪ್ರಿಂಟ್ಸ್‌ನವು ಆಕರ್ಷಕವಾಗಿ ಕಾಣೀಸುತ್ತವೆ. ಫ್ಯಾಮಿಲಿ ಔಟಿಂಗ್, ಮೀಟಿಂಗ್ ಅಥವಾ ಆರಾಮದಾಯಕ ಟ್ರಾವೆಲಿಂಗ್ನಲ್ಲಿ ಈ ಔಟ್‌ಫಿಟ್ ಧರಿಸಬಹುದು. ಇವುಗಳ ಪ್ರಿಂಟ್ಸ್ ಹಾಗೂ ಡಿಸೈನ್ಸ್ ಹೆಚ್ಚು ಹೈಲೈಟ್ ಆಗುವುದರಿಂದ ಆಕ್ಸೆಸರೀಸ್‌ಗಳನ್ನು ಧರಿಸುವ ಅಗತ್ಯ ಇರುವುದಿಲ್ಲ.

5/5

ಕಫ್ತಾನ್ ಸ್ಟೈಲಿಂಗ್ ಹಾಗೂ ಮೇಕೋವರ್ ಹೀಗಿರಲಿ

  • ಹೇರ್‌ಸ್ಟೈಲ್ ಸಿಂಪಲ್ ಆಗಿದ್ದಲ್ಲಿ ಉತ್ತಮ. ಇಲ್ಲವಾದಲ್ಲಿ ಎಲ್ಲವೂ ಮೆಸ್ಸಿಯಾಗಿದ್ದಂತೆ ಕಾಣಬಹುದು.
  • ಕಫ್ತಾನ್‌ಗೆ ಲೇಯರ್ಡ್ ಲುಕ್ ಹೊಂದದು. ನೆನಪಿನಲ್ಲಿರಲಿ.
  • ಕಫ್ತಾನ್ ದೇಹವನ್ನು ಕವರ್ ಮಾಡುತ್ತದೆ.
  • ಗ್ಲಾಮರಸ್ ಲುಕ್ ಕಫ್ತಾನ್‌ನಿಂದ ಸಾಧ್ಯವಿಲ್ಲ.
  • ಸೆಮಿ ಎಥ್ನಿಕ್ ಕೆಟಗರಿಗೆ ಇದು ಸೇರುತ್ತದೆ.

ಶೀಲಾ ಸಿ ಶೆಟ್ಟಿ

View all posts by this author