ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಬೇಸಿಗೆಯಲ್ಲಿ ಟ್ರೆಂಡಿಯಾದ ಫ್ಲೋರಲ್‌ ಕೋ ಆರ್ಡ್‌ ಸೆಟ್‌

Floral co-ord set: ಈ ಸಮ್ಮರ್‌ ಸೀಸನ್‌ನಲ್ಲಿ ಫ್ಲೋರಲ್‌ ಕೋ ಆರ್ಡ್ ಸೆಟ್ಸ್ ಟ್ರೆಂಡಿಯಾಗಿವೆ. ಲೆಕ್ಕವಿಲ್ಲದಷ್ಟು ಬಗೆಯ ಊಹೆಗೂ ಮೀರಿದ ಹೂವಿನ ಚಿತ್ತಾರಗಳಿರುವಂತವು ಮಾರುಕಟ್ಟೆಗೆ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಸ್ಟೈಲಿಂಗ್‌ ಹೇಗೆ? ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್‌
1/5

ಬೇಸಿಗೆಯ ಬಿಸಿಲಲ್ಲಿ ನೋಡಿದಾಕ್ಷಣ ಕೂಲ್‌ ಎಂದೆನಿಸುವ ಹೂಗಳ ಚಿತ್ತಾರವಿರುವ ಫ್ಲೋರಲ್‌ ಕೋ ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ವಯಸ್ಸಿನ ಭೇದ-ಭಾವವಿಲ್ಲದೇ ಮಾನಿನಿಯರನ್ನು ಸವಾರಿ ಮಾಡುತ್ತಿವೆ.

2/5

ಟ್ರೆಂಡಿಯಾಗಿರುವ ಫ್ಲೋರಲ್‌ ಕೋ ಆರ್ಡ್ ಸೆಟ್‌ಗಳಿವು

ಹೌದು, ಈ ಸಮ್ಮರ್‌ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಊಹೆಗೂ ಮೀರಿದ ಹೂವಿನ ಚಿತ್ತಾರಗಳಿರುವ ಕೋ ಆರ್ಡ್ ಸೆಟ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ ರೋಸ್‌, ಟುಲಿಪ್‌, ಸೇವಂತಿಗೆ, ಸೂರ್ಯಕಾಂತಿ, ಲಿಲ್ಲಿ, ಮಲ್ಲಿಗೆ, ಸಂಪಿಗೆ ಹೀಗೆ ದೇಸಿ ಹಾಗೂ ವಿದೇಶೀ ಹೂಗಳ ಪ್ರಿಂಟೆಡ್‌ ಚಿತ್ತಾರದವು ಸಖತ್‌ ಬೇಡಿಕೆ ಸೃಷ್ಟಿಸಿಕೊಂಡಿವೆ. ಮನಸ್ಸಿಗೆ ಮುದ ನೀಡುವಂತಹ ಕಲರ್‌ಫುಲ್‌ ಫ್ಲೋರಲ್‌ ವಿನ್ಯಾಸದ ಕೋ ಆರ್ಡ್ ಸೆಟ್‌ಗಳು ಕೇಪ್ರೀಸ್‌ ಹಾಗೂ ಟೂ ಪೀಸ್‌ ಶೈಲಿಯಲ್ಲಿ ಸದ್ಯ ಚಾಲ್ತಿಯಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ಹಾಲಿಡೇ ಫ್ಯಾಷನ್‌ನಲ್ಲಿ ಕಾಣಿಸಿಕೊಂಡ ಡ್ರೆಸ್‌

ಈ ಫ್ಲೋರಲ್‌ ಕೋ ಆರ್ಡ್ ಸೆಟ್‌ಗಳು ಹಾಲಿಡೇ ಫ್ಯಾಷನ್‌ನಲ್ಲಿ ಸದ್ಯ ಕಾಣಿಸಿಕೊಂಡಿವೆ. ಕಾರಣ, ಇವನ್ನು ಹುಡುಗಿಯರು ಧರಿಸಿದಾಗ ಫೋಟೋಗಳಲ್ಲಿ ರೀಲ್ಸ್‌ನಲ್ಲಿ ನೋಡಲು ಚೆನ್ನಾಗಿ ಕಾಣಿಸುವುದರಿಂದ ಇದನ್ನು ಧರಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಫ್ಲೋರಲ್‌ ಕೋ ಆರ್ಡ್ ಸೆಟ್‌ ಸ್ಟೈಲಿಂಗ್‌ ಟಿಪ್ಸ್

  • ಆದಷ್ಟೂ ನೈಟ್‌ ಡ್ರೆಸ್‌ನಂತೆ ಕಾಣಿಸದಂತವನ್ನು ಆಯ್ಕೆ ಮಾಡಿ.
  • ಹೆಚ್ಚು ಆಕ್ಸೆಸರೀಸ್‌ ಬೇಡ! ಮೆಸ್ಸಿಯಾಗಿ ಕಾಣಿಸಬಹುದು.
5/5
  • ಕೊಂಚ ನೆಕ್‌ಲೈನ್‌ ಡಿಫರೆಂಟಾಗಿ ಇರುವಂತವನ್ನು ಚೂಸ್‌ ಮಾಡಿ. ಯಾಕೆಂದರೇ ಇವು ಮನೆಯಲ್ಲಿ ಧರಿಸುವ ಸೂಟ್‌ನಂತೆ ಕಾಣಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author