ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಮ್ಮರ್‌ನಲ್ಲಿ ಅಲ್ಟ್ರಾ ಮಾಡರ್ನ್‌ ಲುಕ್‌ ನೀಡುವ 3 ಮಿನಿ ಡ್ರೆಸ್‌ಗಳಿವು

Mini Dresses: ಸಮ್ಮರ್‌ನಲ್ಲಿ ಇದೀಗ ಮಿನಿ ಡ್ರೆಸ್‌ಗಳು ಹೈ ಫ್ಯಾಷನ್‌ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿವೆ. ಅಲ್ಟ್ರಾ ಮಾಡರ್ನ್‌ ಲುಕ್‌ ಬಯಸುವ ಹುಡುಗಿಯರನ್ನು ಇವು ಆವರಿಸಿಕೊಂಡಿವೆ. ಅವುಗಳಲ್ಲಿ 3 ಬಗೆಯವು ಸಖತ್‌ ಟ್ರೆಂಡಿಯಾಗಿವೆ. ಅವು ಯಾವುವು? ವಿಶೇ‍ಷತೆಯೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಕೀರ್ತಿ ಚೌಧರಿ, ನಟಿ
1/5

ಬೇಸಿಗೆಯ ಹೈ ಫ್ಯಾಷನ್‌ ಲಿಸ್ಟ್‌ನಲ್ಲಿ ಮಿನಿ ಡ್ರೆಸ್‌ಗಳು ಟಾಪ್‌ ಲಿಸ್ಟ್‌ನಲ್ಲಿವೆ. ಹೌದು, ಅಲ್ಟ್ರಾ ಮಾಡರ್ನ್‌ ಲುಕ್‌ ಬಯಸುವ ಹುಡುಗಿಯರನ್ನು ಇವು ಆವರಿಸಿಕೊಂಡಿವೆ. ಅಲ್ಲದೇ, ಸೆಲೆಬ್ರೆಟಿ ಲುಕ್‌ ಬಯಸುವ ಮಾಡರ್ನ್‌ ಹುಡುಗಿಯರ ಔಟಿಂಗ್‌ ಹಾಗೂ ವೀಕೆಂಡ್‌ ಲಿಸ್ಟ್‌ನಲ್ಲಿ ಇವು ಸೇರಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಕೀರ್ತಿ ಚೌಧರಿಯ ಮಿನಿ ಡ್ರೆಸ್‌ ಕಲೆಕ್ಷನ್‌

ಅತಿ ಹೆಚ್ಚಾಗಿ ಮಿನಿ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುವ ನಟಿ, ಮಾಡೆಲ್‌ ಹಾಗೂ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ಕೀರ್ತಿ ಚೌಧರಿ ತಮ್ಮದೇ ಆದ ಕಲೆಕ್ಷನ್‌ನಿಂದಾಗಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಆಗಾಗ್ಗೆ ಬಗೆಬಗೆಯ ಮಿನಿ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೇ ರೀತಿ ಸಾಕಷ್ಟು ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ಗಳ ಈ ಫ್ಯಾಷನ್ವೇರ್‌ಗಳು ಇನ್ಸ್ಟಾ ಫಾಲೋ ಮಾಡುವ ಟೀನೇಜ್‌ ಮಾಡರ್ನ್‌ ಹುಡುಗಿಯರನ್ನು ಸೆಳೆಯುತ್ತಿವೆ. ಮಿನಿ ಡ್ರೆಸ್‌ಗಳನ್ನು ಟ್ರೆಂಡಿಯಾಗಿಸುತ್ತಿವೆ. ಪರಿಣಾಮ, ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಲು ಕಾರಣವಾಗಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

3/5

ಸ್ಟ್ರಾಪ್‌ಲೆಸ್‌ ಮಿನಿ ಡ್ರೆಸ್

ಸೆಲೆಬ್ರೆಟಿಯಂತೆ ಕಾಣಿಸಲು ಬಯಸುವ ಹುಡುಗಿಯರು ಈ ಶೈಲಿಯ ಮಿನಿ ಡ್ರೆಸ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇವು ಕಾಟನ್‌ನಿಂದಿಡಿದು, ಜಾರ್ಜೆಟ್‌, ಲೆನಿನ್‌, ಶಿಫಾನ್‌ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಆದರೆ, ಪರ್ಸಾನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಎಂಬುದು ಸ್ಟೈಲಿಸ್ಟ್‌ಗಳ ಅಭಿಪ್ರಾಯ.

4/5

ಹಾಲ್ಟರ್‌ ನೆಕ್‌ಲೈನ್‌ ಮಿನಿ ಡ್ರೆಸ್‌

ನೆಕ್‌ಲೈನ್‌ ಡಿಸೈನ್‌ನಿಂದಲೇ ಆಕರ್ಷಕವಾಗಿ ಕಾಣಿಸುವ ಈ ಶೈಲಿಯ ಮಿನಿ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಫ್ಲೋರಲ್‌ ವಿನ್ಯಾಸದಲ್ಲಿ ಅತಿ ಹೆಚ್ಚಾಗಿ ಪ್ರಚಲಿತದಲ್ಲಿವೆ.

5/5

ಕಾರ್ಸೆಟ್‌ ಮಿನಿ ಡ್ರೆಸ್‌

ಮೇಲ್ಭಾಗದ ಭಾಗ ಬಾಡಿ ಫಿಟ್‌ ಆಗಿರುತ್ತದೆ. ಡ್ರೆಸ್‌ನ ಕೆಳಭಾಗ ಲೇಯರ್‌ ಅಥವಾ ರಫಲ್‌ ಡಿಸೈನ್‌ ಹೊಂದಿರುತ್ತವೆ. ಈ ಶೈಲಿಯ ಬಹುತೇಕ ಮಿನಿ ಡ್ರೆಸ್‌ಗಳು ಬಾರ್ಬಿ ಗರ್ಲ್‌ ಲುಕ್‌ ನೀಡುತ್ತವೆ. ಪಾಸ್ಟೆಲ್‌ ಶೇಡ್ಸ್‌ನವಕ್ಕೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಶೀಲಾ ಸಿ ಶೆಟ್ಟಿ

View all posts by this author