ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಮ್ಮರ್‌ ಕೂಲ್‌ ಸ್ಟೈಲಿಂಗ್‌ಗೆ ಇಂಡೋ-ವೆಸ್ಟರ್ನ್‌ ಲುಕ್‌ನ ಗೌನ್‌ ಸಾಥ್‌

Lightweight Gowns: ಸಮ್ಮರ್‌ ಸೀಸನ್‌ನ ಕೂಲ್‌ ಲುಕ್‌ಗೆ ಸಾಥ್‌ ನೀಡುವಂತಹ ಇಂಡೋ-ವೆಸ್ಟರ್ನ್‌ ವಿನ್ಯಾಸದ ಅನಾರ್ಕಲಿ ಗೌನ್‌ನಂತೆ ಕಾಣಿಸುವಂತಹ ಲೈಟ್‌ವೈಟ್‌ ಗೌನ್‌ಗಳು ಎಂಟ್ರಿ ನೀಡಿವೆ. ಏನಿದರ ವಿಶೇ‍ಷತೆ? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಸೋನಮ್ ಬಾಜ್ವಾ, ನಟಿ
1/5

ಬೇಸಿಗೆಯ ಫ್ಯಾಷನ್‌ನಲ್ಲಿ ಕೂಲ್‌ ಆಗಿ ಕಾಣಿಸುವಂತಹ ನೋಡಲು ಅನಾರ್ಕಲಿ ಗೌನ್‌ನಂತೆಯೇ ಕಾಣಿಸುವ ಲೈಟ್‌ವೈಟ್‌ ಎಥ್ನಿಕ್‌ ಗೌನ್‌ಗಳು ಎಂಟ್ರಿ ನೀಡಿವೆ.

2/5

ಇಂಡೋ-ವೆಸ್ಟರ್ನ್‌ ಲುಕ್‌

ಹೌದು, ಈ ಸಮ್ಮರ್‌ ಸೀಸನ್‌ನಲ್ಲಿ ಧರಿಸಿದವರಿಗೆ ಆರಾಮ ಎಂದೆನಿಸುವಂತಹ ಇಂಡೋ-ವೆಸ್ಟರ್ನ್‌ ಶೈಲಿಯ ಅನಾರ್ಕಲಿ ಗೌನ್‌ನಂತೆ ಕಾಣಿಸುವ ಬಾಡಿಕಾನ್‌ ಲೈಟ್‌ವೈಟ್‌ ಗೌನ್‌ಗಳು ಎಂಟ್ರಿ ನೀಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

3/5

ಸೋನಂ ಬಾಜ್ವಾ ಸೇಜ್‌ ಗ್ರೀನ್‌ ಡಿಸೈನರ್‌ವೇರ್

ಅಂದಹಾಗೆ, ಇವೆಂಟ್‌ವೊಂದರಲ್ಲಿ ನಟಿ ಸೋನಂ ಬಾಜ್ವಾ ಧರಿಸಿದ್ದ ಈ ಶೈಲಿಯ ಗೌನ್‌ಗಳು ಸದ್ಯ ಈ ಸೀಸನ್‌ನ ಇಂಡೋ-ವೆಸ್ಟರ್ನ್‌ ಔಟ್‌ಫಿಟ್‌ ಪ್ರಿಯರಿಗೆ ಇಷ್ಟವಾಗಿದೆ. ಅದರಲ್ಲೂ ನೋಡುಗರಿಗೂ ಕೂಲ್‌ ಎಂದೆನಿಸುವ ಈ ಅನಾರ್ಕಲಿ ವಿನ್ಯಾಸದಂತೆ ಕಾಣಿಸುವ ಗೌನ್‌ ಡ್ರೆಸ್‌ ಎಲ್ಲಾ ವಯಸ್ಸಿನ ಮಾನಿನಿಯರಿಗೆ ಇಷ್ಟವಾಗಿದೆ.

4/5

ಅನಾರ್ಕಲಿ ಸ್ಟೈಲ್‌ ಗೌನ್‌ ವಿಶೇಷತೆ

ನೋಡಲು ತಕ್ಷಣಕ್ಕೆ ಅನಾರ್ಕಲಿ ಡ್ರೆಸ್‌ನಂತೆ ಕಂಡರೂ ಇದು ಅದಲ್ಲ! ಇದೇ ಕಾನ್ಸೆಪ್ಟನ್ನು ವೆಸ್ಟರ್ನ್‌ ಸ್ಲೀವ್‌ಲೆಸ್‌ ಔಟ್‌ಫಿಟ್‌ ಜತೆಗೆ ಮಿಕ್ಸ್ ಮ್ಯಾಚ್‌ ಮಾಡಿ ಪ್ರಯೋಗಾತ್ಮಕ ಡಿಸೈನರ್‌ವೇರ್‌ ವಿನ್ಯಾಸಗೊಳಿಸಲಾಗಿದೆ. ಗ್ರ್ಯಾಂಡ್‌ ಲುಕ್‌ ನೀಡುವುದರ ಜತೆಗೆ ಬೇಸಿಗೆಯ ಸೆಕೆಗೆ ಈ ಡ್ರೆಸ್‌ ಕಂಫರ್ಟಬಲ್‌ ಫೀಲ್‌ ನೀಡುತ್ತದೆ. ಹಾಗಾಗಿ ಸಾಕಷ್ಟು ಆನ್‌ಲೈನ್‌ ಬ್ರ್ಯಾಂಡ್‌ಗಳು ಈಗಾಗಲೇ ಈ ಶೈಲಿಯ ಔಟ್‌ಫಿಟ್‌ ಬಿಡುಗಡೆಗೊಳಿಸಿ, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

5/5

ಸ್ಟೈಲಿಂಗ್‌ ಹೇಗೆ?

  • ಕೂಲ್‌ ಲುಕ್‌ಗೆ ಸಾಥ್‌ ನೀಡುವಂತಹ ಆಕ್ಸೆಸರೀಸ್‌ ಧರಿಸಿದರೇ ಸಾಕು!
  • ಸಿಂಪಲ್‌ ಮೇಕಪ್‌ ಮಾಡಿ, ನೋಡಿ!
  • ದುಪಟ್ಟಾ ಇಲ್ಲದಿದ್ದರೂ ಆಕರ್ಷಕವಾಗಿ ಕಾಣಿಸುತ್ತದೆ.
  • ಹೆಚ್ಚು ಮೇಕೋವರ್‌ ಬೇಕಾಗಿಲ್ಲ!

ಶೀಲಾ ಸಿ ಶೆಟ್ಟಿ

View all posts by this author