ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಬೇಸಿಗೆಯಲ್ಲಿ ಹಂಗಾಮ ಎಬ್ಬಿಸಿರುವ 3 ಶೈಲಿಯ ಆಫ್‌ ಶೋಲ್ಡರ್‌ ಡ್ರೆಸ್‌ಗಳಿವು!

ಸಮ್ಮರ್‌ ಬಂದ್ರೆ ಸಾಕು! ಆಫ್‌ ಶೋಲ್ಡರ್‌ ಡ್ರೆಸ್‌ಗಳು ಟ್ರೆಂಡಿಯಾಗುತ್ತವೆ. ಸೀಸನ್‌ನ ಟಾಪ್‌ ಲಿಸ್ಟ್‌ಗೆ ಸೇರುತ್ತವೆ. ಈ ಬಾರಿಯೂ ಕೂಡ 3 ಶೈಲಿಯವು ಹಿಟ್‌ ಲಿಸ್ಟ್ ಸೇರಿವೆ. ಅವು ಯಾವುವು? ಈ ಕುರಿತ ವಿವರ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್‌
1/5

ಬೇಸಿಗೆಯಲ್ಲಿ ಆಫ್‌ ಶೋಲ್ಡರ್‌ ಡ್ರೆಸ್‌ಗಳು ಮರಳಿ ಟ್ರೆಂಡಿಯಾಗಿವೆ. ಪ್ರತಿಬಾರಿಯಂತೆ ಈ ಬಾರಿಯೂ ಟಾಪ್‌ ಲಿಸ್ಟ್‌ಗೆ ಸೇರಿವೆ. ಅವುಗಳಲ್ಲಿ ಈ 3 ಶೈಲಿಯವು ಮಾತ್ರ ಸೂಪರ್‌ ಹಿಟ್‌ ಲಿಸ್ಟ್ ಸೇರಿವೆ. ಟ್ರೆಂಡಿಯಾಗಿವೆ. ಹುಡುಗಿಯರನ್ನು ಸವಾರಿ ಮಾಡುತ್ತಿವೆ.

2/5

ಆಫ್‌ ಶೋಲ್ಡರ್‌ ಕೋ ಆರ್ಡ್ ಸೆಟ್‌

ಈ ಸೀಸನ್‌ನಲ್ಲಿ ಕೋ ಆರ್ಡ್ ಸೆಟ್‌ನ ಆಫ್‌ ಸೆಟ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಟೀನೇಜ್‌ ಹುಡುಗಿಯರ ಅಚ್ಚುಮೆಚ್ಚಿನ ಡ್ರೆಸ್‌ಕೋಡ್‌ನಲ್ಲಿ ಸೇರಿವೆ. ನೋಡಲು ಒಂದೇ ಕಲರ್‌ ಅಥವಾ ಮಾನೋಕ್ರೋಮ್‌ ಡಿಸೈನ್‌ ಇಲ್ಲವೇ ಪ್ರಿಂಟ್ಸ್‌ನಲ್ಲಿ ಲಭ್ಯವಿರುವ ಇವು ಸದ್ಯ ಈ ಸೀಸನ್‌ನ ಸೂಪರ್‌ ಹಿಟ್‌ ಔಟ್‌ಫಿಟ್‌ ಎಂದೇ ಪ್ರಚಲಿತದಲ್ಲಿವೆ.

3/5

ಆಫ್‌ ಶೋಲ್ಡರ್‌ ಫ್ರಾಕ್‌

ಇನ್ನು, ಆಫ್‌ ಶೋಲ್ಡರ್‌ ಫ್ರಾಕ್‌ಗಳು ನಾನಾ ವಿನ್ಯಾಸದಲ್ಲಿ ಈ ಬೇಸಿಗೆಯಲ್ಲಿ ಹಂಗಾಮ ಎಬ್ಬಿಸಿವೆ. ಮಿನಿ ಫ್ರಾಕ್‌, ಮೀ ಲೆಂತ್‌ ಫ್ರಾಕ್‌ಗಳು ಅತಿ ಹೆಚ್ಚು ಯುವತಿಯರನ್ನು ಆಕರ್ಷಿಸಿವೆ. ಅದರಲ್ಲೂ ಹಾಲಿಡೇ ಫ್ಯಾಷನ್‌ನಲ್ಲಿ ಛಾಪು ಮೂಡಿಸಿವೆ. ಅವುಗಳಲ್ಲಿ ಫ್ಲೋರಲ್‌, ಜೆಮೆಟ್ರಿಕ್‌ ಪ್ರಿಂಟ್ಸ್‌ನವು ಸದ್ಯ ಟ್ರೆಂಡ್‌ನಲ್ಲಿವೆ. ಧರಿಸಿದವರನ್ನು ಚೆಂದಗಾಣಿಸುತ್ತಿವೆ.

4/5

ಆಫ್‌ ಶೋಲ್ಡರ್‌ ಮ್ಯಾಕ್ಸಿ ಡ್ರೆಸ್

ಎಲ್ಲಾ ವಯಸ್ಸಿನವರು ಧರಿಸಬಹುದಾದ ಮ್ಯಾಕ್ಸಿ ಆಫ್‌ ಶೋಲ್ಡರ್‌ ಡ್ರೆಸ್‌ಗಳು ಲೆಕ್ಕವಿಲ್ಲದಷ್ಟೂ ಬಗೆಯಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಜಾರ್ಜೆಟ್‌ ಹಾಗೂ ಶಿಫಾನ್‌ ಫ್ಯಾಬ್ರಿಕ್‌ನವು ಈ ಡಿಸೈನ್‌ನಲ್ಲಿ ಹೆಚ್ಚು ಪಾಪುಲರ್‌ ಆಗಿವೆ.

5/5

ಆಫ್‌ ಶೋಲ್ಡರ್‌ ಡ್ರೆಸ್‌ ಪ್ರಿಯರಿಗೆ ಟಿಪ್ಸ್

  • ನಿಮ್ಮ ಪರ್ಸಾನಾಲಿಟಿಗೆ ತಕ್ಕಂತಿರುವುದನ್ನು ಧರಿಸಿ.
  • ಶೋಲ್ಡರ್‌ ಅಗಲವಾಗಿರುವವರಿಗೆ ಚೆನ್ನಾಗಿ ಕಾಣಿಸುತ್ತದೆ.
  • ನೆಕ್‌ಗೆ ಜಂಕ್‌ ಅಥವಾ ಫಂಕಿ ಜ್ಯುವೆಲರಿ ಧರಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author