-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ಆರಂಭವಾಗಿದ್ದೇ ತಡ ಬಾಡಿಕಾನ್ ಡ್ರೆಸ್‌ಗಳು ಸೈಡಿಗೆ ಸರಿದಿವೆ. ಟ್ರೆಂಡಿ ಲಿಸ್ಟ್‌ನಿಂದ ಹೊರಬಿದ್ದಿವೆ. ಹೌದು, ಕಳೆದ ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾಗಿದ್ದ, ಹಾಟ್ ಲುಕ್ ನೀಡುವ ಈ ಟೈಟ್ ಫಿಟ್ ಬಾಡಿಕಾನ್ ಡ್ರೆಸ್‌ಗಳು ಮರೆಯಾಗುವ ಕಾಲ ಬಂದಿದೆ. ಸದ್ಯ ಈ ಸಮ್ಮರ್‌ನಲ್ಲಿ (Summer Fashion 2026) ಬೈ ಬೈ ಹೇಳುವ ಸಮಯ ಬಂದಿದೆ. ಹಾಗಾಗಿ ನಿಮ್ಮ ಬಾಡಿಕಾನ್ ಔಟ್‌ಫಿಟ್‌ಗಳನ್ನು ಮುಂಬರುವ ಸೀಸನ್ ಆಗಮಿಸುವವರೆಗೂ ವಾರ್ಡ್ರೋಬ್‌ನ ಮೂಲೆಗೆ ತೆಗೆದಿಡಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಇದ್ಯಾವ ಬಗೆಯ ಔಟ್‌ಫಿಟ್?
ಅಂದಹಾಗೆ, ದೇಹಕ್ಕೆ ಅಂಟಿಕೊಂಡಂತಿರುವ ಉಡುಗೆಗಳನ್ನು ಬಾಡಿಕಾನ್ ಡ್ರೆಸ್‌ಗಳೆಂದು ಕರೆಯಲಾಗುತ್ತದೆ. ಧರಿಸಿದಾಗ ಬಾಡಿ ಮಾಸ್ ಇಂಡೆಕ್ಸ್ ಹೈಲೈಟಾಗುತ್ತದೆ. ಅದರಲ್ಲೂ ಫಿಟ್ನೆಸ್ ಫ್ರೀಕ್ ಆಗಿದ್ದರಂತೂ ಧರಿಸಿದವರಿಗೆ ಹಾಟ್ ಲುಕ್ ನೀಡುತ್ತವೆ ಈ ಬಾಡಿಕಾನ್ ಡ್ರೆಸ್‌ಗಳು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬಾಲಿವುಡ್ ಸೆಲೆಬ್ರೆಟಿಗಳ ಫೇವರೇಟ್ ಡ್ರೆಸ್
ಬಾಲಿವುಡ್ ಸೆಲೆಬ್ರೆಟಿಗಳಂತೂ ಈ ಬಾಡಿಕಾನ್ ಔಟ್‌ಫಿಟ್‌ಗಳ ಪ್ರೇಮಿಗಳು. ಏರ್‌ಪೋರ್ಟ್ ಲುಕ್‌ನಿಂದಿಡಿದು ಸಾಮಾನ್ಯ ಔಟಿಂಗ್‌ನಲ್ಲಿ ಗ್ಲಾಮರಸ್ ಆದ ಬಾಡಿಕಾನ್ ಮಿನಿ ಫ್ರಾಕ್, ಹಾಲ್ಟರ್‌ನೆಕ್‌ಲೈನ್ ಬಾಡಿಕಾನ್ ಡ್ರೆಸ್, ಕಟೌಟ್ ಬಾಡಿಕಾನ್ ಡ್ರೆಸ್‌ಗಳಂತವನ್ನು ಧರಿಸುತ್ತಾರೆ. ಆ ಮಟ್ಟಿಗೆ ಬಾಲಿವುಡ್‌ನಲ್ಲಿ ಈ ಡ್ರೆಸ್ ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
Summar Fashion 2026: ಸಮ್ಮರ್ ಫ್ಯಾಷನ್‌ಗೆ ಮರಳಿ ಲಗ್ಗೆ ಇಟ್ಟ ವೈವಿಧ್ಯಮಯ ವಿನ್ಯಾಸದ ಸ್ಟ್ರಾಪ್ ಡ್ರೆಸ್
ಬಾಡಿಕಾನ್ ಡ್ರೆಸ್‌ಗಳನ್ನು ಸೈಡಿಗಿರಿಸಿ
ಸದ್ಯ ಈ ಸೀಸನ್‌ನಲ್ಲಿ ಧರಿಸುವುದು ಬೇಡ! ಮುಂಬರುವ ಮಳೆಗಾಲ ಅಥವಾ ಚಳಿಗಾಲದಲ್ಲಿ ಇವಕ್ಕೆ ಹೊಸ ಲುಕ್ ನೀಡಿ ಧರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)