ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Summer Fashion 2026: ಸಮ್ಮರ್‌ನಲ್ಲಿ ಸ್ಕಿನ್ ಟೈಟ್ ಫ್ಯಾಷನ್‌ಗೆ ನೋ ಹೇಳಿ!

ಸಮ್ಮರ್ ಸೀಸನ್‌ನಲ್ಲಿ ಆದಷ್ಟೂ ಸ್ಕಿನ್ ಟೈಟ್ ಉಡುಗೆಗಳಿಗೆ ನೋ ಹೇಳಿ. ಇದು ಸೀಸನ್ನಲ್ಲಿ ಮಿಸ್ ಮ್ಯಾಚ್ ಫ್ಯಾಷನ್ ಆಗುವುದು ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಧಕ್ಕೆ ತರಬಹುದು ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಸಮ್ಮರ್ ಸೀಸನ್‌ನಲ್ಲಿ ಆದಷ್ಟೂ ಸ್ಕಿನ್ ಟೈಟ್ ಉಡುಗೆಗಳಿಗೆ ನೋ ಹೇಳಿ. ಇದು ಸೀಸನ್‌ಗೆ ಮಿಸ್ ಮ್ಯಾಚ್ ಆಗುವುದು ಮಾತ್ರವಲ್ಲ, ಆರೋಗ್ಯಕ್ಕೂ ಧಕ್ಕೆ ತರಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಸಂಶೋಧನೆಯೊಂದರ ವರದಿ

ಸ್ಕಿನ್‌ ಟೈಟ್ ಫ್ಯಾಷನ್ ಅಪರೂಪಕ್ಕೆ ಮಾತ್ರ ಇರಬೇಕೇ ಹೊರತು ರೆಗ್ಯುಲರ್‌ ಫ್ಯಾಷನ್‌ನಲ್ಲಿ ಸೇರಬಾರದು ಹಾಗೆಂದು ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಅಕಾಡೆಮಿಯ ಸಂಶೋಧನೆಯೊಂದು ವರದಿ ಮಾಡಿದೆ.

ಆದರೆ, ಫ್ಯಾಷನ್ ಮಾರುಕಟ್ಟೆಯಲ್ಲಿ ಇದಕ್ಕೆ ಉಲ್ಟಾ ಎಂಬಂತೆ, ಟೈಟ್ ಜೆಗ್ಗಿಂಗ್ಸ್, ಸ್ಕಿನ್‌ ಪ್ಯಾಂಟ್‌, ಸ್ಪೆಗೆಟೀವ್ಸ್, ಸ್ಕರ್ಟ್ಸ್, ಬಾಡಿ ಕಾನ್‌ ಡ್ರೆಸ್‌ಗಳು ಸೇರಿದಂತೆ ಸಾಕಷ್ಟು ಡಿಸೈನರ್‌ವೇರ್‌ಗಳು ಕಾಲಿಟ್ಟಿವೆ. ಅಷ್ಟೇಕೆ! ಸ್ಕಿನ್ ಟೈಟ್ ಡ್ರೆಸ್ ಟ್ರೆಂಡ್ ಇದೀಗ ಟಿಪಿಕಲ್ ಉಡುಪುಗಳ ಮೇಲೂ ಸವಾರಿ ಮಾಡುತ್ತಾ, ಅವುಗಳ ಔಟ್‌ಲುಕ್‌ ಅನ್ನು ಬದಲಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ಆರೋಗ್ಯಕ್ಕೆ ಧಕ್ಕೆಯುಂಟು ಮಾಡುವ ಸ್ಕಿನ್‌ ಟೈಟ್ ಉಡುಗೆಗಳು

ಅಂದಹಾಗೆ, ಸ್ಕಿನ್‌ ಟೈಟ್ ಫ್ಯಾಷನ್ ಪ್ರಿಯರಿಗೆ ಸಂಶೋಧನಾ ವರದಿ ನೀಡಿರುವುದು ಒಂದು ಎಚ್ಚರಿಕೆ ಅಷ್ಟೇ! ಚರ್ಮಕ್ಕೆ ಸೇರಿಸಿ ಹೊಲೆದಂತೆ ಕಾಣುವ ಡ್ರೆಸ್‌ಗಳಿಂದ ಧರಿಸುವವರು ಗ್ಲಾಮರಸ್ ಆಗಿ ಕಾಣಬಹುದು. ಆದರೆ, ಇವು ನರಗಳ ದೌರ್ಬಲ್ಯ ಹಾಗೂ ನರಗಳಲ್ಲಿನ ಬಾವು ಸಮಸ್ಯೆಯನ್ನು ಹುಟ್ಟು ಹಾಕುತ್ತವೆ. ತೊಡೆ ಹಾಗೂ ಬೆನ್ನು ಭಾಗದಲ್ಲಿನ ರಕ್ತ ಸಂಚಾರಕ್ಕೆ ಧಕ್ಕೆಯುಂಟು ಮಾಡುತ್ತವೆ. ತೊಡೆಯ ಭಾಗದಿಂದ ಬೆನ್ನು ಹುರಿಯವರೆಗೆ ವ್ಯಾಪಿಸಿರುವ ನರಗಳ ಮೇಲೆ ಒತ್ತಡ ಹೆಚ್ಚಿಸಿ, ನೋವುಂಟು ಮಾಡುತ್ತವೆ ಎಂದಿದೆ ವರದಿಯ ಸಾರಾಂಶ.

4/5

ಸ್ಕಿನ್ ಟೈಟ್ ಔಟ್‌ಫಿಟ್ಸ್ ಧರಿಸುವುದನ್ನು ಕಡಿಮೆ ಮಾಡಿ

ಇದಕ್ಕೆ ಪೂರಕ ಎಂಬಂತೆ, ಇತ್ತೀಚಿನ ಮತ್ತೊಂದು ಅಧ್ಯಯನವು ಕೂಡ ಇದನ್ನು ಪ್ರೂವ್ ಮಾಡಿದೆ. ಹಾಗಾಗಿ ಕೇವಲ ಸಮ್ಮರ್‌ನಲ್ಲಿ ಮಾತ್ರವಲ್ಲ, ಎಲ್ಲಾ ಸೀಸನ್ನಲ್ಲೂ ಕೂಡ ರೆಗ್ಯುಲರ್ ಆಗಿ ಸ್ಕಿನ್ ಟೈಟ್ ಉಡುಪುಗಳನ್ನು ಅತಿ ಹೆಚ್ಚಾಗಿ ಧರಿಸಬಾರದು ಎನ್ನುತ್ತಾರೆ ಎಕ್ಸ್‌ಪರ್ಟ್ಸ್.

5/5

ಚರ್ಮ ವೈದ್ಯರ ಅಭಿಪ್ರಾಯ

ಬಿಗಿಯಾದ ಉಡುಪುಗಳು ಎಂದಿಗೂ ಆರಾಮ ಎನಿಸಲಾರವು. ಇವುಗಳ ನಿರಂತರ ಬಳಕೆಯಿಂದ ಚರ್ಮಕ್ಕೆ ಒತ್ತಡ ಹೆಚ್ಚಾಗಬಹುದು. ಸುಗಮ ರಕ್ತ ಸಂಚಾರಕ್ಕೆ ಧಕ್ಕೆಯುಂಟಾಗಿ ಮುಂದೊಮ್ಮೆ ಸಮಸ್ಯೆ ಹೆಚ್ಚಾದರೂ ಆಗಬಹುದು ಎನ್ನುತ್ತಾರೆ ಚರ್ಮ ತಜ್ಞರು.

ಸ್ಕಿನ್ ಟೈಟ್ ಉಡುಗೆಗಳ ಪ್ರೇಮಿಗಳೇ ಗಮನಿಸಿ

  • ಪ್ರತಿದಿನ ಹಾಗೂ ರಾತ್ರಿ ವೇಳೆ ಬಿಗಿಯಾದ ಉಡುಪು ಧರಿಸಿ ಮಲಗುವುದು ಆರೋಗ್ಯದಾಯಕವಲ್ಲ.
  • ಬೆಳೆಯುವ ಮಕ್ಕಳಿಗೆ ಬಿಗಿ ಉಡುಪುಗಳನ್ನು ಹಾಕಿಸಬೇಡಿ.
  • ಬಿಗಿಯಾದ ಒಳ - ಹೊರ ಉಡುಪುಗಳು ಚರ್ಮವನ್ನು ನಿಸ್ತೇಜಗೊಳಿಸುತ್ತವೆ.
  • ಬಿಗಿಯಾದ ಉಡುಪುಗಳಿಂದ ಚರ್ಮವ್ಯಾದಿ ಎದುರಾಗಬಹುದು.

ಶೀಲಾ ಸಿ ಶೆಟ್ಟಿ

View all posts by this author